Bellary: ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳ ಬಳಿಕ ಗಡಿ ಜಿಲ್ಲೆ (Border District) ಬಳ್ಳಾರಿಯಲ್ಲೂ ಕೋಳಿಜ್ವರದ ಆತಂಕ ಮನೆಮಾಡಿದೆ.(Bird fever scare in border districts) ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕೋಳಿಗಳು (Chickens) ಮರಣ ಹೊಂದಿದ್ದು, ಹಕ್ಕಿಜ್ವರದ ಶಂಕೆ (Bird flu) ಮೂಡಿದೆ.
ಈ ಮಧ್ಯೆ, ಕೋಳಿಜ್ವರ ಪತ್ತೆಯಾದ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ವರದಹಳ್ಳಿಯಲ್ಲಿ ಮತ್ತೆ 8 ಕೋಳಿಗಳು ಸಾವನ್ನಪ್ಪಿದ್ದು, ಗ್ರಾಮವನ್ನು ಹಕ್ಕಿಜ್ವರ ಬಾಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅಲ್ಲದೆ, ಗ್ರಾಮದ 1 ಕಿ.ಮೀ. ವ್ಯಾಪ್ತಿಯಲ್ಲಿನ ಕೋಳಿಗಳ ನಾಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ (Torangal) ಬಳಿಯ ಕುರೇಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿ (Livestock Breeding and Training Centre) ಕೆಲವು ದಿನಗಳ ಹಿಂದೆ ಕೆಲ ಕೋಳಿಗಳು ಮೃತಪಟ್ಟಿದ್ದವು. ಪ್ರಯೋಗಾಲಯದ (laboratory) ವರದಿ ಬಳಿಕ ಇವುಗಳಲ್ಲಿ ಎಚ್5ಎನ್1 ವೈರಸ್ (H5N1 virus) ಇರುವುದು ದೃಢಪಟ್ಟಿತ್ತು.
ಇದನ್ನು ಓದಿ: ಮಾರ್ಚ್ 3 ರಿಂದ ಬಜೆಟ್ ಅಧಿವೇಶನ ಅರಂಭ: ಚರ್ಚೆಗೆ ಕೇವಲ 15 ದಿನಗಳ ಕಾಲಾವಕಾಶ ನೀಡಿರುವ ಸರ್ಕಾರದ ವಿರುದ್ಧ ಮುಗಿಬೀಳಲು BJP ಸಜ್ಜು
ಈ ಹಿನ್ನೆಲೆಯಲ್ಲಿ ಈ ಕೇಂದ್ರದಲ್ಲಿ ಸುಮಾರು 2 ಸಾವಿರ ಕೋಳಿಗಳನ್ನು ನಾಶಪಡಿಸಲಾಗಿತ್ತು.ಇದರ ಬೆನ್ನಲ್ಲೇ ಜಿಲ್ಲೆಯ ವಿವಿಧ ಕೋಳಿಫಾರಂಗಳಲ್ಲಿ (Poultry farms) 2 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದ್ದು, ಇವುಗಳು ಕೂಡ ಹಕ್ಕಿಜ್ವರದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೃತಕೋಳಿಗಳ ಕಳೆಬರವನ್ನು ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಆಂಧ್ರ (Andhra), ತೆಲಂಗಾಣ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ (Checkpost) ತೆರೆಯಲಾಗಿದೆ. ಹೊರ ರಾಜ್ಯಗಳ ಕೋಳಿಗಳು ಹಾಗೂ ಮೊಟ್ಟೆಗಳು (Bird fever scare in border districts) ಜಿಲ್ಲೆಗೆ ಸರಬರಾಜು ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಹಕ್ಕಿ ಜ್ವರ ವೈರಾಣುಗಳಿಂದ ಹರಡುತ್ತದೆ. ಸೋಂಕು ತಗುಲಿದ ಹಕ್ಕಿಗಳು ವಿಸರ್ಜಿಸುವ ಮಲ-ಮೂತ್ರದಿಂದ (faeces and urine) ಈ ರೋಗ ಹರಡುತ್ತದೆ. ಜೊತೆಗೆ ಆ ಹಕ್ಕಿಗಳ ಶ್ವಾಸೋಚ್ವಾಸ ಕ್ರಿಯೆ (Respiratory function) ಮತ್ತು ರಕ್ತದಿಂದ ಹರಡುತ್ತದೆ ಎಂದು ಅಧಿಕಾರಿಗಳು ಹಕ್ಕಿಜ್ವರದ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಮುಂದಾಗಿದ್ದಾರೆ.