
ಜವಾಹರಲಾಲ ನೆಹರೂ (JAWARLAL NEHRU) ವಿಶ್ವವಿದ್ಯಾಲಯ ಮತ್ತು ಸಾವರ್ಕರ್(SAVARKAR) ಅಧ್ಯಯನ ಪೀಠದಲ್ಲಿ ಬೋಧಿಸಲಾಗುವ ಅಧ್ಯಯನ ವಿಷಯಗಳ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ವ್ಯಂಗ್ಯವಾಡಿವೆ.
ತುಮಕೂರು (TUMKUR) ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಒಪ್ಪಿಗೆ ನೀಡಿರುವುದರ ಕುರಿತು, “ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ. ಅಧ್ಯಯನದ ವಿಷಯಗಳೇನು?https://vijayatimes.com/case-on-shivarathri-muruga-sharana/
- ‘ಕ್ಷಮಾಪಣಾ ಪತ್ರ’ಗಳು ಬರೆದಿದ್ದು ಯಾಕೆ?
- ‘ಕ್ವಿಟ್’ ಇಂಡಿಯಾ ಚಳುವಳಿ ವಿರೋಧಿಸಿದ್ದು.
- ‘ಮುಸ್ಲಿಂ ಲೀಗ್’ ಜೊತೆ ಸೇರಿ ಪ್ರಾಂತೀಯ ಸರ್ಕಾರ ರಚಿಸಿದ್ದು
- ನೇತಾಜಿ ವಿರುದ್ಧ ಬ್ರಿಟಿಷಗೆ ಸಹಾಯ
- ಬ್ರಿಟಿಷರಿಂದ ಪೆನ್ಷನ್ ಪಡೆದಿದ್ದು ಈ ಎಲ್ಲದರ ಬಗ್ಗೆ ಅಧ್ಯಯನವಾಗಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ
- ಎಡ್ವಿನಾಗೆ ನೆಹರೂ ಬರೆದ ಪತ್ರದ ಬಗ್ಗೆ
- ಚೀನಾಕ್ಕೆ ನೆಹರೂ ಭೂಮಿ ದಾನ ಮಾಡಿದ್ದರ ಬಗ್ಗೆ
- ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಸೋಲಿಸಿದ ಬಗ್ಗೆ
- ದೇಶ ವಿಭಜನೆಗೆ ನೆಹರೂ ನೀಡಿದ ಕೊಡುಗೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದೆ.
ಇನ್ನು ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯದ 6ನೇ ಸಿಂಡಿಕೇಟ್‌ಸಭೆಯಲ್ಲಿ ವೀರ್‌ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿತ್ತು. ಇದಕ್ಕಾಗಿ ವಿಶ್ವವಿದ್ಯಾಲಯದ ಆಂತರಿಕ ನಿಧಿ ಬಳಸಿಕೊಳ್ಳಲು ಸರ್ವಾನುಮತದಿಂದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
https://vijayatimes.com/case-on-shivarathri-muruga-sharana/
ಸಿಂಡಿಕೇಟ್ ಸದಸ್ಯ ವಿನಯ್ ಅವರು ಸಭೆಯ ಅಜೆಂಡಾದಲ್ಲಿ ವೀರ್‌ಸಾವರ್ಕರ್ ಪೀಠ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಹೀಗಾಗಿ ವಿಶ್ವವಿದ್ಯಾಲಯ ಸರ್ವಾನುಮತದಿಂದ ಪೀಠ ಸ್ಥಾಪನೆಗೆ ಒಪ್ಪಿಗೆ ನೀಡಿದೆ.