Visit Channel

ಹಮ್ಮಿಂಗ್, ನವಿಲು ಪಕ್ಷಿಗಳ ವಿಶೇಷ ಗುಣಗಳ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ

BIRDS

ಗಂಡು ಒಂದು ಹೆಣ್ಣನ್ನು ತನ್ನ ಕಡೆ ಆಕರ್ಷಿಸಲು ಏನೆಲ್ಲಾ ಉಪಾಯಗಳನ್ನು ಮಾಡುತ್ತಾನೆ ಅಂತ ಹೆಚ್ಚಿನವರಿಗೆ ತಿಳಿದಿರುತ್ತದೆ, ಅಥವಾ ಅನುಭವವೂ ಇರಬಹುದು. ಹಾಗೆ ನಮ್ಮ ಪಕ್ಷಿಗಳ ಲೋಕದಲ್ಲಿ ಸಹ ಗಂಡು ಪಕ್ಷಿ(Bird) ಹೆಣ್ಣನ್ನು ಆಕರ್ಷಿಸಲು ಮಾಡುವ ಕಸರತ್ತುಗಳು ಮಾನವನನ್ನೇ ನಾಚಿಸುತ್ತವೆ. ಹೌದು, ಪಕ್ಷಿಗಳು ಇಂತಹ ಉಪಾಯಗಳನ್ನು ಮಾಡುತ್ತವೆ ಎನ್ನುವುದನ್ನು ಊಹಿಸಲೂ ಅಸಾಧ್ಯ. ಆದ್ರೆ ಇದು ನಿಜ! ಸಾವಿರಾರು ಕಣ್ಣುಗಳ ಸರದಾರ, ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಬಗ್ಗೆ ನಿಮಗೆ ತಿಳಿದೇ ಇದೆ.

Bird

ಗಂಡು ನವಿಲು ಹೆಣ್ಣು ನವಿಲನ್ನು ಆಕರ್ಷಿಸಲು ಬಳಸುವ ಅಸ್ತ್ರವೇ ತನ್ನ ಆಕರ್ಷಕವಾದ ರೆಕ್ಕೆಗಳು, ಒಮ್ಮೆ ಗಂಡು ನವಿಲು ತನ್ನ ರೆಕ್ಕೆಗಳನ್ನು ಸಂಪೂರ್ಣ ಫ್ಯಾನ್ ಆಕಾರದಲ್ಲಿ ನಿಲ್ಲಿಸಿದಾಗ, ಹೆಣ್ಣು ನವಿಲಿಗೆ ಇಷ್ಟವಾದರೆ ಹೆಣ್ಣು ನವಿಲು ತನ್ನ ದೇಹವನ್ನು ಒಮ್ಮೆ ಜೋರಾಗಿ ಕುಣಿಸಿ ತನ್ನ ಸಮ್ಮತಿ ಸೂಚಿಸುತ್ತದಂತೆ. ಇನ್ನು ಹಮ್ಮಿಂಗ್ ಬರ್ಡ್ ಪಕ್ಷಿಗಳದ್ದು ಕೂಡ ವಿಚಿತ್ರವಾದ ಕಸರತ್ತು, ಹಮ್ಮಿಂಗ್ ಬರ್ಡ್ ಹಕ್ಕಿಗಳಲ್ಲಿ ಸಹ ಹೆಣ್ಣು ಗಂಡನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುವ ಕ್ರಮ ನಮ್ಮನ್ನು ಅಚ್ಚರಿಗೊಳಪಡಿಸುತ್ತದೆ. ಹಮ್ಮಿಂಗ್ ಬರ್ಡ್(Humming Bird) ಅಷ್ಟೊಂದು ಸಮಾಜಮುಖಿ ಪಕ್ಷಿಯಲ್ಲ.

ಅದು ಗುಂಪಾಗಿ ವಾಸಿಸುವ ಸಂಪ್ರದಾಯ ಇಟ್ಟುಕೊಂಡಿಲ್ಲ. ಹೆಣ್ಣು ಹಕ್ಕಿ, ಗಂಡು ಹಕ್ಕಿಯನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ ಸುಮಾರು ನೂರು ಗಂಡು ಹಕ್ಕಿಗಳು ಒಂದು ಕಡೆ ಸೇರಿಕೊಳ್ಳುತ್ತವೆ. ಆಗ ಹೆಣ್ಣು ಹಕ್ಕಿ ಯಾವುದಾದರೂ ಗಂಡನ್ನು ಇಷ್ಟ ಪಟ್ಟರೆ, ಗಂಡು ಹಕ್ಕಿ ಆಕಾಶದಲ್ಲಿ ಹಾರಾಡುತ್ತ ಗಾಳಿಯಲ್ಲಿ ನರ್ತನ ಮಾಡಬೇಕು. ಆಗ ಗಂಡು ಹಕ್ಕಿಗೆ ಹೆಣ್ಣು ಒಲಿಯುತ್ತದೆ. ರಾಜಹಂಸ ಪಕ್ಷಿಗಳಲ್ಲಿ ಸಹ ಹೆಣ್ಣು ಗಂಡನ್ನು ಆಯ್ಕೆ ಮಾಡುತ್ತದೆ. ಇಲ್ಲಿ ವಿಚಿತ್ರವೆಂದರೆ ಹೆಣ್ಣು ಪಕ್ಷಿ, ಗಂಡು ಪಕ್ಷಿ ಜೊತೆಯಲ್ಲಿ ಕೆಲಸಮಯ ಕಳೆಯುತ್ತವೆ, ಸಂತಾನವಾದರೆ ಸರಿ,

Bird

ಇಲ್ಲದಿದ್ದರೆ ಹೆಣ್ಣು ರಾಜಹಂಸ ಮತ್ತೊಂದು ಗಂಡು ಹಕ್ಕಿಯನ್ನು ಹುಡುಕುತ್ತದೆ. ಇನ್ನು ಗೂಬೆಯ ವಿಷಯಕ್ಕೆ ಬಂದರೆ, ಗೂಬೆಗಳಿಗೆ ಹೆಚ್ಚಾಗಿ ಎಲ್ಲಾ ಸಮಯದಲ್ಲಿಯೂ ಭಯವೇ ಅವರಿಸಿರುತ್ತದೆ. ಗಂಡು ಗೂಬೆ ಹೆಣ್ಣು ಗೂಬೆಯನ್ನು ಆಕರ್ಷಿಸಲು, ಆಹಾರವನ್ನು ಹೆಣ್ಣು ಗೂಬೆಯ ಸಮೀಪ ಇಡುತ್ತವೆ. ಹೆಣ್ಣು ಗೂಬೆಗೆ ಭಯ ಹೆಚ್ಚು, ಅದು ದೂರದಲ್ಲಿಯೇ ಇರುತ್ತದೆ. ಹೆಣ್ಣು ಗೂಬೆ ತನ್ನ ಭಯವೆಲ್ಲಾ ನಿವಾರಣೆಯಾದ ಮೇಲೆ ನಿಧಾನವಾಗಿ ಆಹಾರವನ್ನು ತಗೆದುಕೊಳ್ಳುತ್ತದೆ. ಹೀಗೆ ಗಂಡು ಹೆಣ್ಣನ್ನು ಆಕರ್ಷಿಸುತ್ತದೆ.


ಮನುಷ್ಯರಲ್ಲಿ ಮಾತ್ರವಲ್ಲ, ಪಕ್ಷಿಗಳಲ್ಲೂ ಕಾಳು ಹಾಕೋದು ಅಂದರೆ ಎಷ್ಟು ಕಷ್ಟ ಅಂತ ಈಗ ಗೊತ್ತಾಯ್ತಾ? ಇನ್ನೊಂದು ಕುತೂಹಲಕಾರಿ ವಿಷಯದಲ್ಲಿ ಎಂದ್ರೆ, ಮಾನವ ಜನ್ಮದಲ್ಲಿ ಅತ್ಯಂತ ಸುಂದರ ಎಂದ್ರೆ ಹೆಣ್ಣು, ಆದರೆ ಪಶು ಪಕ್ಷಿಗಳಿಗೆ ಇದು ಅನ್ವಯವಾಗುವುದಿಲ್ಲ. ಪ್ರಾಣಿ ಪಕ್ಷಿ ಪ್ರಪಂಚದಲ್ಲಿ ಗಂಡೇ ಸುಂದರ!

  • ಪವಿತ್ರ

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.