- ಬೈಕ್ ಟ್ಯಾಕ್ಸಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
- ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಗೈಡ್ಲೈನ್ಸ್ (Bike taxi service launch)
- ರಾಜ್ಯ ಸರ್ಕಾರ ಅನುಮತಿ ನೀಡಿದರೆ ಕರ್ನಾಟಕದಲ್ಲೂ ಅಗ್ರಿಗೇಟರ್ ಸೇವೆ ಪುನರಾರಂಭ
New delhi: ಕೇಂದ್ರ ಸರ್ಕಾರವು (central government) ಬೈಕ್ ಟ್ಯಾಕ್ಸಿ ಸೇವೆಗೆ (Bike Taxi Service) ಅನುಮತಿ ನೀಡಿದ್ದು, ವಾಣಿಜ್ಯೇತರ(Non-commercial) ಖಾಸಗಿ ಬೈಕ್‌ಗಳನ್ನು(private bike) ಬಳಸಿಕೊಂಡು ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದಾಗಿದೆ.
ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ(State Governments) ಅನುಮತಿ ಕಡ್ಡಾಯ ಎಂದು ಹೇಳಿದೆ.
ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ(Karnataka) ರಾಜ್ಯ ಸರ್ಕಾರ ನಿಷೇಧ ಹೇರಿದ್ದು, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ(protest) ನಡೆಸಲಾಗುತ್ತಿದೆ.
ಇದೇ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ(Central Govt) ಅನುಮತಿ ನೀಡಿದೆ. ಈ ಕುರಿತು ಅದು ಮಂಗಳವಾರ(Tuesday) ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇಂದ್ರ ಸಾರಿಗೆ ಸಚಿವಾಲಯ(Union Ministry of Transport) ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು,
ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ.
ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದಿರುವುದರಿಂದ, ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಬೈಕ್ ಟ್ಯಾಕ್ಸಿ ನಿಷೇಧ ಮುಂದುವರಿಯಲಿದೆ.
ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿರುವುದು ಇದೇ ಮೊದಲು. ಖಾಸಗಿ ವಾಹನ ಬಳಸಿ ಅಗ್ರಿಗೇಟರ್ ಗಳು ಸೇವೆ ನೀಡಬಹುದು.
ಇದಕ್ಕೆ ದೈನಂದಿನ(Daily), ವಾರ(week), ಮಾಸಿಕ(Monthly) ಅವಧಿಗೆ ಸರ್ಕಾರ ಶುಲ್ಕ(Govt fee) ವಿಧಿಸಬಹುದು.
ಇದರಿಂದ ಸಂಚಾರದಟ್ಟಣೆ(traffic), ಮಾಲಿನ್ಯ ನಿಯಂತ್ರಣ(Pollution Control), ಅಗ್ಗದ ಪ್ರಯಾಣ ಸಾಧ್ಯ(Cheap travel is possible).
ಸ್ಥಳೀಯ ಸಾರಿಗೆ ಅಭಿವೃದ್ಧಿ(Transport development), ಜೀವನ ರೂಪಿಸುವ ಅವಕಾಶ ಮಾಡಿಕೊಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕದಲ್ಲಿ ಓಲಾ (Ola), ಉಬರ್ (Uber), ರ‍್ಯಾಪಿಡೊ (Rapido) ಬೈಕ್ ಟ್ಯಾಕ್ಸಿ ಸೇವೆಗಳು ಸ್ಥಗಿತಗೊಂಡಿವೆ.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಕೆಗೆ ಪೂರಕವಾದ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ (Karnataka High Court) ನ್ಯಾಯಪೀಠ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಬಂದ್ ಆಗಿದೆ.
ಈ ಕುರಿತು ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಜೂನ್ 24ಕ್ಕೆ ನಿಗದಿ ಪಡಿಸಿದೆ.ರ್ಯಾಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ
ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನ(new guideline) ಹೊರಡಿಸಿದ್ದು, ಅದರನ್ವಯ ಪ್ರಯಾಣಿಕರ ಖಾಸಗಿ ಮೋಟಾರ್ ಸೈಕಲ್‌ಗಳ ಬಳಕೆಯನ್ನ ಅನುಮತಿಸಲಾಗಿದೆ.
ಇದನ್ನು ಓದಿ : ಭಾರತದ ಅತ್ಯುತ್ತಮ ಆಹಾರ ಬ್ರಾಂಡ್‌ಗಳ ಶ್ರೇಯಾಂಕದ ಹೆಸರು ಬಿಡುಗಡೆ, ಅಮುಲ್ ಮತ್ತು ಮದರ್ ಡೈರಿ ಮುಂಚೂಣಿಯಲ್ಲಿದೆ
ರಾಜ್ಯ ಸರ್ಕಾರ ಅನುಮತಿ ನೀಡಿದರೆ (Bike taxi service launch) ಕರ್ನಾಟಕದಲ್ಲೂ ಅಗ್ರಿಗೇಟರ್ ಸೇವೆ ಪುನರಾರಂಭ ಆಗಲಿದೆ.