ನವದೆಹಲಿ : ಲೋಕಸಭೆಯಲ್ಲಿನ(Loksabha) ಕಾಂಗ್ರೆಸ್ ನಾಯಕ(Congress Leader) ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ(President) ದ್ರೌಪದಿ ಮುರ್ಮು(Droupadi Murmu) ಕುರಿತು ಬಳಸಿರುವ ಪದವನ್ನು ಹಿಂಪಡೆಯಬೇಕು ಮತ್ತು ತಮ್ಮ ಪಕ್ಷದ ನಾಯಕ ನೀಡಿರುವ ಹೇಳಿಕೆಗೆ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಕ್ಷಮೆಯಾಚಿಸಬೇಕೆಂದು ಬಿಜೆಪಿಯ(BJP) ಮಹಿಳಾ ಸಂಸದರು ಪಟ್ಟು ಹಿಡಿದಿರುವ ಘಟನೆ ನಡೆದಿದೆ.

ಬಿಜೆಪಿಯ ಸಚಿವರು(BJP Ministers) ಮತ್ತು ಬಿಜೆಪಿ ಸದಸ್ಯರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದು, ಲೋಕಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಇದರಿಂದಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಗಿತ್ತು. ಮತ್ತೆ ಸಮಾವೇಶಗೊಂಡಾಗಲೂ ಇದೇ ರೀತಿಯ ಪರಿಸ್ಥಿತಿ ಮುಂದುವರೆಯಿತು. ಹೀಗಾಗಿ ಇಡೀ ಲೋಕಸಭೆಯ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಕಾಂಗ್ರೆಸ್ನಾಯಕ ಅಧೀರ್ ರಂಜನ್ ಚೌಧರಿ ನೀಡಿರುವ ಹೇಳಿಕೆ ಅತ್ಯಂತ ಕೀಳುಮಟ್ಟದ್ದು, ಈ ಹೇಳಿಕೆಯಿಂದ ದೇಶದ ಬುಡಕಟ್ಟು ಸಮುದಾಯವನ್ನು ಅವಹೇಳನ ಮಾಡಲಾಗಿದೆ.
ಬುಡಕಟ್ಟು ಸಮುದಾಯಕ್ಕೆ ಅಪಮಾನ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚನೆ ನಂತರವಷ್ಟೇ ಲೋಕಸಭಾ ಕಲಾಪ ಮುಂದುವರೆಯಲಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
ಇನ್ನು ಅಧೀರ್ ರಂಜನ್ ಚೌಧರಿ ಹೇಳಿಕೆ ಖಂಡಿಸಿ, ಪ್ರತಿಭಟನೆ, ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸಭಾಪತಿ ಪೀಠದಲ್ಲಿದ್ದ ರಾಜೇಂದ್ರ ಅಗರ್ ವಾಲ್, ಕಾಗದ ಪತ್ರಗಳ ಮಂಡನೆ ಅವಕಾಶ ನೀಡಿ, ಕಲಾಪವನ್ನು ಮುಂದೂಡಿದರು.

ಇನ್ನು ಲೋಕಸಭೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ನಾಯಕ ಅಧೀರ್ ರಂಜನ್ ಚೌಧರಿ ಉದ್ದೇಶ ಪೂರ್ವಕವಾಗಿ ರಾಷ್ಟ್ರಪತಿ ಅವರನ್ನು ಅವಮಾನಿಸುವ ಉದ್ದೇಶದಿಂದ `ರಾಷ್ಟ್ರಪತ್ನಿʼ ಎಂಬ ಪದವನ್ನು ಬಳಕೆ ಮಾಡಿದ್ದಾರೆ. ಇದು ಅತ್ಯಂತ ಕೀಳು ಮಟ್ಟದ ಹೇಳಿಕೆ.