Rajasthan : ರಾಜಸ್ಥಾನ ಸಚಿವ ಖಚರಿಯಾವಾಸ್ ಭಾರತ್ ಜೋಡೋ ಯಾತ್ರೆಯಲ್ಲಿ (bharath jodo yatre) ಸಾಗುವಾಗ ಹಾರುವ ಡ್ರೋನ್ ತಲೆ ಮೇಲೆ ಬಿದ್ದು ಗಾಯಗೊಂಡಿರುವ ಹಿನ್ನೆಲೆ ಇದೀಗ ಯಾತ್ರೆಯಿಂದ ಹೊರಗುಳಿದಿದ್ದಾರೆ.

ಕಾಂಗ್ರೆಸ್ (bharath jodo yatre) ಪಕ್ಷ ಚುನಾವಣಾ ಸಮಯದ ಬೆನ್ನಲ್ಲೇ ನಡೆಸುತ್ತಿರುವ ಬೃಹತ್ ಭಾರತ್ ಜೋಡೋ ಯಾತ್ರೆಯ ವೇಳೆ ತಲೆ ಮೇಲೆ ಡ್ರೋನ್ ಕ್ಯಾಮರಾ ಆಯಾತಪ್ಪಿ ಬಿದ್ದ ಪರಿಣಾಮ ತಾನು ಗಾಯಗೊಂಡಿದ್ದೇನೆ,
ಎಂದು ರಾಜಸ್ಥಾನದ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ (PratapSingh Khachariyawas) ಮಂಗಳವಾರ ಸುದ್ದಿ ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : https://vijayatimes.com/election-2023-bommai/
ಗಾಯದ ಸಮಸ್ಯೆಯಿಂದ ಕೆಲವು ದಿನಗಳ ಕಾಲ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯ ಎಂದು ಹೇಳಿದ್ದಾರೆ. ಇದೇ ಡಿಸೆಂಬರ್ 10 ರಿಂದ ಭಾರತ್ ಜೋಡೋ ಯಾತ್ರೆಯನ್ನು ಪುನಃ ಪ್ರಾರಂಭಿಸಲಿದ್ದೇನೆ ಮತ್ತು ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಲಿದ್ದೇನೆ ಎಂದು ಖಚರಿಯಾವಾಸ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರದ ಯಾತ್ರೆಯಲ್ಲಿ ಪಕ್ಷದ ಮತ್ತೊಬ್ಬ ಕಾಂಗ್ರೆಸ್ ನಾಯಕರಾದ ರಘುವೀರ್ ಸಿಂಗ್ ಮೀನಾ ಕೂಡ ಕೊಂಚ ಗಾಯಗೊಂಡಿದ್ದು, ಅವರನ್ನು ಜಲಾವರ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಆಸ್ಪತ್ರೆಗೆ ಭೇಟಿ ನೀಡಿ ರಘುವೀರ್ ಮೀನಾ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಇದನ್ನೂ ನೋಡಿ : http://`https://fb.watch/hg6V8u-g2y/ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಭಟನೆ, ಜೋರಾಗಿದೆ !