Bengaluru: ಕಳಪೆ ಗುಣಮಟ್ಟದ ಔಷಧಗಳಿಂದಾಗಿ ರಾಜ್ಯದ ಕೆಲವೆಡೆ ಬಾಣಂತಿಯರ ಸಾವಿನ ಪ್ರಕರಣ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ, ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಕಳಪೆ ಗುಣಮಟ್ಟದ ಔಷಧಗಳ (Poor quality medicines) ವಿರುದ್ಧ ಸಮರ ಸಾರಲು ಆರೋಗ್ಯ ಇಲಾಖೆ (Department of Health) ಮುಂದಾಗಿದೆ. ಈ ಬೆನ್ನಲ್ಲೇ ಕಳಪೆ ಗುಣಮಟ್ಟದ ಔಷಧ ನೀಡುತ್ತಿದ್ದ ಕಂಪನಿಗಳಿಗೆ ಶಾಕ್ ಕೊಡಲು ರಾಜ್ಯ ಸರ್ಕಾರ (State Govt) ಪ್ಲಾನ್ ಮಾಡಿದೆ. ಇದಕ್ಕಾಗಿಯೇ ಕಠಿಣ ಕಾನೂನು (Strict law) ರೂಪಿಸಲು ಮುಂದಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆ 9 ಔಷಧಗಳನ್ನು ನಿಷೇಧಿಸಿ (9 Ban drugs) ಆದೇಶ ಹೊರಡಿಸಿತ್ತು. ಇದಕ್ಕೆ ಮೂಲ ಕಾರಣ, ಕಳಪೆ ಗುಣಮಟ್ಟ ಎನ್ನುವ ವರದಿ ಆಧರಿಸಿ ಆರೋಗ್ಯ ಸಚಿವರು (Health Minister) ಈ 9 ಇಂಜೆಕ್ಷನ್‌ಗಳನ್ನು ನಿಷೇಧಿಸಲು ಆದೇಶ ಹೊರಡಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರ, ಸೆಂಟ್ರಲ್ ಡ್ರಗ್ಸ್ ಸ್ಯ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (Central Drugs Standard Control Organisation) ಪ್ರಯೋಗಾಲಯದಲ್ಲಿ 9 ಔಷಧ ಕಂಪನಿಗಳು ಉತ್ಪಾದಿಸುವ ಡ್ರಗ್ಗಳನ್ನು ಟೆಸ್ಟ್ ಮಾಡಿಸಿ ವರದಿ ಪಡೆಯಬೇಕು. ಅಲ್ಲಿಯವರೆಗೆ ದೇಶಾದ್ಯಂತ ಆ ಔಷಧ ಮಾರಾಟ ನಿರ್ಬಂಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundurao) ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ (J.P. Nadda) ಪತ್ರ ಬರೆದಿದ್ದರು.

ಹಾಗಾಗಿ ಇನ್ನುಮುಂದೆ ರಾಜ್ಯಕ್ಕೆ ಬರುವ ಎಲ್ಲಾ ಔಷಧಗಳ ಗುಣಮಟ್ಟವನ್ನು ಪರೀಕ್ಷೆ ಮಾಡಲು ಸರ್ಕಾರ ಮುಂದಾಗಿದೆ. ಎಲ್ಲಾ ಬಗೆಯ ಬ್ಯಾಚ್‌ಗಳ ಮಾತ್ರೆ, ಇಂಜೆಕ್ಷನ್, ಸಿರಪ್, ಫ್ಲೂಯಿಡ್‌ಗಳನ್ನು ಕೇಂದ್ರದ ಲ್ಯಾಬ್‌ನಲ್ಲಿ (Central lab) ಪರೀಕ್ಷೆ ಮಾಡಲಾಗಿದ್ದರೂ ರಾಜ್ಯದ ಸರ್ಕಾರಿ ಪ್ರಯೋಗಾಲಯದ (State Government Laboratory) ಪರೀಕ್ಷೆ ಮಾಡಿಸಲಾಗುವುದು. ಈ ಪರೀಕ್ಷೆಯಲ್ಲಿ ಔಷಧ ಅಸುರಕ್ಷಿತ ಎಂದು ಸಾಬೀತಾದರೆ ಹಾಗೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ಇತಂಹ ಕಳಪೆ ಗುಣಮಟ್ಟದ ಔಷಧಿಗಳ ಕಂಪನಿಗಳನ್ನು ಶಾಶ್ವತವಾಗಿ ಕಪ್ಪು ಪಟ್ಟಿ ಸೇರಿಸಲು ಇಲಾಖೆ ಮುಂದಾಗಿದೆ.ಯಾವುದೇ ರಾಜ್ಯದಲ್ಲಿ ಪರೀಕ್ಷೆ ನಡೆದಾಗ ಗುಣಮಟ್ಟದಲ್ಲಿ ದೋಷ (Error in quality) ಇದೆ ಎಂದು ಗೊತ್ತಾದರೆ ಆ ಔಷಧಗಳ ಬಗ್ಗೆ ಬೇರೆ ರಾಜ್ಯಗಳೂ ಅಲರ್ಟ್ ಸಂದೇಶ (Alert message) ಕಳುಹಿಸುವುದು ಸೇರಿದಂತೆ ಹಲವು ಅಂಶಗಳುಳ್ಳ ಪ್ರತ್ಯೇಕ ಕಾನೂನು ರಚನೆಗೆ ಸರ್ಕಾರ ಮುಂದಾಗಿದೆ.