India : ‘ಕ್ರಿಪ್ಟೋಕರೆನ್ಸಿ’ (Crypto currency) ಮೂಲಕ ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ಎಸಗಿರುವ ಶಂಕಿತ ಉಗ್ರರಿಗೆ ವಿದೇಶಗಳಿಂದ ಲಕ್ಷಾಂತರ (Bitcoin funds to terrorists) ರೂಪಾಯಿ
ನೆರವು ನೀಡಿದ ಆಘಾತಕಾರಿ ಅಂಶ ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡ ಬೆನ್ನಲ್ಲೇ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನ (Hacker Sri Krishna) ಬಿಟ್‌ಕಾಯಿನ್
ಹಗರಣದ ಮರು ತನಿಖೆ ನಡೆದಿದೆ. ಫೇಸ್‌ಬುಕ್ (Facebook) ಮತ್ತು ಟೆಲಿಗ್ರಾಂ (Telegram) ಮೂಲಕ ಬಿಟ್‌ಕಾಯಿನ್‌ಗಳನ್ನು (Bit coin) ಸಂಗ್ರಹಿಸಿ ಡಾರ್ಕ್‌ನೆಟ್ ಮೂಲಕ ವಿವಿಧ ವ್ಯಾಲೆಟ್‌ಗಳಿಗೆ
ವರ್ಗಾಯಿಸಿದ್ದಾರೆ ಎಂದು (Bitcoin funds to terrorists) ತನಿಖೆಯಿಂದ ದೃಢಪಟ್ಟಿದೆ.

ಹಣ ಕಳುಹಿಸಲು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿರುವ ಭಯೋತ್ಪಾದಕ ಗುಂಪುಗಳು ಈಗ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳಿಗೆ ಕಣ್ತಪ್ಪಿಸಲು ಡಿಜಿಟಲ್ ಕರೆನ್ಸಿಗಳನ್ನು
(Digital Currency) ಬಳಸುತ್ತಿವೆ. ಮಂಗಳೂರು(Mangalore) ಕುಕ್ಕರ್ ಬಾಂಬ್ ಸ್ಫೋಟ ಮತ್ತು ಶಿವಮೊಗ್ಗ (Shimogga) ಟ್ರಯಲ್ ಬಾಂಬ್ ಸ್ಫೋಟ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರರಿಗೆ ಐಸಿಸ್ ಹ್ಯಾಂಡ್ಲರ್ಗಳು ಡಾರ್ಕ್
ವೆಬ್ ಮೂಲಕ ಕ್ರಿಪ್ಟೋ ಕರೆನ್ಸಿ ಕಳುಹಿಸಿರುವುದು ದೃಢಪಟ್ಟಿದೆ. ಎನ್‌ಐಎ(NIA) ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಗಪ್‌ಚುಪ್ ಆಗಿರುವ ಪಾಕಿಸ್ತಾನದಿಂದ ಭಾರತದ ಮೇಲೆ ಸೈಬರ್ ಯುದ್ಧ! ಭಾರತೀಯ ಸೇನೆ, ಐಐಟಿಗಳೇ ಪಾಕಿಸ್ತಾನಿ ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್!
ಡಾರ್ಕ್ ವೆಬ್ ನಲ್ಲಿನ(Dark Web) ಯಾವುದೇ ರೀತಿಯ ವಹಿವಾಟು ನಡೆಸಿದರೂ ಕೂಡ ಬಳಕೆದಾರರ ವೈಯಕ್ತಿಕ ಮಾಹಿತಿ, ಸ್ಥಳದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಪೋಲೀಸ್ ಮತ್ತು ತನಿಖಾ ಸಂಸ್ಥೆಗಳಿಗೆ
ಇದು ಕಷ್ಟವಾಗಬಹುದು. ಡಾರ್ಕ್ ವೆಬ್ ನಲ್ಲಿ ನೂರಾರು ಸೈಟ್‌ಗಳಿವೆ ಮತ್ತು ನೀವು ಇಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸವನ್ನು ಕಂಡುಹಿಡಿಯುವುದು ಸುಲಭವಲ್ಲ. ಡಾರ್ಕ್
ವೆಬ್‌ನಲ್ಲಿ ಭಯೋತ್ಪಾದನೆಗೆ ಈ ರೀತಿ ಹಣ ನೀಡಲಾಗುತ್ತದೆ. ತನಿಖಾ ಸಂಸ್ಥೆಯ ಪ್ರಕಾರ, ಭಯೋತ್ಪಾದಕ ಗುಂಪು 2018 ರಿಂದ ಡಿಜಿಟಲ್ ಕರೆನ್ಸಿಯನ್ನು ಬಳಸುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಸಂಖ್ಯೆ ಹೆಚ್ಚುತ್ತಿದೆ.

2020 ರಲ್ಲಿ, ಕ್ರಿಪ್ಟೋಕರೆನ್ಸಿಗಳ ಒಟ್ಟು ಅಕ್ರಮ ವ್ಯಾಪಾರದ 0.05% ಭಯೋತ್ಪಾದಕ ಸಂಘಟನೆಗಳಿಂದ ಹಣವನ್ನು ಪಡೆದಿದೆ. ವಿಶ್ವಾದ್ಯಂತ, ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಬಿಟ್‌ಕಾಯಿನ್ ಮೂಲಕ
ಹೆಚ್ಚು ಹಣ ಗಳಿಸುವ ಸಂಸ್ಥೆ ಎಂದು ಗುರುತಿಸಲಾಗಿದೆ. ಭಯೋತ್ಪಾದಕರಿಗೆ ಧನಸಹಾಯ ಮಾಡುತ್ತಿರುವ ಹಮಾಸ್ ಗುಂಪಿಗೆ ಸೇರಿದ ಬಿಟ್ ಕಾಯಿನ್ ವ್ಯಾಲೆಟ್ ಗಳನ್ನು ಇಸ್ರೇಲ್ ರಕ್ಷಣಾ ಸಚಿವಾಲಯ ಮುಟ್ಟುಗೋಲು
ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಸಿಐಡಿ(CID) ಅಧಿಕಾರಿಗಳು ಇದೀಗ ಕರ್ನಾಟಕದಲ್ಲಿ(Karnataka) ಬಿಟ್ ಕಾಯಿನ್ ಹಗರಣದ ಕುರಿತು ಇಸ್ರೇಲ್ ತನಿಖಾ ಸಂಸ್ಥೆಗಳ ನೆರವು ಪಡೆಯಲು ಯೋಚಿಸುತ್ತಿದ್ದಾರೆ.
ಡಾರ್ಕ್ ವೆಬ್ ನಲ್ಲಿ ಶಾರೀಕ್ ಖಾತೆ
ನವೆಂಬರ್ 19, 2022 ರಂದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಭಯೋತ್ಪಾದಕ ಮೊಹಮ್ಮದ್ ಶಾರಿಕ್ (Mohammed Shariq) ಡಾರ್ಕ್ ವೆಬ್‌ನಲ್ಲಿ ಖಾತೆಯನ್ನು ಹೊಂದಿದ್ದಾನೆ.
ವಿದೇಶದಿಂದ ಅವರ ಖಾತೆಗೆ ಡಾಲರ್(Doller) ಮತ್ತು ಬಿಟ್ ಕಾಯಿನ್ ಬಂದಿತ್ತು. ತನಿಖೆಯ ವೇಳೆ ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿ, ಸ್ನೇಹಿತರು, ಪರಿಚಯಸ್ಥರು ಸೇರಿದಂತೆ ನೂರಾರು ಜನರ
ಖಾತೆಗಳಿಗೆ ವರ್ಗಾಯಿಸಿ, ಅವರ ಖಾತೆಯಿಂದ ಮತ್ತೆ ಇತರರಿಗೆ ವರ್ಗಾಯಿಸಿದ್ದರು.

ಆರ್ಥಿಕ ನೆರವು ಸಂಬಂಧ 65 ಕೇಸ್
2018 ರಿಂದ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಭಯೋತ್ಪಾದಕರಿಗೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 65 ಕ್ಕೂ ಹೆಚ್ಚು ಪ್ರಕರಣಗಳನ್ನು ಎನ್ಐಎ ದಾಖಲಿಸಿದೆ. ಹಣ ರವಾನೆ ಕಾಯ್ದೆ 2022 ರ ಅಡಿಯಲ್ಲಿ 24
ಪ್ರಕರಣಗಳಲ್ಲಿ ಆರೋಪಗಳನ್ನು ಹಾಕಲಾಗಿದೆ. ಉಳಿದ ಪ್ರಕರಣಗಳ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಬಿಟ್‌ಕಾಯಿನ್ ನೆರವಿಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿಲ್ಲ
ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ಸಿಎಫ್ಟಿ ಘಟಕ ಸ್ಥಾಪನೆ:
ಭಯೋತ್ಪಾದಕರ ಆರ್ಥಿಕ ಶಕ್ತಿಯನ್ನು ನಿಗ್ರಹಿಸಲು ಕೇಂದ್ರ ಸರ್ಕಾರವು ಗೃಹ ಸಚಿವಾಲಯದಲ್ಲಿ ಎನ್ಐಎ ಸುಪರ್ದಿಯಲ್ಲಿ ಟೆರರ್ ಫಂಡಿಂಗ್ ಮತ್ತು ಫೇಕ್ ಕರೆನ್ಸಿ (ಟಿಎಫ್ಎಫ್ಸಿ) ಸೆಲ್ ಮತ್ತು ಕೌಂಟರಿಂಗ್
ಆಫ್ ಫೈನಾನ್ಸಿಂಗ್ ಆಫ್ ಟೆರರಿಸಂ (ಸಿಎಫ್ಟಿ ಸೆಲ್) ಸ್ಥಾಪನೆ ಮಾಡಲಾಗಿದೆ. ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆ ಬಗ್ಗೆ ಈ ಎರಡೂ ಘಟಕಗಳು ನಿಗಾ ವಹಿಸಲಿವೆ.
ರಶ್ಮಿತಾ ಅನೀಶ್