ಲಕ್ನೋ ಫೆ 2 : ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ನಡೆಯುತ್ತಿದ್ದು, ಲಕ್ನೋದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಮಾಜವಾದಿ ಪಕ್ಷದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಹಾಗೂ ಬಿಜೆಪಿ ಸಂಸದ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಇಬ್ಬರಿಗೂ ಟಿಕೆಟ್ ನೀಡದೆ ಬಿಜೆಪಿ ಶಾಕ್ ನೀಡಿದೆ.
ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಅಪರ್ಣಾ ಯಾದವ್ ಬಿಜೆಪಿ ಸೇರಲು ಪ್ರಮುಖ ಕಾರಣ ಎಸ್ಪಿ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎನ್ನುವುದೇ ಕಾರಣ ಎನ್ನಲಾಗಿತ್ತು. ಇದನ್ನು ಅಖಿಲೇಶ್ ಕೂಡ ಹೇಳಿಕೊಂಡಿದ್ದರು. ಆದರೆ ಅಪರ್ಣಾ ಯಾದವ್ ಈ ವಿಚಾರವನ್ನು ತಳ್ಳಿ ಹಾಕಿದ್ದರು.

ತಾವು ಎಸ್ಪಿ ತೊರೆಯಲು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎನ್ನುವ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಜಿ ಅವರ ನೀತಿಗಳಿಂದ ನಾನು ಪ್ರಭಾವಿತಳಾಗಿದ್ದೆ” ಎಂದಿದ್ದರು. ಈ ಬಗ್ಗೆ ಬಿಜೆಪಿ ಸೇರ್ಪಡೆಯಾಗುವ ದಿನವೇ ಸ್ಪಷ್ಟಪಡಿಸಿದ್ದ ಅಪರ್ಣಾ ಅವರು ನಾನು ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಗೆ ಬಂದಿಲ್ಲ. ನಾನು ಚುನಾವಣೆಯುದ್ದಕ್ಕೂ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. 2017ರಲ್ಲಿ ಅಪರ್ಣಾಗೆ ಸೋಲು.

2017 ರ ಎಸ್ಪಿಯಿಂದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಎಸ್. ಅಪರ್ಣಾ ಯಾದವ್ ಅವರು ಸುಮಾರು 34,000 ಮತಗಳಿಂದ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಬಿಜೆಪಿಯ ರೀಟಾ ಬಹುಗಣ ಜೋಶಿ ವಿರುದ್ಧ ಸೋತಿದ್ದರು. ಉತ್ತರ ಪ್ರದೇಶದಲ್ಲಿ ಈ ಭಾರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದ 403 ಸೀಟುಗಳಲ್ಲಿ 202 ಬಹುಮತದ ಮ್ಯಾಜಿಕ್ ಸಂಖ್ಯೆಯಾಗಿದೆ. ಈ ಕ್ಷೇತ್ರಗಳು ಏಳು ವಿಶಾಲ ಪ್ರದೇಶಗಳಲ್ಲಿ ಹಂಚಿ ಹೋಗಿವೆ. ಪಶ್ಚಿಮ ಉತ್ತರ ಪ್ರದೇಶ (44), ರೆಹೆಲ್ಖಂಡ್ (52), ದೊಯಬ್ (73), ಬುಂಡೇಲ್ಖಂಡ್ (19), ಪೂರ್ವ ಯುಪಿ (76) ಮತ್ತು ಈಶಾನ್ಯ ಯುಪಿ (61).ಸ್ಥಾನಗಳಿವೆ.