ಬಿಳಿ ದಾಸವಾಳ ಹೂವು ಅನಾದಿ ಕಾಲದಿಂದಲೂ ಮಾನವ ದೇಹದ ಆರೋಗ್ಯದಲ್ಲಿ ಅನೇಕ ಕಾಯಿಲೆಗಳಿಗೆ ಮನೆ ಮದ್ದಾಗಿ ಪ್ರಚಲಿತವಾಗಿದೆ. ಬಿಳಿದಾಸವಾಳದ ಹೂವುಗಳನ್ನು ತಂದು ತೊಳೆದು ಅದರ ರಸ ತೆಗೆದುಕೊಂಡು ಆ ರಸಕ್ಕೆ ಹಾಲು ಮತ್ತು ಕಲ್ಲು-ಸಕ್ಕರೆ ಬೆರೆಸಿ ದಿನನಿತ್ಯ ಸೇವಿಸಿದರೆ ಉರಿಮೂತ್ರದ ಕಾಯಿಲೆ ನಿವಾರಣೆಯಾಗುತ್ತದೆ.
ದೇಹದಲ್ಲಿ ಸುಟ್ಟ ಗಾಯಗಳಾಗಿದ್ದರೆ ಬಿಳಿದಾಸವಾಳದ ರಸವನ್ನು ಎಳ್ಳೆಣ್ಣೆಗೆ ಹಾಕಿ, ಕುದಿಸಿ ಆರಿಸಿ ಹಚ್ಚುತ್ತಾ ಬಂದರೆ ಸುಟ್ಟ ಗಾಯ ಗುಣವಾಗುತ್ತದೆ. ಬಿಳಿದಾಸವಾಳ ಹೂವುಗಳ ರಸವನ್ನು ಹಸಿಯಾಗಿ ಕುಡಿಯುತ್ತಾ ಬಂದರೆ ಮೂಲವ್ಯಾಧಿ ರೋಗ ನಿವಾರಣೆಯಾಗುತ್ತದೆ
ಸ್ತ್ರೀಯರಿಗೆ ಋತುಚಕ್ರ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ಬಿಳಿದಾಸವಾಳದ ರಸ ಮತ್ತು ಹಾಲನ್ನು ಮಿಕ್ಸ್ ಮಾಡಿ ಕುದಿಸಿ ಆರಿಸಿ ಕುಡಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ. ಇನ್ನು ಈ ಹೂವಿನ ರಸಕ್ಕೆ ಸ್ವಲ್ಪ ಹಾಲಿನೊಂದಿಗೆ ಸೇರಿಸಿ ತಲೆ ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.