Hassan: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಾಳಗಕ್ಕೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ (bhavani revanna vs swaroop) ಹಾಸನದಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು
ರೇವಣ್ಣ ಪತ್ನಿ ಭವಾನಿ ರೇವಣ್ಣ(Bhavani Revanna) ಅವರು ಬಹಿರಂಗವಾಗಿ ನೀಡಿದ್ದ ಹೇಳಿಕೆ ಪಕ್ಷದೊಳಗೆ ಭಾರೀ ಗೊಂದಕ್ಕೆ ಕಾರಣವಾಗಿತ್ತು.
ಎಚ್.ಡಿ.ಕುಮಾರಸ್ವಾಮಿ ಅವರು ಈ ಹೇಳಿಕೆಯನ್ನು ಪರೋಕ್ಷವಾಗಿ ತಳ್ಳಿಹಾಕಿದ್ದರು. ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕರೆಲ್ಲಾ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಹಾಸನದಲ್ಲಿ ಸ್ವರೂಪ ಪ್ರಕಾಶ್ ಸಮರ್ಥ (Swaroop Prakesh Samarth)ಅಭ್ಯರ್ಥಿಯಾಗಿದ್ದು,
ಅವರನ್ನು ಬದಲಾವಣೆ ಮಾಡುವ ಪ್ರಶ್ನೆ ನಮ್ಮ ಮುಂದಿಲ್ಲ ಎನ್ನುವ ಮೂಲಕ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ನೀಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದರು.

ಹಾಸನ ಟಿಕೆಟ್‌ಗೊಂದಲಕ್ಕೆ ದೇವೇಗೌಡರು(Devegowda) ಮಧ್ಯಪ್ರವೇಶ ಮಾಡುವ ಮೂಲಕ ಅಂತಿಮ ತೆರೆ ಎಳೆಯುತ್ತಾರೆ ಎಂದು ಹೇಳಲಾಗಿತ್ತಾದರೂ,
ಇಂದಿಗೂ ಈ ಕುರಿತು ದೇವೇಗೌಡರು ಕೂಡಾ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಕಳೆದ ಆರು ತಿಂಗಳಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಓಡಾಟ ನಡೆಸಿ, ಸ್ವರೂಪ ಪ್ರಕಾಶ್ (bhavani revanna vs swaroop) ಪಕ್ಷ ಸಂಘಟನೆ ಮಾಡಿದ್ದಾರೆ.
ಆದರೆ ಇದೀಗ ಕ್ಷೇತ್ರದಲ್ಲಿ ಭವಾನಿ ರೇವಣ್ಣ ನೇತೃತ್ವದಲ್ಲಿ ರೇವಣ್ಣ ಫ್ಯಾಮಿಲಿ ಕೂಡಾ ಹೆಚ್ಚು ಪ್ರಚಾರ ನಡೆಸುತ್ತಿರುವುದು ಸ್ವರೂಪ ಅಸಮಾಧಾನಕ್ಕೆ ಕಾರಣವಾಗಿದೆ.
ಭವಾನಿ ರೇವಣ್ಣ(Bhavani Revanna) ಅವರಿಗೆ ಜೆಡಿಎಸ್‌ಟಿಕೆಟ್‌ನೀಡಿದರೆ ನಾನೇನು ಮಾಡಬೇಕು ಎಂಬ ಬಗ್ಗೆ ಸ್ವರೂಪ ಪ್ರಕಾಶ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಸ್ವರೂಪ ಮುಂದಿರುವ ಆಯ್ಕೆಗಳೆಂದರೆ,

• ಹಾಸನದಿಂದಲೇ ನನಗೆ ಟಿಕೆಟ್‌ನೀಡುವಂತೆ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಪಟ್ಟು ಹಿಡಿಯುವುದು.
• ಭವನಿ ರೇವಣ್ಣ ಅವರೊಂದಿಗೆ ಸಂಧಾನ ಮಾಡಿಕೊಂಡು, ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು, ಎಂಎಲ್‌ಸಿ ಸ್ಥಾನ ನೀಡುವಂತೆ ಷರತ್ತು ಹಾಕುವುದು.
• ಜೆಡಿಎಸ್‌ಪಕ್ಷವನ್ನು ತೊರೆದು, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದು.
• ಬಹಿರಂಗವಾಗಿ ಭವಾನಿ ರೇವಣ್ಣ ಅವರನ್ನು ಬೆಂಬಲಿಸಿ ತೆರೆಮರೆಯಲ್ಲಿ ಭವಾನಿ ರೇವಣ್ಣ ಅವರನ್ನು ಸೋಲಿಸುವ ತಂತ್ರಗಾರಿಕೆ ಮಾಡುವುದು.
• ಹಾಸನ ಕ್ಷೇತ್ರಕ್ಕೆ ಬದಲಾಗಿ ಜೆಡಿಎಸ್‌ಪ್ರಬಲವಾಗಿರುವ ಬೇರೆ ಕ್ಷೇತ್ರದಿಂದ ಟಿಕೆಟ್‌ನೀಡುವಂತೆ ಕೇಳುವುದು.
• ಎಂಎಲ್‌ಸಿ ಸ್ಥಾನ ನೀಡಬೇಕೆಂಬ ಷರತ್ತಿನ ಮೇಲೆ ಬಿಜೆಪಿ ಸೇರಿ, ಪ್ರೀತಂ ಗೌಡರನ್ನು ಬೆಂಬಲಿಸುವುದು.