vijaya times advertisements
Visit Channel

ಮೋದಿ@72 ; ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ ಸೇರಿದಂತೆ ಗಣ್ಯರಿಂದ ಶುಭಾಶಯಗಳ ಮಹಾಪೂರ

narendra modi

New Delhi : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದು, ಎಲ್ಲಾ ರಾಜಕೀಯ (Political Parties) ಪಕ್ಷಗಳ ಮುಖಂಡರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Birthday Wishes to PM Narendra modi

ಪ್ರಧಾನಿ ಮೋದಿಯವರಿಗೆ ಜನ್ಮದಿನದಂದು ಶುಭ ಹಾರೈಸಿರುವ ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ನೌರ್ ಗಿಲೋನ್, ”

ಪ್ರಧಾನಿಯಾಗಿ ಮೋದಿ ಅವರು ನಮ್ಮ ನಾಗರಿಕತೆಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ನಮ್ಮ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಿದರು” ಎಂದು ಶುಭಹಾರೈಸಿದ್ದಾರೆ.

ಇದನ್ನೂ ಓದಿ : https://vijayatimes.com/priyank-kharge-allegation-against-state-bjp/

ರಾಷ್ಟ್ರಪತಿ (President Of India) ದ್ರೌಪದಿ ಮುರ್ಮು (Droupadi Murmu) ಅವರು “ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.

Political

ನೀವು ಹೋಲಿಸಲಾಗದ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸೃಜನಶೀಲತೆಯಿಂದ ನಡೆಸುತ್ತಿರುವ ರಾಷ್ಟ್ರ ನಿರ್ಮಾಣ ಅಭಿಯಾನವು ನಿಮ್ಮ ಅಡಿಯಲ್ಲಿ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ.

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ನಾನು ಬಯಸುತ್ತೇನೆ.” ಎಂದು ಟ್ವೀಟ್‌ (Tweet) ಮಾಡಿದ್ದಾರೆ.

ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಪ್ರಧಾನಿ ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದು, “ ಜನ್ಮದಿನದ ಸಂದರ್ಭದಲ್ಲಿ,

ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯದ ಶುಭಾಶಯಗಳು. ಶ್ರೀ ಪಶುಪತಿನಾಥರು ನಿಮ್ಮನ್ನು ಸದಾ ಕಾಪಾಡಲಿ” ಎಂದು ಟ್ವೀಟ್‌ ಮಾಡಿದ್ದಾರೆ.

narendra modi

“ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರಿಗೆ ಜನ್ಮದಿನದ ಶುಭಾಶಯಗಳು. ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival) ತಿಳಿಸಿದ್ದಾರೆ.

ಇನ್ನು ಪ್ರಧಾನಿ ಮೋದಿಯವರ ಜನ್ಮದಿನವನ್ನು ಆಚರಿಸಲು ಇಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಐತಿಹಾಸಿಕ ಪ್ರಾಜೆಕ್ಟ್ ಚೀತಾ ಮಿಷನ್ (Chitah Mission) ಅಡಿಯಲ್ಲಿ ನಮೀಬಿಯಾದಿಂದ ಆಗಮಿಸಿರುವ ಎಂಟು ಚಿರತೆಗಳನ್ನು ಮಧ್ಯಪ್ರದೇಶದ (MadhyaPradesh) ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ನಂತರ ವನ್ಯಜೀವಿ ಮತ್ತು ಪರಿಸರ, ಮಹಿಳಾ ಸಬಲೀಕರಣ,

https://youtu.be/E3HXILLVamE COVER STORY

ಕೌಶಲ್ಯ ಮತ್ತು ಯುವಜನ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಮೋದಿ ನಾಲ್ಕು ಭಾಷಣಗಳನ್ನು ಮಾಡಲಿದ್ದಾರೆ.
  • ಮಹೇಶ್‌ ಪಿ.ಎಚ್

Latest News

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು