Bengaluru : ವಿಧಾನಸೌಧದಲ್ಲಿ(BJP Bribery Couch Government) ಲಂಚಕ್ಕಾಗಿ ತಂದ 10 ಲಕ್ಷ ರೂಪಾಯಿ ಪತ್ತೆಯಾದ ಪ್ರಕರಣದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯಲಾರಂಭಿಸಿವೆ. ಅದ್ರಲ್ಲೂ ಕಾಂಗ್ರೆಸ್ ಪಕ್ಷ(Congress) ಬಿಜೆಪಿ ಸರ್ಕಾರವನ್ನು ಲಂಚ-ಮಂಚದ ಸರ್ಕಾರ ಎಂದು ಹೀಗಳೆದು ಕಟುವಾಗಿ ನಿಂದಿಸಿದೆ.
ಸ್ಯಾಂಟ್ರೋ ರವಿಯನ್ನು(Santro Ravi) ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆಂಬಲವೇ ಈ ಸ್ಯಾಂಟ್ರೋ ರವಿ! ವೇಶ್ಯಾವಾಟಿಕೆಯ ದಲ್ಲಾಳಿಯೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೇನು ಕೆಲಸ?
ಅವರೊಂದಿಗೆ ನೆಂಟಸ್ತಿಕೆ ಏಕೆ? ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಕೈಯ್ಯೊಳಗಿದ್ದಾರೆ ಎನ್ನುತ್ತಾನೆ ಸ್ಯಾಂಟ್ರೋ ರವಿ. ತನಿಖೆಗೆ ಕರೆದ ಪೊಲೀಸರಿಗೇ ಆವಾಜ್ ಹಾಕುತ್ತಾನೆ. ವರ್ಗಾವಣೆ ಮಾಡಿಸುವುದು ನನಗೆ ಲೀಲಾಜಾಲ ಎನ್ನುತ್ತಾನೆ.
ಗೃಹಸಚಿವರೇ ಅವನ ಈ ಆತ್ಮವಿಶ್ವಾಸದ ಹಿಂದಿನ ಶಕ್ತಿಯಾಗಿದ್ದಾರಾ? ವಿಧಾನಸೌಧ, ಕುಮಾರ ಕೃಪವೇ ಸ್ಯಾಂಟ್ರೋ ರವಿಯ ಕರ್ಮಭೂಮಿ! ಆಡಳಿತ ಪಕ್ಷದ ಮಂತ್ರಿಗಳು, ಅಧಿಕಾರಿಗಳೆಲ್ಲ ಈತನ ಜೇಬಿನಲ್ಲಿದ್ದಾರೆ.

ಸಚಿವರೊಂದಿಗೆ ಸಹಕರಿಸಲು ಪತ್ನಿಗೆ ಕಿರುಕುಳ ಕೊಟ್ಟಿದ್ದನಂತೆ, ಯಾರು ಆ ಸಚಿವರು ಸಿಎಂ ಬೊಮ್ಮಾಯಿ(BJP Bribery Couch Government) ಅವರೇ? ಹಾದಿ ಬೀದಿಯಲ್ಲಿರುವ ಅಕ್ರಮ ದಂಧೆಕೋರರು ಬಿಜೆಪಿ ಸರ್ಕಾರವನ್ನು ಅಲ್ಲಾಡಿಸುತ್ತಿದ್ದಾರೆಯೇ? ಇದು “ಲಂಚ – ಮಂಚದ ಸರ್ಕಾರ” ಎನ್ನುವುದು ಪ್ರತಿ ದಿನವೂ ಸಾಬೀತಾಗುತ್ತಿದೆ.
ಬಿಜೆಪಿ(BJP) ಸರ್ಕಾರದಲ್ಲಿ ಇರುವುದು ಎರಡೇ ಲಂಚದ ಸದ್ದು, ಮಂಚದ ಸದ್ದು! ಇತ್ತೀಚೆಗೆ ಬೆಳಕಿಗೆ ಬಂದಷ್ಟೇ ವೇಗವಾಗಿ ಮುಚ್ಚಿಹಾಕಿದ್ದ ಸಿಎಂ ಕಾರ್ಯದರ್ಶಿಯ ಹನಿ ಟ್ರಾಪ್ ಪ್ರಕರಣದ ಹಿಂದೆ ಇದೇ ಸ್ಯಾಂಟ್ರೋ ರವಿ ಪಾತ್ರವಿತ್ತೇ? ಕಡತ ನಾಪತ್ತೆಯಲ್ಲೂ ಕೈವಾಡವಿದೆಯೇ? ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳ ಮುಖೇನ ಬಿಜೆಪಿ ಪಕ್ಷದ ನಾಯಕರನ್ನು ಪ್ರಶ್ನಿಸಿದೆ.
ಇದನ್ನೂ ಓದಿ: https://vijayatimes.com/wells-fargo-fired-man/
ವಿಧಾನಸೌಧಕ್ಕೆ ಅಧಿಕಾರಿಯೊಬ್ಬರು 10 ಲಕ್ಷ ರೂ. ತಂದಿರುವ ಪ್ರಕರಣ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿಧಾನಸೌಧದಿಂದಲೇ ನಡೆಯುತ್ತಿದೆ ಎಂಬುದಕ್ಕೆ ಹಾಗೂ ಸರ್ಕಾರ 40% ಪರ್ಸೆಂಟ್ ಕಮಿಷನ್‌ಗೆ ಒತ್ತಡ ಹೇರುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಆರೋಪಕ್ಕೆ ಸಾಕ್ಷಿ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ(Priyanka kharge) ಕೂಡ ಮಾತನಾಡಿದ್ದು, ಪಿಡಬ್ಲ್ಯೂ(PW) ಇಲಾಖೆಯ ಒಬ್ಬ ಕಿರಿಯ ಇಂಜಿನಿಯರ್ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು? ಅದನ್ನು ವಿಧಾನಸೌಧದ ಒಳಗೆ ಇಷ್ಟು ಧೈರ್ಯವಾಗಿ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಅದನ್ನು ಯಾವ ಅಧಿಕಾರಿ, ಮಂತ್ರಿಗಳಿಗೆ ಕೊಡಲು ಹೋಗಿದ್ದರು? ಇದೆಲ್ಲಾ ತನಿಖೆ ಆಗಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.