ವಿಶ್ವಾದ್ಯಂತ(World Wide) ಇರುವ ಹಲವು ದೇಶಗಳಲ್ಲಿ ವಿಭಿನ್ನ, ವಿಚಿತ್ರ ಸಂಪ್ರದಾಯಗಳು(Tradition) ಇಂದಿಗೂ ರೂಢಿಯಲ್ಲಿವೆ. ಹುಟ್ಟಿನಿಂದ ಸಾವಿನವರೆಗೆ ಕೆಲವು ವಿಶೇಷ ಸಂಪ್ರದಾಯಗಳಿರುತ್ತವೆ.
ಕೆಲವು ಸಂಪ್ರದಾಯಗಳ ಆಚರಣೆಗಳು ಮನಸ್ಸಿಗೆ ಸಂತೋಷ ಕೊಟ್ಟರೆ, ಇನ್ನೂ ಕೆಲವು ಆಚರಣೆಗಳು ಮನಸ್ಸಿಗೆ ತುಂಬಾ ಘಾಸಿ ಮಾಡುತ್ತವೆ. ಅನೇಕ ಸ್ಥಳಗಳಲ್ಲಿ ಈ ಸಂಪ್ರದಾಯಗಳು ಅತ್ಯಂತ ಕ್ರೂರ ಮತ್ತು ನೋವಿನಿಂದ ಕೂಡಿರುತ್ತವೆ.

ಅಂತಹ ಒಂದು ಸಂಪ್ರದಾಯವು ಇಂಡೋನೇಷ್ಯಾದ ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ‘ಡಾನಿ’ ಬುಡಕಟ್ಟು(bizarre mourning practice) ಜನಾಂಗದಲ್ಲಿಯೂ ಇದೆ.
ಈ ಸಂಪ್ರದಾಯದ ಬಗ್ಗೆ ನೀವು ತಿಳಿದರೆ ಖಂಡಿತ ಬೆಚ್ಚಿಬೀಳುವುದಂತೂ ಖಚಿತ. ಈ ಸಂಪ್ರದಾಯ ಅತ್ಯಂತ ಅಮಾನವೀಯ ಎನಿಸುತ್ತದೆ. ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ (mourning practice) ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.
ಇದರ ಕಾರಣ ಹಳೆಯ ಸಂಪ್ರದಾಯವಂತೆ, ಈ ಸಂಪ್ರದಾಯದ ಪ್ರಕಾರ, ಕುಟುಂಬದ ಮುಖ್ಯಸ್ಥನ ಸಾವಿನ ಬಳಿಕ ಸಂತಾಪ ಸೂಚಕವಾಗಿ ಕುಟುಂಬದ ಮಹಿಳೆಯರ ಎರಡೂ ಕೈಗಳ ಬೆರಳುಗಳನ್ನು ಕತ್ತರಿಸಲಾಗುತ್ತದೆ. ವರದಿಯೊಂದರ ಪ್ರಕಾರ, ಇದು ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂಬುದು ಅಲ್ಲಿನ ಜನರ ಬಲವಾದ ನಂಬಿಕೆ. ಈ ಅವಧಿಯಲ್ಲಿ ಮಹಿಳೆಯರಿಗಾಗುವ ನೋವು, ಎಂತಾ ಕಲ್ಲೆದೆಯನ್ನೂ ಕೂಡ ಕರಗಿಸುತ್ತದೆ.

ಬೆರಳನ್ನು ಕತ್ತರಿಸುವ ಮೊದಲು, ಮಹಿಳೆಯರ ಬೆರಳುಗಳನ್ನು ಹಗ್ಗದಿಂದ ಕಟ್ಟಲಾಗುತ್ತದೆ. ಇದರಿಂದ ಬೆರಳುಗಳಿಗೆ ರಕ್ತದ ಹರಿವು ನಿಲ್ಲುತ್ತದೆ. ನಂತರ ಅವರ ಬೆರಳುಗಳನ್ನು ಕೊಡಲಿಯಿಂದ ಕತ್ತರಿಸಲಾಗುತ್ತದೆ.
https://vijayatimes.com/rbi-increased-repo-rates-2/
ಈ ಅವಧಿಯಲ್ಲಿ ಕೆಳಕ್ಕೆ ಬೀಳುವ ಬೆರಳುಗಳ ತುಂಡುಗಳನ್ನು ಸುಟ್ಟು ಬೂದಿ ಮಾಡಲಾಗುತ್ತದೆ ಅಥವಾ ಅವುಗಳನ್ನು ವಿಶೇಷ ಸ್ಥಾನದಲ್ಲಿ ಇಡಲಾಗುತ್ತದೆ. ಆದರೆ, ಪಪುವಾ ಗಿನಿಯಾದಲ್ಲಿ ಪ್ರಸ್ತುತ ಈ ಆಚರಣೆಯನ್ನು ನಿರ್ಬಂಧಿಸಲಾಗಿದೆ.
ಆದರೆ, ಬುಡಕಟ್ಟು ಜನಾಂಗದ ಕೆಲ ಮಹಿಳೆಯರಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಕೂಡ ಗಮನಿಸಬಹುದಾಗಿದೆ ಮತ್ತು ಇಂದಿಗೂ ಕೂಡ ಕತ್ತರಿಸಲಾದ ಮೊಂಡು ಬೆರಳ ಜೊತೆಯೇ ಬದುಕುತ್ತಿದ್ದಾರೆ.
ಏನೇ ಇರಲಿ ದೇಹಕ್ಕೆ, ಮನಸ್ಸಿಗೆ ನೋವಾಗುವ ಇಂತಹ ಆಚರಣೆಗಳನ್ನು ಸಹಿಸಲು ಸಾಧ್ಯವಿಲ್ಲ .ಹೀಗಾಗಿ ಇಂತಹ ಹೀನ ಪದ್ಧತಿಗಳನ್ನ ನಿಷೇಧಿಸಲೇಬೇಕಿದೆ!
ಮಾಹಿತಿ ಸಂಗ್ರಹ : ಪವಿತ್ರ