ಗುತ್ತಿಗೆದಾರ ಸಂತೋಷ ಪಾಟೀಲ್(Santhosh Patil) ಆತ್ಮಹತ್ಯೆಗೆ ಬೆಳಗಾವಿ(Belagavi) ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ(Congress MLA) ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಕೂಡಾ ಕೆ.ಎಸ್ ಈಶ್ವರಪ್ಪರಷ್ಟೇ(KS Eshwarappa) ಕಾರಣ ಎಂದು ಮಾಜಿ ಐಪಿಎಸ್(Former IPS) ಅಧಿಕಾರಿ(Officer) ಮತ್ತು ಎಎಪಿ ನಾಯಕ(AAP Leader) ಭಾಸ್ಕರ್‍ರಾವ್(Bhaskar Rao) ಆರೋಪಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಕಾರಣ ಎನ್ನಲಾಗುತ್ತಿದೆ. ಆದರೆ ಅದೇ ರೀತಿ ಆ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಾ ಅಷ್ಟೇ ಕಾರಣ. 4 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಮಾಹಿತಿ ಕ್ಷೇತ್ರದ ಶಾಸಕಿಗೆ ಇರಲಿಲ್ಲವಾ? ಆದರೆ ಇದೀಗ ಖಾಸಗಿ ಪ್ಲೈಟ್‍ನಲ್ಲಿ ರಾಜ್ಯ ನಾಯಕರನ್ನು ಕರೆದುಕೊಂಡು ಬಂದು ಸಾಂತ್ವನ ಹೇಳುತ್ತಿದ್ದಾರೆ. ಕುಟುಂಬಸ್ಥರ ಮುಂದೆ ಮೊಸಳೆ ಕಣ್ಣಿರು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡು ಅನ್ನುವುದೇ ತಪ್ಪು. ಕೆಲಸವಾದ ಮೇಲೆ ರಾಜಕಾರಣಿಗಳು ಇರ್ತಾರೆ, ತೊಂದರೆ ಕೊಡ್ತಾರೆ. ಆದರೆ ಇದೀಗ ತಮ್ಮ ಪಕ್ಷದ ಮಹಾನ್ ನಾಯಕರನ್ನು ಬೆಂಗಳೂರಿನಿಂದ ಪ್ಲೈಟ್‍ನಲ್ಲಿ ಕರೆಸಿಕೊಂಡು ಸಮಾಧಾನ ಹೇಳಿದರೆ ಏನು ಪ್ರಯೋಜನೆ? ಭ್ರಷ್ಟಾಚಾರ ಎಂಬ ಪ್ರೇತವನ್ನು ನೀವೇ ಸಾಕಿ, ದಷ್ಟಪುಷ್ಟ ಮಾಡಿ, ಈಗ ಮೊಸಳೆ ಕಣ್ಣಿರು ಹಾಕಿದರೆ ಏನು ಬಂತು. ಸಂತೋಷ ಆತ್ಮಹತ್ಯೆಗೆ ನೀವು ಕೂಡಾ ಅಷ್ಟೇ ಕಾರಣ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಆರೋಪಿಸಿದರು.

ಇನ್ನು ರಾಜಕಾರಣಿಗಳ ವಿರುದ್ದ ಪ್ರತಿಭಟನೆ ಮಾಡೋಕೆ ಆಗಲ್ಲ. ಅವರೆಲ್ಲಾ ಸಾಕಷ್ಟು ಪ್ರಭಾವ ಶಾಲಿಯಾಗಿರುತ್ತಾರೆ. ತಮ್ಮ ಪ್ರಭಾವ ಬಳಸಿ ತೊಂದರೆ ಕೊಡ್ತಾರೆ, ಸಸ್ಪೆಂಡ್ ಮಾಡಿಸ್ತಾರೆ, ರಿಮಾರ್ಕ್ ಹಾಕಿಸುತ್ತಾರೆ. ಈಗ ಪ್ರತಿಭಟನೆ ಮಾಡೋದೆ ಅವಿವೇಕಿತನ. ಇಲ್ಲದಿದ್ರೆ ಈ ಸಾವು ಆಗ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.