Chamrajnagar : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಭಾರತ್ ಜೋಡೋ”(Bharat Jodo Yatra enters karnataka) ಯಾತ್ರೆ ಇಂದು ರಾಜ್ಯಕ್ಕೆ ಕಾಲಿಡಲಿದೆ.

ಗಡಿಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ(Bharat Jodo Yatra enters karnataka) ಮೂಲಕ ರಾಜ್ಯವನ್ನು ಪ್ರವೇಶಿಸಲಿರುವ ಯಾತ್ರೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್,
“ರಾಹುಲ್ ಗಾಂಧಿ ಅವರ ನೇತೃತ್ವದ ಐತಿಹಾಸಿಕ ಭಾರತ ಐಕ್ಯತಾ ಯಾತ್ರೆ ಕನ್ನಡ ನೆಲಕ್ಕೆ ಪ್ರವೇಶಿಸುತ್ತಿದೆ. ವಿಳ್ಯದೆಲೆ ಬೆಳೆಗೆ ಹೆಸರಾಗಿರುವ ಗುಂಡ್ಲುಪೇಟೆ ಯಾತ್ರೆಗೆ ವಿಳ್ಯದೆಲೆ ನೀಡಿ ಭರಮಾಡಿಕೊಳ್ಳಲು ಸಜ್ಜಾಗಿದೆ.
Deadly Energy Drink : https://fb.watch/fRkaU8-9tu/
ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಮೊದಲು ಎನಿಸುವಂತಹ ಈ ಯಾತ್ರೆಯಲ್ಲಿ ಹೆಜ್ಜೆ ಹಾಕುವುದು ಹೆಮ್ಮೆಯ ಸಂಗತಿ, ಜೋಡಿಸುವುದು ಅಥವಾ ಕಟ್ಟುವುದು ಎಂಬ ಪ್ರಕ್ರಿಯೆಗಳಿಗೆ ಶ್ರದ್ಧೆ, ಶ್ರಮ, ತ್ಯಾಗ, ತಾಳ್ಮೆ ಎಲ್ಲವೂ ಬೇಕಾಗುತ್ತದೆ. ಅವೆಲ್ಲವುಗಳೊಂದಿಗೆ “ಭಾರತ್ ಜೋಡೋ” ಸಾಗುತ್ತಿದೆ.

ರಾಹುಲ್ ಗಾಂಧಿ ಅವರ ನೇತೃತ್ವದ ಈ ಐತಿಹಾಸಿಕ ಯಾತ್ರೆಯನ್ನು ಸ್ವಾಗತಿಸಲು ಸಕಲ ರೀತಿಯಲ್ಲೂ ಕರುನಾಡು ಸಜ್ಜಾಗಿದೆ. ಬನ್ನಿ, ಸದೃಢ, ಸಂಪನ್ನ ಭಾರತಕ್ಕಾಗಿ ಹೆಜ್ಜೆ ಹಾಕೋಣ. ಭಾರತ ಐಕ್ಯತಾ ಯಾತ್ರೆಯು ಇಂದಿನಿಂದ ಕರ್ನಾಟಕದಲ್ಲಿ ಆರಂಭವಾಗಲಿದ್ದು, ಎಐಸಿಸಿಯಿಂದ ಅನುಮೋದನೆಗೊಂಡ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14ರ ವರೆಗಿನ ಯಾತ್ರೆಯು ರಾಜ್ಯದಲ್ಲಿ ಸಾಗಲಿದೆ.
ಇದನ್ನೂ ಓದಿ : https://vijayatimes.com/sunil-kumar-slams-siddaramaiah/
ಸಂವಿಧಾನದ ಹಕ್ಕುಗಳನ್ನು ರಕ್ಷಿಸಲು, ಸಾರ್ವಜನಿಕ ಸಂಸ್ಥೆಗಳನ್ನು ರಕ್ಷಿಸಲು, ಸಂವಿಧಾನವನ್ನು ರಕ್ಷಿಸಲು, ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮೊಂದಿಗೆ ಹೆಜ್ಜೆ ಹಾಕಿ.
ಇಂದಿನಿಂದ ಕರ್ನಾಟಕದಲ್ಲಿ ”ಭಾರತ್ ಜೋಡೋ” ಆರಂಭವಾಗಲಿದೆ. ಬನ್ನಿ ಭಾಗವಹಿಸೋಣ, ದೇಶವನ್ನು ಒಗ್ಗೂಡಿಸೋಣ” ಎಂದು ಕರೆ ನೀಡಿದೆ.

ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ : ಊಟಿ – ಮೈಸೂರು : ಹಂಗಳ-ಹಂಗಳಪುರ-ಶಿವಪುರ-ಕೋಡಹಳ್ಳಿ-ಅಣ್ಣೂರು ಕೇರಿ – ಗುಂಡ್ಲುಪೇಟೆ ಕೋಡಹಳ್ಳಿ ಸರ್ಕಲ್ ಬಳಿ ಚಾಮರಾಜನಗರ ರಸ್ತೆ.
ಕೇರಳದ ಸುಲ್ತಾನ್ ಬತ್ತೇರಿ – ಮೈಸೂರು : ಗುಂಡ್ಲುಪೇಟೆಯ-ಕಗ್ಗಳದಹುಂಡಿ ಗ್ರಾಮದ ಕ್ರಾಸ್ -ಚೆನ್ನಮಲ್ಲಿಪುರ-ಹೊಂಗಹಳ್ಳಿ-ಮೂಕಹಳ್ಳಿ-ಮುಂಟಿಪುರ-ಬರಗಿ-ದೇಶಿಪುರ-ಆಲತ್ತೂರು.
ಕೇರಳದ ಸುಲ್ತಾನ್ ಬತ್ತೇರಿ – ಊಟಿ : ಗುಂಡ್ಲುಪೇಟೆಯ ಕಗ್ಗಳದಹುಂಡಿ ಕ್ರಾಸ್ – ಬೇರಂಬಾಡಿ-ಬೀಚನಹಳ್ಳಿ-ಲಕ್ಕಿಪುರ-ದೇವರಹಳ್ಳಿ-ಹಂಗಳ.
- ಮಹೇಶ್.ಪಿ.ಎಚ್