ಬೆಂಗಳೂರು ನ 12 : ಬಿಟ್ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಇಲಾಖೆಗೂ ನಂಟಿರುವ ಬಗ್ಗೆ ಇತ್ತೀಚೆಗೆ ಆಡಿಯೋ ಒಂದು ಹೊರಬಿದ್ದಿದೆ. ರಾಜ್ಯ ರಾಜಕಾರಣದಲ್ಲಿನ ತಳಮಳಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣವು ದಿನಕ್ಕೊಂದು ಅಯಾಮ ಪಡೆದುಕೊಳ್ಳುತ್ತಿರುವ ಬೆನ್ನಲೆ ಹಿರಿಯ ಐಪಿಎಸ್ ಅಧಿಕಾರಿಗಳು ಪತರುಗುಟ್ಟುತ್ತಿದ್ದಾರೆ, ಹಗರಣದಲ್ಲಿ ತಮ್ಮ ಹೆಸರನಾದರೂ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿರುವ ಐಪಿಎಸ್ ಅಧಿಕಾರಿಗಳು, ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಳಹಂತದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುತ್ತಿರುವುದು ಇದೀಗ ‘ದಿ ಫೈಲ್’ ಬಹಿರಂಗವಾಗಿದೆ
ಈ ಹಗರಣದಲ್ಲಿ ಇದುವರೆಗೂ ಯಾವೊಬ್ಬ ಐಪಿಎಸ್ ಅಧಿಕಾರಿಯ ಹೆಸರು ಅಧಿಕೃತವಾಗಿ ಬಹಿರಂಗವಾಗಿಲ್ಲ ಆದರೂ ತನಿಖಾ ತಂಡವನ್ನು ಸಂಪರ್ಕಿಸುತ್ತಿರುವ ಅಧಿಕಾರಿಗಳು, ಹಗರಣದಲ್ಲಿ ಯಾರಲ್ಲಾ ಇದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖಾ ತಂಡದಲ್ಲಿರುವ ಕೆಲವರು ತಮ್ಮೊಂದಿಗೆ ನಿಕಟವಾಗಿರುವ ಮತ್ತು ಆಪ್ತರವಿಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿಗಳಿಗಷ್ಟೇ ಮಾಹಿತಿಯನ್ನು ಸೋರಿಕ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾದ ಆಡಿಯೋವೊಂದು ‘ದಿ ಫೈಲ್ಗೆ ಲಭ್ಯವಾಗಿದೆ.
ಸುಮಾರು ಎರಡೂವರೆ ನಿಮಿಷಗಳ ಕಾಲ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತನಿಖಾ ತಂಡದಲ್ಲಿದ್ದ. ಕೆಳಹಂತದ ಪೇದೆಯೊಬ್ಬರೊಂದಿಗೆ ಸಂಭಾಷಿಸಿದ್ದಾರೆ. ಈ ವೇಳೆ ಪೇದೆಯೊಬ್ಬರು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಗರಣದ ಕುರಿತು ತನಿಖೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪೇದೆಯೊಂದಿಗೆ ಸಂಭಾಷಿಸಿರುವ ಐಪಿಎಸ್ ಅಧಿಕಾರಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ.
ತನಿಖಾ ತಂಡದಲ್ಲಿದ್ದ ಪೇದೆಯೊಬ್ಬರ ಜತೆ ಸಂಭಾಷಿಸಿರುವ ಹಿರಿಯ ಐಪಿಎಸ್ ಅಧಿಕಾರಿಯು ಈ ಹಗರಣದಲ್ಲಿ ಹೋಂ ಮಿನಿಸ್ಟರ್ ಇದ್ದಾರಾ? ಐಪಿಎಸ್ಗಳು ಎಂದರೆ ಅಂದಾಜು ಯಾರ್ಯಾರು ಹೆಸರುಗಳು ಇವೆ, ಗುಪ್ತಚರ ಎಡಿಜಿಪಿ ಅವರು ಯಾವ್ಯಾವ ಐಪಿಎಸ್ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಗಾಗಿ ಪೇದೆಯೊಬ್ಬರ ಬಳಿ ಕೇಳಿಕೊಂಡಿರುವುದು ಆಡಿಯೋದಿಂದ ತಿಳಿದು ಬಂದಿದೆ.