download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಸ್ವಾಮಿ ವಿವೇಕಾನಂದರ ಸ್ಪೂರ್ತಿಯ ಮಾತುಗಳು ಇಂದಿಗೂ ಪ್ರಸ್ತುತ – ಸಂದೀಪ್ ಹರಿವಿನಂಗಡಿ

ಯುವಕರಲ್ಲಿ ದೇಶಸೇವೆಯ ಬಗ್ಗೆ ಸನಾತನ ಧರ್ಮದ ಬಗ್ಗೆ ಸ್ಪೂರ್ತಿಯನ್ನು ತುಂಬಿದರು. ಸ್ವಾಮಿ ವಿವೇಕಾನಂದ ತತ್ವಗಳನ್ನು ನಾವು  ಜೀವನದಲ್ಲಿ ಅಳವಡಿಕೊಂಡರೆ ಅದು ನಾವು ಅವರಿಗೆ ಕೊಡುವ ನಿಜವಾದ ಗೌರವವಾಗುತ್ತದೆ. ಅವರ ಆದ್ಯಾತ್ಮಿಕ ಅಂಶಗನ್ನು ಸ್ಪೂರ್ತಿಯಾಗಿ ಪಾಲಿಸಿದರೆ ನಾವು ಅವರಿಗೆ ಸನಾತನ ಧರ್ಮದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

ಚಿಕ್ಕಮಗಳೂರು ಜ 12 : ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿ ಅವರು ಸ್ಪೂರ್ತಿಯ ಮಾತುಗಳು ಇಂದಿಗೂ ಕೂಡ ಹಲವರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂದೀಪ್‌ ಹರಿವಿನಂಗಡಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  39ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯೆಜಿಸಿದ ತರುಣನ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ದೇಶಕಂಡ ವೀರ, ಅಪ್ರತಿಮ ಚಿಂತಕ, ಆದ್ಯಾತ್ಮ ಜೀವಿ ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ರಾಷ್ಟ್ರೀಯತೆಯನ್ನು ದೇಶ ವಿದೇಶಗಳಲ್ಲಿ ಪ್ರಚಲಿತಗೊಳಿಸಿ ಯುವಕರಲ್ಲಿ ದೇಶಸೇವೆಯ ಬಗ್ಗೆ ಸನಾತನ ಧರ್ಮದ ಬಗ್ಗೆ ಸ್ಪೂರ್ತಿಯನ್ನು ತುಂಬಿದರು. ಸ್ವಾಮಿ ವಿವೇಕಾನಂದ ತತ್ವಗಳನ್ನು ನಾವು  ಜೀವನದಲ್ಲಿ ಅಳವಡಿಕೊಂಡರೆ ಅದು ನಾವು ಅವರಿಗೆ ಕೊಡುವ ನಿಜವಾದ ಗೌರವವಾಗುತ್ತದೆ. ಅವರ ಆದ್ಯಾತ್ಮಿಕ ಅಂಶಗನ್ನು ಸ್ಪೂರ್ತಿಯಾಗಿ ಪಾಲಿಸಿದರೆ ನಾವು ಅವರಿಗೆ ಸನಾತನ ಧರ್ಮದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯು ಪೆರುಮಾಳರವರು ವಿಶ್ವಧರ್ಮ ಸಮ್ಮೇಳನಕ್ಕೆ ಸ್ವಾಮಿ ವಿವೇಕಾನಂದರ ಹೆಸರನ್ನು ಮಂಡನೆಮಾಡಿ, ಸಹಾಯವನ್ನು ಮಾಡಿ ಭಾರದ ದೇಶವನ್ನು ವಿಶ್ವಧರ್ಮ ಸಮ್ಮೇಳನದಲ್ಲಿ ಮೆರಗುವಂತೆ ಮಾಡುವಲ್ಲಿ ಚಿಕ್ಕಮಗಳೂರಿನ ಪೆರುಮಾಳರವರು ಕಾರಣ ಎಂದರು ತಿಳಿಸಿದರು.

ಸ್ವಾರ್ಥ ಬಿಟ್ಟು ಸಾಮಾಜಿಕ ಚಿಂತನೆಗಳನ್ನು ಮಕ್ಕಳಲ್ಲಿ ಮೈಗೂಡಿಸಬೇಕು, 15ವರ್ಷಕ್ಕಿಂತ ಮಕ್ಕಳು ಶೇ30% ದೇಶದಲ್ಲಿದ್ದಾರೆ. ಅವರನ್ನು ಸಮಾಜಕ ಮುಖಿ ಕಾರ್ಯಕ್ರಮಗಳ ಮೂಲಕ ದೇಶ ಕಟ್ಟಲು ಪ್ರೇರೆಪಿಸಬೇಕು ಈ ಸಂದರ್ಭದಲ್ಲಿ ತಿಳಿಸಿದರು

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪ್ರೇಮ್‌ ಕುಮಾರ್‌ ಮಾತನಾಡಿ ರಾಮಕೃಷ್ಣ ಪರಮಹಂಸರ ವಿಚಾರಗಳ ಪ್ರೇರಣೆಯಿಂದ ಸನ್ಯಾಸತ್ವನ್ನು ಸ್ವೀಕರಿಸಿದ ಸ್ವಾಮಿ ವಿವೇಕಾನಂದರು ಸಮಾಜದಲ್ಲಿ ಯುವಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುವುದರ ಜೊತೆಗೆ ದೇಶವನ್ನು ಒಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾರೆ. ಅವರು ಅವರ ಭಾಷಣಗಳ ಜೊತೆಗೆ ಪ್ರಪಂಚದ ಹಲವು ಭಾಗಗಳಲ್ಲಿ ಸಂಚರಿಸಿ ಅಲ್ಲಿನ ವೈವಿಧ್ಯತೆಯ ಬಗ್ಗೆ ಅಧ್ಯಯನ ಮಾಡಿ ಭಾರತವನ್ನು ವಿಶ್ವಮಟ್ಟದಲ್ಲಿ ಗುರತಿಸುವಂತೆ ಮಾಡುತ್ತಾರೆ. ಜೊತೆಗೆ ಹಲವು ಯುವಕರಿಗೂ ದಾರಿ ದೀಪವಾಗುತ್ತಾರೆ.

ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷರಾದ ಮಧುಕುಮಾರ್‌, ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ಯುವಮೋರ್ಚಾ ಉಪಾಧ್ಯಕ್ಷರಾದ ಸಚಿನ್‌, ಶಶಿ ಆಲ್ದೂರ್‌, ಸಂತೋಷ್‌, ಆದರ್ಶ್‌, ಕೌಶಿಕ್‌, ಮನೋಹರ್‌ ಹಾಗೂ ಮತ್ತಿತ್ತರರು ಹಾಜರಿದ್ದರು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article