Hassan : ಹಾಸನದ ಅರಸೀಕೆರೆ (Araseikere of Hassan) ರಸ್ತೆಯ ಎಸ್ ಎಂ ಕೃಷ್ಣ ನಗರದಲ್ಲಿ (SM Krishna Nagar) ಇಂದು ಕಾಂಗ್ರೆಸ್ (Congress) ಬೃಹತ್ ಶಕ್ತಿ ಪ್ರದರ್ಶನ ಆಯೋಜಿಸಿದ್ದು, ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಬೃಹತ್ ಜನ ಕಲ್ಯಾಣ ಸಮಾವೇಶ ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿರುವ ಈ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (CM Siddaramaiah, DCM DK Shivakumar) ಮಾತ್ರವಲ್ಲದೇ, ಸಚಿವರುಗಳಾದ ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಎಚ್ ಸಿ ಮಹಾದೇವಪ್ಪ, ಮುನಿಯಪ್ಪ, ಸತೀಶ್ ಜಾರಕಿಹೊಳಿ (KJ George, Priyank Kharge, HC Mahadevappa, Muniyappa, Satish Jarakiholi)ಸಹಿತ ಇಡೀ ಸಚಿವ ಸಂಪುಟವೇ ಭಾಗಿಯಾಗಿ.ವಿಪಕ್ಷಗಳಿಗೆ ಟಕ್ಕರ್ ನೀಡಲಿದ್ದಾರೆ.
ಈ ಜನಕಲ್ಯಾಣ ಸಮಾವೇಶದಲ್ಲಿ ಸಚಿವ ಸಂಪುಟದ ಬಹುತೇಕ ಎಲ್ಲಾ ಸಚಿವರು ಭಾಗಿಯಾಗಲಿದ್ದು, ಸರ್ಕಾರದ ವಿರುದ್ದ ನಿರಂತರ ಹೋರಾಟ (Constant struggle) ನಡೆಸಿದ್ದ ವಿಪಕ್ಷಗಳಿಗೆ ಟಕ್ಕರ್ ಕೊಡಲು ಈ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಇಂದು ಹಾಸನದ ಎಸ್ ಎಂ.ಕೃಷ್ಣ (Hassanada SM Krishna) ನಗರದಲ್ಲಿ ನಡೆಯಲಿರುವ ಬೃಹತ್ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶಕ್ಕೂ ಮುನ್ನ ವೇದಿಕೆಗೆ ಆಗಮಿಸಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರು ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಯನ್ನು ನಡೆಸಿದ್ದಾರೆ.
ಹಳೆ ಮೈಸೂರು ಭಾಗದ ಜೆಡಿಎಸ್ (JDS) ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ಪಾಳಯದ ಶಕ್ತಿ ಪ್ರದರ್ಶನ ಇಂದು ನಡೆಯಲಿದ್ದು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು (Hassan, Mandya, Mysore, Chamarajanagar, Kodagu, Chikkamagaluru) ಜಿಲ್ಲೆಗಳಿಂದ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆಯಿದೆ. ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರು ಭಾಗವನ್ನು ಕಾಂಗ್ರೆಸ್‌ನ ತೆಕ್ಕೆಗೆ ಎಳೆದುಕೊಳ್ಳಲು ಕಾಂಗ್ರೆಸ್ ಕಹಳೆ ಊದಿದೆ. ಹೀಗಾಗಿ ಇಂದಿನ ಕಾಂಗ್ರೆಸ್ ಸಮಾವೇಶ ತೀವ್ರ ಕುತೂಹಲ ಕೆರಳಿಸಿದೆ.ಹಾಸನದಲ್ಲಿ ಇಂದು ನಡೆಯಲಿರುವ ಸಮಾವೇಶಕ್ಕೆ ಜನರನ್ನು ಕರೆತರಲು 1500ಕ್ಕೂ ಹೆಚ್ಚು ಸಾರಿಗೆ ಬಸ್‌ಗಳನ್ನು ನಿಯೋಜಿಸಲಾಗಿದ್ದು, ಹಾಸನ ನಗರದ ರೈಲ್ವೆ ನಿಲ್ದಾಣದ (Hassan Nagar Railway Station) ಬಳಿಯಿಂದ ನೂರಾರು ಬಸ್‌ಗಳು ಜನರನ್ನು ಕರೆತರಲು ಹೊರಟಿದೆ.ಆ ಮೂಲಕ ಸಮಾವೇಶದಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ (Show of strength) ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಎಸ್. ಎಂ.ಕೃಷ್ಣ ನಗರದಲ್ಲಿ ನಡೆಯಲಿರುವ ಜನಕಲ್ಯಾಣ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ.