Bengaluru : ಸಾರಿಗೆ ಉದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಉದ್ಯಮಿ, ಪದ್ಮಶ್ರೀ ಪುರಸ್ಕ್ರತ ಡಾ. ವಿಜಯ ಸಂಕೇಶ್ವರ(Biopic of Vijaya Sankeshwar) ಅವರ ಜೀವನದ ಹಾದಿಯನ್ನು ಬೆಳ್ಳಿಪರದೆಯ ಮುಖೇನ ಜನರಿಗೆ ಪರಿಚಯಗೊಳಿಸಿದ ಚಿತ್ರತಂಡಕ್ಕೆ ಇದೀಗ ಗೆಲುವಿನ ಸಂಭ್ರಮದ ಯಾತ್ರೆ ಆರಂಭವಾಗಿದೆ.
ಜಗತ್ತಿನಾದ್ಯಂತ ಡಿ.9 ರಂದು ‘ವಿಜಯಾನಂದ’(Biopic of Vijaya Sankeshwar) ಚಿತ್ರವು ಏಕಕಾಲಕ್ಕೆ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗಿ, ಕನ್ನಡದ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್(Biopic) ಚಿತ್ರವಾಗಿ ಹೊರಹೊಮ್ಮಿತು.
ಈ ಚಿತ್ರವು ವಿಜಯ ಸಂಕೇಶ್ವರ ಅವರ ಜೀವನದ ಆರಂಭಿಕ ದಿನಗಳಿಂದ ಪ್ರಾರಂಭವಾಗುವ ಕಥೆಯಾಗಿದ್ದು,
ಅವರ ಸೋಲುನ್ನು ದೂರ ಸರಿಸಿ ಗೆಲುವಿನ ಪಯಣವನ್ನು ಮಾತ್ರ ಆಧರಿಸಿ ಈ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.
ಈ ಸಿನಿಮಾ ಹಲವು ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವಾಗಿದೆ ಎಂಬುದು ಇಲ್ಲಿ ಗಮನಾರ್ಹ. ವಿಜಯ ಸಂಕೇಶ್ವರ ಅವರು ಮೊದಲು ಪ್ರಿಂಟಿಂಗ್ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು.
ಇದನ್ನೂ ಓದಿ : https://vijayatimes.com/drishyam-2-reaches-cr-club/
ಆದರೆ, ತದನಂತರ ಅದನ್ನು ಬಿಟ್ಟು ತಮ್ಮ ತಂದೆಯ ವಿರೋಧ ಕಟ್ಟಿಕೊಂಡು, ಟ್ರಾನ್ಸ್‌ಪೋರ್ಟ್(Transport) ವ್ಯಾಪಾರ ಆರಂಭಿಸಿದರು.
ಸೋತು ಬಿದ್ದು ಮತ್ತೆ ಏನಾದರು ಸಾಧಿಸಬೇಕೆಂದು ಹೊರಟ ವಿಜಯ ಸಂಕೇಶ್ವರ ಅವರಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಪ್ರತಿ ಸೋಲಿನಲ್ಲೂ ಒಂದು ಗೆಲುವನ್ನು ಕಾಣುವ ಅವರು ಪ್ರತಿ ಸವಾಲು ಎದುರಾದಾಗಲೂ ಗೆಲ್ಲುತ್ತಲೇ ಸಾಗುತ್ತಾರೆ.
ಹೀಗೆ ಗೆಲ್ಲುತ್ತಲೇ ತನ್ನ ಜೊತೆಗಿದ್ದವರಿಗೆ ಬಹಳ ಸ್ಫೂರ್ತಿದಾಯಕ ವ್ಯಕ್ತಿಯಾಗುತ್ತಾರೆ. ತನ್ನ ಶತ್ರುಗಳನ್ನು ಸಹ ತನ್ನ ಗೆಲುವಿನಿಂದ ಗೆಲ್ಲಬೇಕು ಎನ್ನುವ ಸಂದೇಶದೊಂದಿಗೆ ಮುಂದಿನ ಗುರಿ,
ಶ್ರಮ ಹಾಗೂ ತನ್ನಲ್ಲಿ ತನಗೆ ಆತ್ಮವಿಶ್ವಾಸ ಎಲ್ಲವು ಜೊತೆಗಿದ್ದರೆ ಗೆಲುವು ಖಂಡಿತ ಸಾಧ್ಯ ಎಂಬ ಸಂದೇಶವನ್ನು ‘ವಿಜಯಾನಂದ’ ಚಿತ್ರದಲ್ಲಿ ತೋರಿಸಲಾಗಿದೆ.
ಇದು ಕನ್ನಡದ ಸಾಧಕರೊಬ್ಬರ ಮೊದಲ ಬಯೋಪಿಕ್ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಸಿನಿಮಾದಲ್ಲಿ ಒಂದಷ್ಟು ನ್ಯೂನತೆಗಳು ಕೂಡ ಇವೆ. ಈ ಚಿತ್ರಕಥೆಯ ವಿಚಾರದಲ್ಲಿ ಇನ್ನೊಂದಿಷ್ಟು ಎಚ್ಚರ ವಹಿಸಬಹುದಿತ್ತೇನೊ.
ಚಿತ್ರದ ಮೊದಲ ಭಾಗ ಎಷ್ಟು ರೋಚಕವಾಗಿತ್ತೋ, ಅಷ್ಟೇ ರೋಚಕವಾಗಿ ಎರಡನೇ ಭಾಗವು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅನಿಸಿಕೆ ಮೂಡಿದ್ದು ನಿಜ!
ಇದನ್ನು ಹೊರತುಪಡಿಸಿದರೇ, ಸಿನಿಮಾ ಬಹಳ ಅದ್ಬುತವಾಗಿ ಮೂಡಿಬಂದಿದೆ ಎಂದು ಸಿನಿ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 1970-80ರ ಕಾಲಘಟ್ಟವನ್ನು ನಿರ್ದೇಶಕರು ಬಹಳ ಸೊಗಸಾಗಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಆರಂಭಿಕ ಭಾಗಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರೂ, ಚಿತ್ರ ಸಾಗುತ್ತಿದ್ದಂತೆ ಮಂದಗತಿಯ ನಿರೂಪಣೆ ಬಹುಶಃ ಪ್ರೇಕ್ಷಕರಿಗೆ ಕೊಂಚ ಬೇಸರ ಮೂಡಿಸಬಹುದು.
- ಪಂಕಜ