Bangalore: ಮೈಸೂರಿನ ಮುಡಾ ಹಗರಣದಲ್ಲಿ (Mysore Muda scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ದ ತನಿಖೆಗೆ ಆದೇಶ ನೀಡಿ ರಾಜ್ಯಪಾಲರು (Governor) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ (High Court) ಎತ್ತಿ ಹಿಡಿದಿದೆ. ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಷಿಕ್ಯೂಷನ್ (Prosecution) ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಸರಿಯಾಗಿದೆ ಎಂದು ನ್ಯಾಯಮೂರ್ತಿ (Justice) ನ್ಯಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶ ನೀಡಿ, ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ (RIT) ಅರ್ಜಿಯನ್ನು ತಿರಸ್ಕರಿಸಿದೆ.
ಹೈಕೋರ್ಟ್ ಹೇಳಿದ್ದೇನು? (What did the High Court say?)
ರಾಜ್ಯಪಾಲರು (Governor) ಸಾಕಷ್ಟು ವಿವೇಚನೆ ಬಳಸಿ ಮುಖ್ಯಮಂತ್ರಿಗಳ (Chief Ministers) ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಒಪ್ಪಿಕೊಳ್ಳಬೇಕೆಂದಿಲ್ಲ. ಅವರು ತಮ್ಮ ವಿವೇಚನೆ ಬಳಸಿ ಆದೇಶ ನೀಡಬಹುದು. ಪ್ರಾಸಿಕ್ಯೂಷನ್ಗೆ (prosecution) ಅನುಮತಿ ನೀಡುವಲ್ಲಿ, ರಾಜ್ಯಪಾಲರು ಸರಿಯಾದ ಕ್ರಮವನ್ನು ಅನುಸರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಪೀಠ ವಜಾ (Dismissal) ಮಾಡುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.