- H5N1 ಸೋಂಕಿಗೆ (H5N1 infection) ಬಲಿಯಾದ 2 ವರ್ಷದ ಬಾಲಕಿ
- ಕೋಳಿಗಳಿಗೆ ಮಾತ್ರವಲ್ಲ ಇತರೆ ಪ್ರಾಣಿಗಳಲ್ಲೂ ವೈರಸ್ (Viruses in animals) ಪತ್ತೆ
- ಮಹಾರಾಷ್ಟ್ರ, ರಾಜಸ್ಥಾನ (Maharashtra, Rajasthan) ಹಾಗೂ ಬಿಹಾರ್ ರಾಜ್ಯಗಳ ಪ್ರಾಣಿಗಳಲ್ಲಿ ಕೂಡ (Bird flu outbreak in India) ಸೋಂಕು
New delhi: ಕಳೆದ ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದಲ್ಲಿ H5N1 ನಿಂದ 2 ವರ್ಷದ ಬಾಲಕಿಯೊಬ್ಬಳು ಅಸುನೀಗಿದ್ದಳು. ಅದರ ಬೆನ್ನಲ್ಲೇ ಇದೀಗ ಹಲವಾರು ರಾಜ್ಯಗಳಲ್ಲಿ ಹಕ್ಕಿ ಜ್ವರದ (Bird flu in the states) ಸರಣಿ ಮುಂದುವರೆದಿದ್ದು ಜನರ ಮನಸ್ಸಿನಲ್ಲಿ ಆಂತಕ (Anxiety in the mind) ಮೂಡಿಸಿದೆ.
ಈ ಮೊದಲು ಕೇವಲ ಕೋಳಿಗಳಿಗೆ ಮಾತ್ರ ಸೀಮಿತವಾಗಿದ್ದ ಹಕ್ಕಿ ಜ್ವರ (bird flu) ಇದೀಗ ಹುಲಿಗಳು, ಚಿರತೆಗಳು, ಕಾಡು ಬೆಕ್ಕುಗಳು ಹಾಗೂ ಸಾಕಿದ ಬೆಕ್ಕುಗಳು (Domesticated cats) ಸೇರಿದಂತೆ ಕೋಳಿಯೇತರ ಜೀವಿಗಳಲ್ಲೂ ಕೂಡ ಕಂಡು ಬಂದಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ (Monitor closely) ಮಾಡುತ್ತಿರುವ ಆಂಧ್ರಪ್ರದೇಶ ಸರ್ಕಾರವು, ವೈರಸ್ ಹರಡುವಿಕೆ (Virus spread) ತಡೆಯಲು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಜನರಿಗೆ ಸೂಚಿಸಿದೆ (Instructed the people) .ಹಕ್ಕಿ ಜ್ವರವನ್ನು ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲಾಗುತ್ತದೆ. ಇದು ಸಾಂಕ್ರಾಮಿಕ ಸೋಂಕು (Contagious infection) ಆಗಿದ್ದು, ಪಕ್ಷಿಗಳಿಗೆ ಮಾತ್ರವಲ್ಲ, ಕೆಲವೊಮ್ಮೆ ಮಾನವರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ಹರಡುತ್ತದೆ.

ಆದರೆ, ಪಕ್ಷಿಗಳಲ್ಲಿ (Birds) ಇದರ ಹರಡುವಿಕೆ ಹೆಚ್ಚು. H5N1 ಹಕ್ಕಿ ಜ್ವರದ ಸಾಮಾನ್ಯ ರೂಪವಾಗಿದೆ. ಇದು ಪಕ್ಷಿಗಳಿಗೆ ಮಾರಕವಾಗಿದೆ. ಇದು ಇತರ ಪ್ರಾಣಿಗಳ ಮೇಲೆ (Animals) ಸುಲಭವಾಗಿ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಮೂಲದ ಪ್ರಕಾರ, H5N1 ಅನ್ನು ಮೊದಲು 1997ರಲ್ಲಿ ಮಾನವರಲ್ಲಿ ಕಂಡುಹಿಡಿಯಲಾಯಿತು.
ಹಲವಾರು ವಿಧದ ಹಕ್ಕಿ ಜ್ವರಗಳಿದ್ದರೂ, H5N1 ಮಾನವರಿಗೆ ಸೋಂಕು ತಗುಲಿದ (Infected) ಮೊದಲ ಏವಿಯನ್ ಇನ್ಫ್ಲುಯೆನ್ಸ ವೈರಸ್ ಆಗಿದೆ. ಮೊದಲ ಸೋಂಕು (First infection) 1997ರಲ್ಲಿ ಹಾಂಗ್ ಕಾಂಗ್‌ನಲ್ಲಿ ಪತ್ತೆಯಾಯಿತು. H5N1 ನೈಸರ್ಗಿಕವಾಗಿ (H5N1 naturally) ಕಾಡಿನ ಜಲಪಕ್ಷಿಗಳಲ್ಲಿ ಕಂಡುಬರುತ್ತದೆ. ಆದರೆ ಇದು ಕೋಳಿಗಳಿಗೆ (Chickens) ಸುಲಭವಾಗಿ ಹರಡುತ್ತದೆ.
ಈ ರೋಗವು ಸೋಂಕಿತ ಪಕ್ಷಿಗಳ ಮಲ, ಮೂಗಿನ ಸ್ರವಿಸುವಿಕೆ, ಬಾಯಿ ಅಥವಾ ಕಣ್ಣುಗಳಿಂದ (mouth or eyes) ಹೊರಬರುವ ನೀರಿನ ಮೂಲಕ ಮನುಷ್ಯರಿಗೆ ಹರಡುತ್ತದೆ. ಮಾಂಸವನ್ನು ಸರಿಯಾಗಿ ಬೇಯಿಸದೆ ಸೇವಿಸಬಾರದು.
ಆರೋಗ್ಯ ಇಲಾಖೆ ಹೊರಡಿಸಿರುವ ಮುನ್ನೆಚ್ಚರಿಕೆ ಕ್ರಮಗಳು (Precautionary measures) :
- ಈ ವೈರಸ್ ಕೋಳಿಗಳ (chickens) ಪ್ರಭೇದಗಳಿಗೆ ಮಾತ್ರವಲ್ಲದೇ ಇತರ ಪ್ರಭೇದಗಳಿಗೂ ಹರಡಬಹುದಾಗಿದ್ದು (spread to species) ಎಚ್ಚರಿಕೆ ಅಗತ್ಯ
- ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು (Chicken meat and eggs) 100 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಪೂರ್ಣವಾಗಿ ಬೇಯಿಸಿ ಸೇವಿಸಬೇಕು.
- ಅನಾರೋಗ್ಯ ಪೀಡಿತ ಪಕ್ಷಿಗಳು (Sick birds) ಮತ್ತು ಸಾಕುಪ್ರಾಣಿಗಳೊಂದಿಗೆ (Pets) ಜನರ ಸಂಪರ್ಕವನ್ನು ತಪ್ಪಿಸಬೇಕು.
- ಹಕ್ಕಿ ಜ್ವರ ಪೀಡಿತ (Bird flu sufferer) ಪ್ರದೇಶಗಳ ಬಳಿ ವೃದ್ಧರು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಮಕ್ಕಳು ಹೋಗಬಾರದು.
- ಜ್ವರ, ತೀವ್ರ ಕೆಮ್ಮು (Fever, severe cough) ಅಥವಾ ಶೀತ ಕಂಡುಬಂದರೆ ವೈದ್ಯಕೀಯ ನೆರವು ಪಡೆಯಿರಿ.
- COVID-19 ಪ್ರೋಟೋಕಾಲ್‌ಗಳಲ್ಲಿ ಅನುಸರಿಸಿದಂತೆ ಆಮ್ಲಜನಕದ ಮಟ್ಟವನ್ನು (Bird flu outbreak in India) ಮೇಲ್ವಿಚಾರಣೆ ಮಾಡುತ್ತಿರಬೇಕು.