Mumbai : ಮುಂಬೈ(Mumbai) ಮೂಲದ ಯುವತಿಯೊಬ್ಬರು ಶುಕ್ರವಾರ 2,500 ರೂ. ಮೌಲ್ಯದ ಬಿರಿಯಾನಿ ಊಟವನ್ನು ಬೆಂಗಳೂರಿನ(Bangalore) ಹೋಟೆಲ್ ನಿಂದ ಆರ್ಡರ್ ಮಾಡಿ, ತಾವು ನೆಲಸಿರುವ ವಿಳಾಸಕ್ಕೆ (biryani mumbai to bangalore)ಡೆಲಿವರಿ ಮಾಡಿಸಿಕೊಂಡಿದ್ದಾರೆ.

ದೇಶಾದ್ಯಂತ ಪ್ರತಿ ನಿಮಿಷಕ್ಕೆ 186 ಆರ್ಡರ್‌ಗಳನ್ನು ವಿತರಿಸುವುದರೊಂದಿಗೆ ಕಳೆದ ವರ್ಷ ಆಹಾರ ವಿತರಣಾ ಕಂಪನಿಯಾದ ಝೊಮಾಟೊದಲ್ಲಿ(Zometo) ಬಿರಿಯಾನಿ ಪ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ವರದಿಯಿಂದ ತಿಳಿದುಬಂದಿದೆ.
ಅದರಲ್ಲೂ ಆನ್‌ಲೈನ್(Online) ಮೂಲಕ ಬಿರಿಯಾನಿ ಊಟವನ್ನು ಹೆಚ್ಚಿನ ಸಂಖ್ಯೆಯಲ್ಲಿ(biryani mumbai to bangalore) ಜನರು ಆರ್ಡರ್ ಮಾಡುತ್ತಾರೆ.
ಸದ್ಯ ಇದೇ ರೀತಿ ಮುಂಬೈ ಮೂಲದ ಯುವತಿಯೊಬ್ಬಳು ಬಿರಿಯಾನಿ ಊಟವನ್ನು ಬೆಂಗಳೂರಿನ ರೆಸ್ಟೋರೆಂಟ್‌ನಿಂದ(Restaurent) ಆರ್ಡರ್ ಮಾಡಿ, ತಾನು ವಾಸಿಸುವ ವಿಳಾಸಕ್ಕೆ ಡೆಲಿವರಿ ಮಾಡಿಸಿಕೊಂಡಿದ್ದಾಳೆ!
ಈ ಬಗ್ಗೆ ಮಾತನಾಡಿರುವ ಯುವತಿ, ನಾನು ಬೆಂಗಳೂರಿನ ಹೋಟೆಲ್ ನಲ್ಲಿ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿ,
ಸ್ವೀಕರಿಸಿದ್ದೇನೆ ಎಂದು ತನ್ನ ಸಾಮಾಜಿಕ ಜಾಲತಾಣದ(Social Media) ಖಾತೆಯಲ್ಲಿ ಬರೆದು ಫೋಟೊದ ಜೊತೆಗೆ ಪೋಸ್ಟ್ ಮಾಡಿದ್ದಾರೆ.
ಆರ್ಡರ್ ಪುಟದ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್ ಮಾಡಿರುವ ಅವರು, ತದನಂತರ ಈ ಟ್ವೀಟ್(Tweet) ಅನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.
ಸ್ಕ್ರೀನ್‌ಶಾಟ್ ಮಾಹಿತಿ ಪ್ರಕಾರ ಬೆಂಗಳೂರಿನ ಮೇಘನಾ ಫುಡ್ಸ್‌ನಿಂದ ಯುವತಿ ಆರ್ಡರ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಒಂದು ಟ್ವೀಟ್ ಅನ್ನು ಝೊಮಾಟೊ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್(Twitter) ನಲ್ಲಿ ಹಂಚಿಕೊಂಡಿದ್ದು, ಸುಬಿ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನೀವು ಸಂತೋಷದ ಹ್ಯಾಂಗೊವರ್ ಹೊಂದಿರುತ್ತೀರಿ.
ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ. ಬಿರಿಯಾನಿ ಹೇಗಿತ್ತು? ಎಂದು ಬರೆದು ತಿಳಿಸಿತ್ತು. ಆರ್ಡರ್ ಪಡೆದ ಸುಬಿ ಎಂಬ ಹೆಸರಿನ ಮುಂಬೈ ಯುವತಿ, ಆಹಾರ ದೊರೆತ ಬಾಕ್ಸಿನ ಫೋಟೊವನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕ ನೆಟ್ಟಿಗರು, ಯುವತಿ ಸುಬಿ ಅವರ ಬೆಂಗಳೂರಿನ ರೆಸ್ಟೋರೆಂಟ್ ಆಯ್ಕೆಯನ್ನು ಹೊಗಳಿದರೇ,
ಇನ್ನು ಕೆಲವರು ಇಂಥ ಹುಚ್ಚು ಆಸೆ ಏಕೆ? ನಿಮಗೆ ಹಣ ಹೆಚ್ಚಾಗಿದೆ ಎಂಬಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಝೋಮೊಟೋ ಆಹಾರ ವಿತರಣಾ ಕಂಪನಿ, ಇಂಟರ್‌ಸಿಟಿ ಲೆಜೆಂಡ್ಸ್ ಸೇವೆಯನ್ನು ನೀಡುತ್ತದೆ.
ಅದು ಗ್ರಾಹಕರಿಗೆ ಪ್ರಮುಖ ಭಾರತೀಯ ನಗರಗಳಲ್ಲಿನ ಕೆಲವು ರೆಸ್ಟೋರೆಂಟ್‌ಗಳಿಂದ ಆಯ್ದ ವಿಶೇಷತೆಗಳನ್ನು ಆರ್ಡರ್ ಮಾಡಲು ಪ್ರಮುಖವಾಗಿ ಅನುಮತಿಸುತ್ತದೆ.
ಸದ್ಯ ಭಾರತದಲ್ಲಿ ಸ್ವಿಗ್ಗಿ(Swiggy) ಮತ್ತು ಝೊಮೊಟೊ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ!