• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಅಪ್ಪನ ಪುಸ್ತಕಕ್ಕೆ ಅವಮಾನ ಮಾಡಿದರೆ ಸಹಿಸೋದಿಲ್ಲ: ಆನ್‌ಲೈನ್ ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಭಾವನಾ ಬೆಳಗೆರೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ
ಅಪ್ಪನ ಪುಸ್ತಕಕ್ಕೆ ಅವಮಾನ ಮಾಡಿದರೆ ಸಹಿಸೋದಿಲ್ಲ: ಆನ್‌ಲೈನ್ ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಭಾವನಾ ಬೆಳಗೆರೆ
0
SHARES
8
VIEWS
Share on FacebookShare on Twitter
  • ಹೇಳಿ ಹೋಗು ಕಾರಣ ನಕಲಿ (Bhavana Belagere against fake website) ಪ್ರತಿಗಳ ಮಾರಾಟ ಆರೋಪ
  • ಆನ್‌ಲೈನ್ ವೆಬ್‌ಸೈಟ್‌ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧಾರ
  • ಅಮೆಜಾನ್, ಫ್ಲಿಪ್‌ಕಾರ್ಟ್, ಮಿಶೋ ವಿರುದ್ಧ ಭಾವನಾ ಬೆಳಗೆರೆ ಕಾನೂನು ಹೋರಾಟ

ದಿವಂಗತ ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ ಅವರ ಪ್ರಸಿದ್ಧ (Bhavana Belagere against fake website) ಕಾದಂಬರಿ ‘ಹೇಳಿ ಹೋಗು ಕಾರಣ’ ನಕಲಿ ರೂಪದಲ್ಲಿ ಆನ್‌ಲೈನ್‌ನಲ್ಲಿ (Online) ಮಾರಾಟವಾಗುತ್ತಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ, ತಮ್ಮ ತಂದೆಯ ಸಾಹಿತ್ಯಕ್ಕೆ ಆಗುತ್ತಿರುವ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Bhavana Belagere against fake website

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ (Platform) ಮೂಲಕ ನಕಲಿ ಪ್ರತಿಗಳು ಮಾರಾಟವಾಗುತ್ತಿದ್ದು, ಓದುಗರಿಗೆ (Bhavana Belagere against fake website) ಮೋಸವಾಗುತ್ತಿದೆ ಎಂಬ ಆರೋಪದೊಂದಿಗೆ ನ್ಯಾಯಾಲಯದ ಮೆಟ್ಟಿಲೇರಲು ಭಾವನಾ ಬೆಳಗೆರೆ ನಿರ್ಧರಿಸಿದ್ದಾರೆ.

ತಂದೆ ಬದುಕಿಲ್ಲದ ನಂತರ ಅವರ ಹೆಸರನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಭಾವನಾತ್ಮಕ ನೋವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸಿದ್ದಾರೆ.

ಭಾವನಾ ಬೆಳಗೆರೆ ಹೇಳುವಂತೆ, ‘ಹೇಳಿ ಹೋಗು ಕಾರಣ’ ಕಾದಂಬರಿಯ ಅಧಿಕೃತ ಮುದ್ರಣ ಭಾವನಾ ಪ್ರಕಾಶನದಿಂದ ಮಾತ್ರ ನಡೆಯುತ್ತದೆ.

ಆದರೆ ಅಮೆಜಾನ್, ಫ್ಲಿಪ್‌ಕಾರ್ಟ್ (Flipkart) ಹಾಗೂ ಮಿಶೋ ಮುಂತಾದ ದೊಡ್ಡ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಭಾವನಾ ಪ್ರಕಾಶನದಿಂದ ಪ್ರಕಟವಾದ ಪುಸ್ತಕಗಳ ಬದಲು ಕಡಿಮೆ ಗುಣಮಟ್ಟದ, ನಕಲಿ ಹಾಗೂ ಸ್ಕ್ಯಾನ್ ಪ್ರತಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಈ ಪ್ರತಿಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಓದುಗರಿಗೆ ಇದು ಮೂಲ ಪ್ರತಿಯೇ ಎಂಬ ಭ್ರಮೆ ಉಂಟಾಗುತ್ತಿದೆ. ಅತ್ಯಂತ ಕಳಪೆ ಕಾಗದ, ಮುದ್ರಣ ದೋಷಗಳು ಹಾಗೂ ಸ್ಪಷ್ಟತೆಯ ಕೊರತೆಯಿರುವ ಈ ನಕಲಿ ಪ್ರತಿಗಳು ಲೇಖಕರ ಗೌರವಕ್ಕೂ ಧಕ್ಕೆಯಾಗುತ್ತಿದೆ ಎಂದು ಭಾವನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾವನಾ ಬೆಳಗೆರೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮೂಲ ಪುಸ್ತಕ ಮತ್ತು ನಕಲಿ ಪುಸ್ತಕಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಇದನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ. ಇದು ಸ್ಪಷ್ಟವಾದ ಕೃತಿ ಚೌರ್ಯ.

ತಂದೆಯ ಹೆಸರಿನಲ್ಲಿ ಇಂಥ ಅಪರಾಧ ನಡೆಯುತ್ತಿರುವಾಗ ನಾನು ಮೌನವಾಗಿರಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಅಮೆಜಾನ್ ಸ್ಕ್ಯಾನ್ (Amazon Scan) ಕಾಪಿಗಳನ್ನು ಮಾರಾಟ ಮಾಡುತ್ತಿದೆ ಎಂಬ ಆರೋಪದೊಂದಿಗೆ, ಪ್ರತಿ ವೆಬ್‌ಸೈಟ್‌ ವಿರುದ್ಧವೂ ಒಂದು ಕೋಟಿ ರೂಪಾಯಿ ಕೃತಿ ಚೌರ್ಯ ಮೊಕದ್ದಮೆ ದಾಖಲಿಸುವುದಾಗಿ ಭಾವನಾ ಬೆಳಗೆರೆ ಎಚ್ಚರಿಕೆ ನೀಡಿದ್ದಾರೆ.

ನನಗೆ ಉತ್ತರ ಬೇಕು, ನನಗೆ ನ್ಯಾಯ ಬೇಕು. ಅಮಾಯಕ ಓದುಗರಿಗೆ ಮೋಸ ಆಗುತ್ತಿದೆ. ಇದರ ಹೊರೆ ನಮ್ಮ ಮೇಲೇ ಬೀಳುತ್ತಿದೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾವನಾ ಬೆಳಗೆರೆ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಓದುಗರು ಹಾಗೂ ಅಭಿಮಾನಿಗಳು ಆನ್‌ಲೈನ್ ವೆಬ್‌ಸೈಟ್‌ಗಳ ಕ್ರಮವನ್ನು ತೀವ್ರವಾಗಿ ಖಂಡಿಸಿ, ಭಾವನಾ ಬೆಳಗೆರೆ ತೆಗೆದುಕೊಂಡಿರುವ ಕಾನೂನು ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆದರೆ ಕೆಲವರು ಆನ್‌ಲೈನ್‌ನಲ್ಲಿ ಪುಸ್ತಕ ಕಡಿಮೆ ಬೆಲೆಗೆ ಸಿಗುತ್ತದೆ, ಕಥೆಯೇ ಮುಖ್ಯ, ಗುಣಮಟ್ಟ ಅಷ್ಟೊಂದು ಮುಖ್ಯವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಭಾವನಾ ಬೆಳಗೆರೆ, ತಂದೆಯ ಹೆಸರಿನಲ್ಲಿ ಕಳಪೆ ಪ್ರಿಂಟ್ ಮಾರಾಟವಾದರೆ, ಜನರು ನಮಗೆ ತಪ್ಪು ಹೇಳುತ್ತಾರೆ. ಅವರ ಸಾಹಿತ್ಯಕ್ಕೆ ಗೌರವ ಉಳಿಸಿಕೊಳ್ಳುವುದು ನನ್ನ ಹೊಣೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಚಾರ ಈಗ ಕಾನೂನು ಹಂತಕ್ಕೆ ಹೋಗುವ ಸಾಧ್ಯತೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಆನ್‌ಲೈನ್ ಪುಸ್ತಕ ಮಾರಾಟದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

Tags: Bookfakeravibelagerewebsite

Related News

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ
ಪ್ರಮುಖ ಸುದ್ದಿ

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ

March 11, 2026
ಬೆಲೆ ಕಡಿಮೆ, ಮೈಲೇಜ್ ಹೆಚ್ಚು: ಮಧ್ಯಮ ವರ್ಗದವರಿಗಾಗಿ ಭಾರತದಲ್ಲಿ ಮಾರಾಟವಾಗುವ ಟಾಪ್ 5 ಮೈಲೇಜ್ ಬೈಕ್‌ಗಳು
ಪ್ರಮುಖ ಸುದ್ದಿ

ಬೆಲೆ ಕಡಿಮೆ, ಮೈಲೇಜ್ ಹೆಚ್ಚು: ಮಧ್ಯಮ ವರ್ಗದವರಿಗಾಗಿ ಭಾರತದಲ್ಲಿ ಮಾರಾಟವಾಗುವ ಟಾಪ್ 5 ಮೈಲೇಜ್ ಬೈಕ್‌ಗಳು

March 11, 2026
ಸ್ನೇಹ ಬೇರೆ, ವ್ಯವಹಾರ ಬೇರೆ: ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಡಲು ಪ್ಲಾನ್ ಮಾಡಿದ ರಷ್ಯಾ
ದೇಶ-ವಿದೇಶ

ಸ್ನೇಹ ಬೇರೆ, ವ್ಯವಹಾರ ಬೇರೆ: ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಡಲು ಪ್ಲಾನ್ ಮಾಡಿದ ರಷ್ಯಾ

March 11, 2026
ಮಹಿಳಾ ಸರ್ಕಾರಿ ನೌಕರರಿಗೆ ‘ಕಮ್ ಅರ್ಲಿ – ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಹೆಜ್ಜೆ
ದೇಶ-ವಿದೇಶ

ಮಹಿಳಾ ಸರ್ಕಾರಿ ನೌಕರರಿಗೆ ‘ಕಮ್ ಅರ್ಲಿ – ಗೋ ಅರ್ಲಿ’ ಯೋಜನೆ: ಮಹಾರಾಷ್ಟ್ರ ಸರ್ಕಾರದ ಹೊಸ ಹೆಜ್ಜೆ

March 11, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.