ಪರಿಸರ ಪರಿವಾರ : ಗಂಡು ಭೂತಾಳೆ/ ಕತ್ತಾಳೆ ಹಿಂದೆ ಹಳ್ಳಿಯಲ್ಲಿ ಬೇಲಿಗಾಗಿ ಬಳಸುತ್ತಿದ್ದ ಪ್ರಮುಖ ಗಿಡ ಈ ಭೂತಾಳೆ.
ಊರ ಕಡೆ ಚಿಕ್ಕಗಾತ್ರದ, ಹಸಿರಿನಿಂದ ಕೂಡಿದ, ಸ್ವಲ್ಪ ನಾಜೂಕಾದ ಭೂತಾಳೆಗೆ ಹೆಣ್ಣು ಭೂತಾಳೆ ಅಂತಲೂ, ದೊಡ್ಡ ಗಾತ್ರದ, ಭೂದು ಬಣ್ಣದ, ಸ್ವಲ್ಪ ಒರಟಾದ ಭೂತಾಳೆಗೆ ಗಂಡು ಭೂತಾಳೆ ಎಂತಲೂ ಕರೆಯುತ್ತಾರೆ.
ಅವುಗಳ ಗುಣಗಳ ಆಧಾರದಲ್ಲಿಯೇ ಅವುಗಳ ಲಿಂಗ ನಿರ್ಧಾರ ಮಾಡೋ ಚಾಣಾಕ್ಷರು ನಮ್ಮ ಹಳ್ಳಿಗರು. ವಾಸ್ತವವಾಗಿ ಬಹುತೇಕ ಗಿಡಗಳಲ್ಲಿ ಗಂಡು ಗಿಡ, ಹೆಣ್ಣು ಗಿಡ ಅಂತ ಯಾವುವು ಇಲ್ಲ!

ಭೂತಾಳೆಯಲ್ಲಿ ಕೆಳಗಿನ ಚಿತ್ರದಲ್ಲಿಯಂತೆ ಒಂದು ನೇರವಾದ ಮರ ಬೆಳೆಯುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಅವು ಎಲ್ಲೆಡೆ ಸಾಮೂಹಿಕವಾಗಿ ಬೆಳೆಯುತ್ತವೆ. https://vijayatimes.com/bhagwanth-mann-second-marriage/ ಹಿಂದೆ ಭೂತಾಳೆ ಗಿಡವನ್ನು ಬಹಳ ವೈವಿಧ್ಯಮಯ ಕೆಲಸಗಳಿಗೆ ಬಳಸಲಾಗುತ್ತಿತ್ತು.
ಕೈಹಂಚಿನ ಮನೆಯನ್ನು ವರ್ಷಕ್ಕೊಮ್ಮೆ ಕೈಯಾಡಿಸುವಾಗ ಬಿದಿರಿನ ಗಳಕ್ಕೆ ಹಗ್ಗ ಕಟ್ಟಲು ಇದರ ಹಂಬನ್ನೆ ಬಳಸಲಾಗುತ್ತಿತ್ತು. ರಾಗಿ ಕುಯ್ದಾಗ, ಅದರ ಕಂತೆ ಕಟ್ಟಲು, ಹುಲ್ಲು ಕುಯ್ದಾಗ ಅದನ್ನು ಕಟ್ಟಲು, ಕೆಲವೊಮ್ಮೆ ಹಗ್ಗ ಮಾಡಲು ಹೀಗೆ ಹಲವು ಕೆಲಸಕ್ಕೆ ಇದರ ಉದ್ದವಾದ ಗರಿಗಳನ್ನು ಬಳಸಲಾಗುತ್ತಿತ್ತು.
ಇನ್ನು ಇದರ ಗಳ (ಮರ) ಗಳನ್ನು ಕೂಡ ಬೇರೆ ಬೇರೆ ಕಾರ್ಯಗಳಗೆ ಬಳಸಿಕೊಳ್ಳಲಾಗುತ್ತಿತ್ತು. ಈ ಭೂತಾಳೆಯ ಮೂಲ ಮೆಕ್ಸಿಕೊ.
ಅಲಂಕಾರಿಕ ಗಿಡವಾಗಿ ವಿಶ್ವದ ಬೇರೆ ಬೇರೆ ಪ್ರದೇಶಗಳಿಗೆ ಪರಿಚಯವಾದ ಈ ಗಿಡ ನಮ್ಮಲ್ಲಿ ಬಹುಪಯೋಗಿ ಗಿಡವಾಗಿ ಬದಲಾದದ್ದು ಉತ್ತಮ ಬೆಳವಣಿಗೆ ಎನ್ನಬಹುದು.
- ಸಂಜಯ್ ಹೊಯ್ಸಳ