Stock Market Scam: Police nab 22-year-old Bishal Phukan, who Cheated more Than 200 people
Stock Market Scam: ಮೋಸ ಹೋಗುವವರು ಇರುವ ತನಕ ಮೋಸ ಮಾಡುವ ಜನರು ಇದ್ದೇ ಇರುತ್ತಾರೆ.ಅದರಂತೆ ಬೃಹತ್ ಷೇರು ಮಾರುಕಟ್ಟೆ ಹಗರಣವೊಂದು ಅಸ್ಸಾಂನಿಂದ ವರದಿಯಾಗಿದ್ದು, ಈ ಸಂಬಂಧ ಬಹುಕೋಟಿ ಹೂಡಿಕೆ ಹಗರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ 22 ವರ್ಷದ ಬಿಶಾಲ್ ಪುಖಾನ್ ರನ್ನು (Bishal Phukan) ಬಂಧಿಸಲಾಗಿದೆ.
ಹಲವು ಗಂಟೆಗಳ ವಿಚಾರಣೆಯ ನಂತರ ಬಿಶಾಲ್ ಪುಖಾನ್ ನನ್ನು ದಿಬ್ರುಗಢದಿಂದ ಬಂಧಿಸಿರುವ ಪೊಲೀಸರು, ಉದಯೋನ್ಮುಖ ಅಸ್ಸಾಂ ನಟ, ನೃತ್ಯ ನಿರ್ದೇಶಕ ಹಾಗೂ ಇನ್ ಪ್ಲ್ಯುನ್ಸರ್ ಸುಮಿ ಬೋರಾ (Sumi Bora)ಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ನಿಮ್ಮ ದುಡ್ಡಿಗೆ ನಾನೇ ಗ್ಯಾರಂಟಿ, ಡಬಲ್ ಹಣ ದೊರೆಯುತ್ತದೆ. ಇಲ್ಲಿ ನೀವು ಹಣ ಹಾಕಿದರೆ ನಿಮ್ಮ ಹಣ ದುಪ್ಪಟ್ಟು ಆಗುತ್ತದೆ ಎಂದು ಕಲರ್ ಕಲರ್ ಕಾಗೆ ಹಾರಿಸಿ 2000 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಬಾಚಿದ್ದ ಬಿಶಾಲ್ ಈಗ ಕಂಬಿ ಎಣಿಸುತ್ತಿದ್ದಾನೆ. ಷೇರು ಮಾರುಕಟ್ಟೆಯಲ್ಲಿ(Stock Market) ಹೂಡಿಕೆ ಮಾಡಿದರೆ, ನಿಶ್ಚಿತವಾಗಿ ಶೇ. 30 ಅಥವಾ ಅದಕ್ಕಿಂತ ಹೆಚ್ಚು ಲಾಭ ನೀಡುವುದಾಗಿ ಹಲವಾರು ಜನರಿಗೆ ಭರವಸೆ ನೀಡಿ ಹಲವು ಕೋಟಿ ಮೊತ್ತವನ್ನು ಸಂಗ್ರಹಿಸಿರುವ ಇಂತಹವರ ವಿರುದ್ದ ಸೆಬಿ ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ನೀಡಿದೆ. ಆದರೂ ಜನರು ಇಂತಹ ದುರುಳರು ಮಾತಿಗೆ ಕಿವಿಗೊಟ್ಟು ಹಣ ಕಳೆದುಕೊಳ್ಳುತ್ತಿದ್ದಾರೆ.
ಕೇವಲ 22 ವರ್ಷಕ್ಕೇ ಬಿಶಾಲ್ ಪುಖಾನ್ ರೂ. 2,000 ಕೋಟಿ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾನೆ. ಅಕ್ರಮ ಗಳಿಕೆಯ ಮೂಲಕ ಪುಖಾನ್ ಪಾರ್ಸೆಲಿಯ ಫಾರ್ಮಾಸ್ಯೂಟಿಕಲ್ (Phukan Parcelia Pharmaceutical) ಎಂಬ ಕಂಪನಿಯನ್ನೂ ಸ್ಥಾಪಿಸಿದ್ದಾನೆ ಎನ್ನಲಾಗಿದೆ. ಪುಖಾನ್ ನನ್ನು ದಿಬ್ರುಗಢದಲ್ಲಿನ ಪ್ರಭಾಂಜಲಿ ಅಪಾರ್ಟ್ ಮೆಂಟ್ ನಲ್ಲಿರುವ ಆತನ ನಿವಾಸದಿಂದ ಪೊಲೀಸರು ಕರೆದೊಯ್ದಿದ್ದಾರೆ.
ಇನ್ನು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು ಯುಎಇ ದಿರ್ಹಮ್, ಐಫೋನ್ ಗಳು (iPhone) ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಗಾಗಿ ಅಪಾರ್ಟ್ ಮೆಂಟ್ (Apartment)ನ ಭದ್ರತಾ ಸಿಬ್ಬಂದಿಗಳು ಹಾಗೂ ಪುಖಾನ್ ನ ಕಾರು ಚಾಲಕನಿಗೆ ಪೊಲೀಸರು ನೋಟಿಸ್ (Police Notice) ನೀಡಿದ್ದಾರೆ.
Biggest Stock Market Fraud in India Kannada Trending
Stock Market Scam: As long as there are cheaters, there will always be cheaters. Accordingly, a huge stock market scam has been reported from Assam, and in this connection, 22-year-old Bishal Phukan, who cheated more than 200 people in a multi-crore investment scam, has been arrested.
Police have arrested Bishal Pukhan from Dibrugarh after several hours of interrogation, and have started a search for budding Assamese actor, choreographer and actress Sumi Bora.
I guarantee double your money for your work. Bishal, who had collected more than 2000 crore rupees by crowing that if you put money here, your money will be doubled, is now counting the wires. If you invest in the stock market, definitely Sebi has already warned several times against such people who have collected crores of rupees by promising many people that they will give them a profit of 30 or more. However, people are losing money by listening to the words of such scoundrels.
At just 22 years old, Bishal Pukhan earned Rs. He established a 2,000 crore empire. It is said that Phukan Parcelia Pharmaceutical has also established a company through illegal earnings. Pukhan was picked up by the police from his residence at Prabhanjali Apartments in Dibrugarh.
During this operation, the police seized UAE dirhams, iPhones and other documents. The police have issued a police notice to the security guards of the apartment and the car driver of Pukhan for questioning.