ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಾಗಡಿ ರಸ್ತೆಯ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಜಯಶ್ರೀ ರಾಮಯ್ಯ ಅವರು ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರವಾಗಿ ನಟ ಸುದೀಪ್ ಕೂಡ ಬುದ್ಧಿ ಹೇಳಿದ್ದರು. ಆದರೇ ಇಂದು ನೇಣು ಹಾಕಿಕೊಂಡಿದ್ದಾರೆ.
ಮಾಗಡಿ ರಸ್ತೆಯ ಪ್ರಗತಿ ಲೇಔಟ್‌ನಲ್ಲಿನ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನೇಣು ಹಾಕಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕುಟುಂಬದಿಂದ ದೂರ ಇದ್ದ ಆಕೆ ವೃದ್ಧಾಶ್ರಮದಲ್ಲಿದ್ದರು. ರೂಮ್‌ನಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆ ರಹಸ್ಯ ಹೊರಬರಬೇಕಿದೆ.
ಬಿಗ್‌ಬಾಸ್ 3ರ ಸ್ಪರ್ಧೆಯಲ್ಲಿ ಆಕೆ ಕಂಟೆಸ್ಟ್ ಮಾಡಿದ್ದರು. ಇತ್ತೀಚೆಗೆ ಆಕೆ ಸಿನಿಮಾ ರಂಗದಿಂದ ಕೂಡ ದೂರ ಉಳಿದಿದ್ದರು. ಒಂದು ಮೂಲಗಳ ಪ್ರಕಾರ ಆಕೆಗೆ ಆಫರ್‌ಗಳು ಕೂಡ ಕಡಿಮೆಯಾಗಿದ್ದವರು ಎಂದು ಹೇಳಲಾಗುತ್ತಿದೆ.