Bengaluru : ಬೈಕ್‌ಗಳ ನೋಂದಾಯಿತ ನಂಬರ್ ಪ್ಲೇಟ್‌ಗಳನ್ನು(bikers changed number plates) ಬದಲಿಸಿ, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ 100ಕ್ಕೂ ಅಧಿಕ ಬೈಕ್ ಸವಾರರನ್ನು ಹಿಡಿದು ದಂಡ ವಿಧಿಸುವಲ್ಲಿ ಬೆಂಗಳೂರು ಪೊಲೀಸರು(Bangalore police) ಯಶಸ್ವಿಯಾಗಿದ್ದಾರೆ.
ಕಳ್ಳರಂತೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಬೈಕ್ ಸವಾರರನ್ನು ಹಿಡಯಲೇ ಬೇಕು ಎಂದು ಪಣತೊಟ್ಟು ಬೆಂಗಳೂರು ಸಂಚಾರಿ ಪೊಲೀಸರು ಆರಂಭಿಸಿದ ಕಾರ್ಯಾಚರಣೆ ಇದೀಗ ಫಲಿಸಿದೆ.
ಪೊಲೀಸ್ ಕ್ಯಾಮೆರಾ ಸೆರೆ ಹಿಡಿಯುವಿಕೆ ಮತ್ತು ದಂಡದಿಂದ ತಪ್ಪಿಸಿಕೊಳ್ಳಲು ವಿವಿಧ ರೀತಿಯಲ್ಲಿ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿದ್ದಕ್ಕಾಗಿ ರಾಜ್ಯ ರಾಜಧಾನಿಯಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಇಲ್ಲಿಯವರೆಗೂ 100 ಕ್ಕೂ ಹೆಚ್ಚು ಬೈಕ್ ಸವಾರರಿಗೆ ಭಾರಿ ದಂಡ ವಿಧಿಸಿದ್ದಾರೆ.
ಈ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ಗುರುವಾರ ತಮ್ಮ ಪ್ರಕಟಣೆಯಲ್ಲಿ ಘೋಷಿಸಿದ್ದಾರೆ.
ಬೆಂಗಳೂರು(ಪಶ್ಚಿಮ) ಪೊಲೀಸ್ ಉಪ ಕಮಿಷನರ್(ಸಂಚಾರ)(Bangalore Deputy commisioner of police), ಕುಲದೀಪ್(Kuldeep) ಕುಮಾರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಟ್ವೀಟ್(Tweet) ಹೀಗಿದೆ, ಕುಲದೀಪ್ ಕುಮಾರ್ ಆರ್. ಜೈನ್, ಐಪಿಎಸ್ : ಬೈಕ್ ನಂಬರ್ ಪ್ಲೇಟ್‌ಗಳನ್ನು ಮಾಸ್ಕ್‌ನಿಂದ(bikers changed number plates) ಮರೆಮಾಡಿದ್ದಾರೆ ಮತ್ತು ಅದರ ಒಂದು ಭಾಗದಲ್ಲಿ ಚೂಯಿಂಗ್ ಗಮ್(Chewing gum),
ಬಿಳಿ ಬಣ್ಣವನ್ನು ಬಳಸಿ ಮರೆಮಾಚಲು ಪ್ರಯತ್ನಿಸಿದ್ದಾರೆ. ಅಪಾರ ಬೆಂಬಲಕ್ಕಾಗಿ ಬೆಂಗಳೂರಿಗರಿಗೆ ಧನ್ಯವಾದಗಳು.
ಕಳೆದ 4 ವಾರಗಳಲ್ಲಿ ಈ ರೀತಿ ಮಾಡುತ್ತಿದ್ದ 100 ಕ್ಕೂ ಹೆಚ್ಚು ಬೈಕ್ ಸವಾರರನ್ನು ಗುರುತಿಸಲಾಗಿದೆ ಮತ್ತು ದಂಡ ವಿಧಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇತ್ತೀಚಿಗೆ ಸುರಿದ ಭಾರೀ ಮಳೆಯ ಸಮಯದಲ್ಲಿ ಗುಪ್ತ ಸಂಖ್ಯೆಗಳು ಹೊರಬಂದಿದ್ದರಿಂದ
ಅಂತಹ ಟ್ಯಾಂಪರ್ಡ್ ನಂಬರ್ ಪ್ಲೇಟ್‌ಗಳನ್ನು(Tampered number plate) ಗುರುತಿಸಲು ಸಹಾಯ ಮಾಡಿದೆ ಎಂದು ಡಿಸಿಪಿ(DCP) ಹೇಳಿದ್ದಾರೆ.
ಈ ಹಿಂದೆ, ಕೆಲವು ಬೈಕ್ ಸವಾರರು ಹೆಲ್ಮೆಟ್(Helmet) ಇಲ್ಲದೆ ಹೊರಗೆ ಹೋದಾಗ ಸ್ವಯಂಚಾಲಿತವಾಗಿ ಮರೆಮಾಡಬಹುದಾದ
ನಂಬರ್ ಪ್ಲೇಟ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಚಿತ್ರೀಕರಿಸಿದ ವೀಡಿಯೊದಲ್ಲಿ, ಆರೋಪಿಗಳು ಪೊಲೀಸ್ ಕ್ಯಾಮೆರಾಗಳಿಂದ ನೋಂದಣಿ ಸಂಖ್ಯೆಯನ್ನು ಮರೆಮಾಡುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಲು ಹೇಗೆಲ್ಲಾ ಮಾಡುತ್ತಿದ್ದಾರೆ ಎಂಬುದು ಕಂಡುಬಂದಿದೆ.
ಇದು ಟ್ರಾಫಿಕ್ ಪೊಲೀಸರು(Traffic police) ಹಾಕುವ ದಂಡದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ಉದ್ದೇಶಪೂರ್ವಕ ಕೆಲಸಗಳು ಎಂದು ಪೊಲೀಸರ ಕೈಗೆ ಸಿಲುಕಿಕೊಂಡ ಬೈಕ್ ಸವಾರರು ತಮ್ಮ ತ್ಪಪನ್ನು ಒಪ್ಪಿಕೊಂಡಿದ್ದಾರೆ.
ನಗರದ 50 ನಿರ್ಣಾಯಕ ಜಂಕ್ಷನ್‌ಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಸ್ಥಾಪಿಸುವುದಾಗಿ ಬೆಂಗಳೂರು ಪೊಲೀಸರು ಈಗಾಗಲೇ ಘೋಷಿಸಿದ್ದಾರೆ.
ಬೆಂಗಳೂರಿನ ಈ 50 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಸಂಚಾರ ಉಲ್ಲಂಘನೆಗಳನ್ನು ಸೆರೆಹಿಡಿಯಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.