Andra Pradesh : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಬೃಹತ್ ಯೋಜನೆಯ ಭಾರತ್ ಜೋಡೋ ಯಾತ್ರೆಯು (Bharat Jodo Yatra on 27th),
ಸದ್ಯ ತೆಲಂಗಾಣದ ಮೆಹಬೂಬ್‌ನಗರದಿಂದ ಇದೇ ಅಕ್ಟೋಬರ್ 27 ರಂದು ಪುನರಾರಂಭಗೊಳ್ಳಲಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಂಬ ಪೂರ್ವಯೋಜನೆ ಯಾತ್ರೆಯು ಪ್ರಾರಂಭವಾಗಿ, ಇದೀಗ 50ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನೇತ್ರತ್ವದಲ್ಲಿ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯ ಕುರಿತು ನಾಯಕರು ಇದೇ ಅಕ್ಟೋಬರ್ 31 ರಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದುವರೆಗೆ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಸೇರಿದಂತೆ (Bharat Jodo Yatra on 27th) ಒಟ್ಟು ನಾಲ್ಕು ರಾಜ್ಯಗಳ 18 ಜಿಲ್ಲೆಗಳಲ್ಲಿ 1,230 ಕಿ.ಮೀ ಕ್ರಮಿಸಿದೆ.
ಯಾತ್ರೆಯು ನಾಂದೇಡ್ ಮೂಲಕ ಮಹಾರಾಷ್ಟ್ರವನ್ನು ಪ್ರವೇಶಿಸುವ ಮೊದಲು ತೆಲಂಗಾಣದ 11 ದಿನಗಳಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ : https://vijayatimes.com/night-walk-or-morning-walk/
ಭಾರತ್ ಜೋಡೋ ಯಾತ್ರೆಯ ಭಾಗವಾಗಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸರಾಸರಿ 21 ಕಿ.ಮೀ. ರೈತರು, ನಿರುದ್ಯೋಗ, ಎಂಎಸ್‌ಎಂಇ ವಲಯ ಮತ್ತು ಬೆಲೆ ಏರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಭಾರತ್ ಜೋಡೋ ಯಾತ್ರೆಯ ಮೂಲಕ ಉಲ್ಲೇಖಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ ಎಂಬುದನ್ನು ಈ ಯಾತ್ರೆಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರಸ್ತಾಪಿಸಿದ್ದಾರೆ.
