ಜಲವಾಸಿ ಪಕ್ಷಿ(Bird) (ಕೆರೆ, ನದಿ ಹಿನ್ನೀರಿನ ಪ್ರದೇಶವನ್ನು ಮುಖ್ಯ ಆವಾಸಸ್ಥಾನವಾಗಿ ಹೊಂದಿದ ಪಕ್ಷಿಗಳು) ಯೊಂದು ನಿತ್ರಾಣಗೊಂಡಿದ್ದನ್ನು ಕಂಡು ಚಿಕಿತ್ಸೆ ನೀಡಲು ಮುಂದಾದ ವೈದ್ಯರುಗಳು(Veterinary) ಅದರ ಹೊಟ್ಟೆಯೊಳಗೆ ಅಡಗಿದ್ದ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು(Plastic Pieces) ಕಂಡು ಆಘಾತಗೊಂಡರು.

ಇದು ಕೇವಲ ಒಂದು ಪಕ್ಷಿಯ ಕತೆಯಲ್ಲ. ಬಹುತೇಕ ಜಲವಾಸಿ ಪಕ್ಷಿಗಳದ್ದು ಇದೇ ಕತೆ. ರಸ್ತೆ ಬದಿ, ಉದ್ಯಾನ, ಹೊಲ-ಗದ್ದೆ, ಪಾಳು ಜಮೀನು ಸೇರಿ ಎಲ್ಲೆಡೆ ಪ್ಲಾಸ್ಟಿಕ್ ವಸ್ತುಗಳನ್ನು ಬೇಕಾಬಿಟ್ಟಿ ಎಸೆದರೂ ಜೋರು ಮಳೆ ಬಂದಾಗ ಮಳೆಯ ನೀರಿನೊಂದಿಗೆ ಅವು ಅಂತಿಮವಾಗಿ ಸೇರಿವುದು ಹತ್ತಿರದ ಕೆರೆ, ಕಟ್ಟೆ, ಬಾವಿ, ನದಿ, ಸರೋವರಗಳನ್ನು. ಕೆಲವು ಅವಿವೇಕಿಗಳಂತು ನೇರವಾಗಿ ಕೆರೆ, ನದಿಗಳಿಗೆ ವಿವಿಧ ಕಾರಣಗಳಿಂದ ನೇರವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿ ತರೇವಾರಿ ಕಸಗಳನ್ನು ಹಾಕುತ್ತಾರೆ.

ನಮ್ಮ ಹಸಿತ್ಯಾಜ್ಯಗಳನ್ನು (ಸಾವಯವ, ಕೊಳೆತು ಗೊಬ್ಬರವಾಗುವ ತರಕಾರಿ, ಹಣ್ಣು ತ್ಯಾಜ್ಯಗಳು) ಜಲಮೂಲಗಳನ್ನು ಬಿಟ್ಟು ಬೇರೆ ಕಡೆ ಹಾಕಿದರೂ ಅವು ಅಲ್ಲೆ ಕೊಳತು ಗೊಬ್ಬರ ಆಗುತ್ತವೆ. ಅದರಿಂದ ಅಷ್ಟು ಸಮಸ್ಯೆ ಇಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪಾಲಿಕೆಯವರು ಸೂಕ್ತವಾಗಿ ವಿಲೇವಾರಿ ಮಾಡುತ್ತಾರೆ. ಕಸ ಎಂಬ ಪದಕ್ಕಿಂತ ಪ್ಲಾಸ್ಟಿಕ್ ಎಂಬುದು ಬಹಳ ಅಪಾಯಕಾರಿ ತ್ಯಾಜ್ಯವಾಗಿದೆ. ಜನರು ಮನಬಂದಂತೆ ಎಲ್ಲಿ ಬೇಕಂದರಲ್ಲಿ ಪ್ಲಾಸ್ಟಿಕ್ ಎಸೆದು ಬೇರೆ ಜೀವಗಳಿಗೆ ತೊಂದರೆ ಮಾಡುವುದನ್ನು ಚೆನ್ನಾಗಿಯೇ ಕಲಿತಿದ್ದಾರೆ.

ಪ್ಲಾಸ್ಟಿಕ್ ಎಸೆಯಬೇಡಿ ಎಂದು ಯಾವುದೇ ಪರಿಸರ ಸಂಘಟನೆಗಳು, ಸಂಘ-ಸಂಸ್ಥೆಗಳು ಹೇಳಿ, ಮನವರಿಕೆ ಮಾಡಿದರೂ ನಮ್ಮ ಜನರದ್ದು ಅದೇ ಹಾಡು ಅದೇ ರಾಗದಂತೆ ಯಾವುದೇ ¨ದಲಾವಣೆ ಹೊಂದುವುದಿಲ್ಲ! ಹಾಗಾಗಿ ಅವರಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮರುಬಳಕೆ ಬಿಟ್ಟರೆ ಪಾಲಿಕೆಯವರಿಗೆ ತಲುಪಿಸುವುದು ಬಿಟ್ಟು ಅವನ್ನು ಸಿಕ್ಕ ಸಿಕ್ಕ ಕಡೆ ಎಸೆದರೆ ನಮ್ಮ ಪರಿಸರ ವ್ಯವಸ್ಥೆ, ಜೀವವೈವಿಧ್ಯತೆಯನ್ನು ನಾಶ ಮಾಡಿದಂತೆ.
- Source : ಪರಿಸರ ಪರಿವಾರ