ಮುಂಬೈ, ಜ. 22: ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಇದೀಗ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಿಗೂ ಸಹ ಲಸಿಕೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಯ ಪಿ-8 ವಿಮಾನದ ಮೂಲಕ ಮಾರಿಷಸ್‌ಗೆ 1 ಲಕ್ಷ ಡೋಸೇಜ್, ಸೀಶೆಲ್ಗೆ 50 ಸಾವಿರ ಡೋಸೇಜ್ ವ್ಯಾಕ್ಸಿನ್ಗಳನ್ನು ರವಾನಿಸಲಾಗಿದೆ.
ಮೊದಲಿಗೆ ಸೀಶೆಲ್ಸ್ಗೆ ನಂತರ ಮಾರಿಷಸ್‌ಗೆ ಲಸಿಕೆ ತಲುಪಿಸಲಾಗುವುದು. ಮೂರು ದಿನಗಳ ಹಿಂದಷ್ಟೇ ಭೂತಾನ್ ಹಾಗೂ ಮಾನ್ಯಾರ್ಗೆ ವ್ಯಾಕ್ಸಿನ್ ರವಾನಿಸಲಾಗಿತ್ತು.