ಭಾರತೀಯ ಚಿತ್ರರಂಗದಲ್ಲಿ (Indian cinema) ಮೂಡಿಬಂದಿರುವ ಪ್ರೀಕ್ವೆಲ್ ಕಥೆಗಳು (Prequel stories) ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿವೆ .ಇಂಥದ್ದೊಂದು ಪ್ರಯತ್ನವೀಗ ಭೈರತಿ ರಣಗಲ್ ( Bhairati Ranagal) ಸಿನಿಮಾದಿಂದ ಆಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದಿದೆ. ಟ್ರೇಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivaraj Kumar) ಅಭಿನಯದ ಭೈರತಿ ರಣಗಲ್ ಚಿತ್ರ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಭರ್ಜರಿ ಪ್ರದರ್ಶನ (Great show) ಕಾಣುತ್ತಿದೆ.
ಮಫ್ತಿ ಸಿನಿಮಾದ ಪ್ರೀಕ್ವೆಲ್ ಆದ ಹಿನ್ನೆಲೆ ಬಿಡುಗಡೆಗೂ ಮುನ್ನವೇ ಭೈರತಿ ರಣಗಲ್ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿತ್ತು. ಅದರಂತೆ, ನಿರ್ದೇಶಕ ನರ್ತನ್ ಅಭಿಮಾನಿಗಳ ನಿರೀಕ್ಷೆಗಳಿಗೆ ನಿರಾಸೆ ಮಾಡದಂತೆ ಭೈರತಿ ರಣಗಲ್ ಸಿನಿಮಾನ್ನು ಅದ್ಭುತವಾದ ಸ್ಕ್ರೀನ್ ಪ್ಲೇ (Screen play) ಜೊತೆಗೆ ಅಷ್ಟೇ ಅಚ್ಚುಕಟ್ಟಾಗಿ ನಿರ್ದೇಶನ (Direction)ಮಾಡಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು (Fans) ಮೆಚ್ಚಿ ಶಿವಣ್ಣನನ್ನು ಕೊಂಡಾಡುತ್ತಿದ್ದಾರೆ.
ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿರುವುದರಿಂದ ಸಿನಿಮಾ ಮೊದಲ ದಿನ ಅಂದಾಜು 2 ಕೋಟಿ ರೂ. ಗಳಿಕೆ ಮಾಡಿದೆ ಎಂದು Sacnilk ವರದಿ ಮಾಡಿದೆ. ಇಂದು (ನವೆಂಬರ್ 16) ಹಾಗೂ ನಾಳೆ (ನವೆಂಬರ್ 17) ವೀಕೆಂಡ್ (Weekend) ಇರೋದರಿಂದ ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡುತ್ತೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರಕ್ಕೆ ಉತ್ತಮ ರೇಟಿಂಗ್ ಕೂಡ ಸಿಕ್ಕಿದೆ.ಎರಡು ಸಾವಿರ ಜನ ರೇಟಿಂಗ್ ನೀಡಿದ್ದು, 9.6 ರೇಟಿಂಗ್ ಸಿಕ್ಕಿದೆ.ನರ್ತನ್ ಅವರ ನಿರ್ದೇಶನದಲ್ಲಿ ಭೈರತಿ ರಣಗಲ್ ಮೂಡಿ ಬಂದಿದೆ. ಸಿನಿಮಾ ಕೊನೆಯಲ್ಲಿ ಮಫ್ತಿ ಚಿತ್ರದಲ್ಲಿ ಏನಾಗಿತ್ತು ಎಂಬುದರ ಝಲಕ್ ತೋರಿಸಲಾಗುತ್ತದೆ.ಸೆಂಚುರಿ ಸ್ಟಾರ್ ಒನ್ ಮ್ಯಾನ್ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ್ದಾರೆ. ನಟಿ ರುಕ್ಮಿಣಿ ವಸಂತ್ ಕಣ್ಣಲ್ಲೇ ಅಭಿನಯಿಸಿರುವ ರೀತಿಗೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಕಳೆದುಹೋಗ್ತಾರೆ. ಇನ್ನು ಹ್ಯಾಟ್ರಿಕ್ ಹೀರೋನ (Hat-trick hero) ಎಂಟ್ರಿ ಸೀನ್ನಿಂದ ಹಿಡಿದು ಕ್ಲೈಮಾಕ್ಸ್ (Climax) ಆಕ್ಷನ್ಸ್ವರೆಗೂ ಒನ್ ಮ್ಯಾನ್ ಶೋ. ಬಾಲಿವುಡ್ ನಟ ರಾಹುಲ್ ಬೋಸ್ ಸ್ಟೀಲ್ ಇಂಡಸ್ಟ್ರಿಯ (Steel Industry) ನಂಬರ್ ಓನ್ ಬ್ಯುಸಿನೆಸ್ ಮ್ಯಾನ್ (Business man) ಆಗಿ ಕಾಣಿಸಿಕೊಂಡಿದ್ದು, ಭೈರತಿ ರಣಗಲ್ಗೆ ಟಕ್ಕರ್ ಕೊಡುವ ಖಳನಟನಾಗಿ ಇಷ್ಟ ಆಗುತ್ತಾರೆ.ಒಟ್ಟಾರೆ ಭೈರತಿ ರಣಗಲ್ ಮಾಸ್ ಅಲ್ಲದೇ ಫ್ಯಾಮಿಲಿ ಎಂಟರ್ಟೈನ್ (Family entertain) ಸಿನಿಮಾ ಅನ್ನೋದು ನೋಡುಗರ ಅಭಿಪ್ರಾಯ.