ಹೊಸದಿಲ್ಲಿ, ಫೆ. 22: ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ದೇಶಾದ್ಯಂತ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾಧ್ರಾ, ಸೈಕಲ್ ಸವಾರಿ ಮಾಡುವ ಮೂಲಕ ತೈಲ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ದೆಹಲಿಯ ಖಾನ್ ಮಾರ್ಕೆಟ್ ನಿಂದ ತಮ್ಮ ಕಚೇರಿಗೆ ಸೈಕಲ್ ಸವಾರಿ ಮಾಡಿದ ರಾಬರ್ಟ್ ವಾಧ್ರಾ, ಆ ಮೂಲಕ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿ, ಅಸಮಾಧಾನ ಹೊರ ಹಾಕಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನೀವು (ಪ್ರಧಾನಮಂತ್ರಿ) ನಿಮ್ಮ AC ಕಾರಿನಿಂದ ಹೊರ ಬನ್ನಿ. ಜನ ಯಾವ ರೀತಿ ತೊಂದರೆ ಅನುಭವಿಸುತ್ತಿದ್ದಾರೆ ಅನ್ನೋದನ್ನ ಗಮನಿಸಿ. ಆ ಬಳಿಕವಾದರೂ ತೈಲ ಬೆಲೆಯನ್ನು ಕಡಿಮೆ ಮಾಡಬಹುದು. ಎಲ್ಲದಕ್ಕೂ ಹಿಂದಿನ ಸರ್ಕಾರವನ್ನು ದೂರುವುದು ತಪ್ಪುತ್ತದೆ ಎಂದು ಟೀಕಿಸಿದ್ದಾರೆ.