Uttara Kannada : ಉತ್ತರ ಕನ್ನಡ(UttaraKannada) ಜಿಲ್ಲಾ ಕೇಂದ್ರ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ(Superspeciality Hospital) ಸ್ಥಾಪನೆಗೆ ರಾಜ್ಯ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ. ಆಸ್ಪತ್ರೆ ಸ್ಥಾಪನೆಗೆ ಬೇಕಾದ ಸ್ಥಳ, ಉಪಕರಣ, ಸಿಬ್ಬಂದಿ, ಕಟ್ಟಡ ಸೇರಿದಂತೆ ಎಲ್ಲ ಹಣಕಾಸು ವಿವರಗಳ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ(Health Department) ಸಲ್ಲಿಸಿತ್ತು.

ಆದರೆ ಇದು ಸದ್ಯದ ಪರಿಸ್ಥಿತಿಯಲ್ಲಿ ಬೊಕ್ಕಸಕ್ಕೆ ಹೊರೆಯಾಗುವ ಸಾಧ್ಯತೆ ಇರುವುದರಿಂದ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಉತ್ತರಕನ್ನಡದಲ್ಲಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್,
“ಬಹುಬೇಡಿಕೆಯ ಉತ್ತರ ಕನ್ನಡ ಭಾಗದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ನಿರಾಕರಿಸಿದೆ. ಸಂಸ್ಕೃತ ವಿವಿಯ ₹320 ಕೋಟಿಗೆ ಒಪ್ಪಿಗೆ ಕೊಡುವ ಆರ್ಥಿಕ ಇಲಾಖೆ ಆಸ್ಪತ್ರೆಗೆ ಒಪ್ಪದಿರುವುದೇಕೆ? ತಮ್ಮದೇ ಸರ್ಕಾರವನ್ನು ಒಪ್ಪಿಸುವ ತಾಕತ್ತು ಆರೋಗ್ಯ ಸಚಿವ ಸುಧಾಕರ ಅವರಿಗಿಲ್ಲವೇ?
ಇದನ್ನೂ ಓದಿ : https://vijayatimes.com/anti-conversion-law-act-has-been-passed/
ಮತ ಹಾಕುವಾಗ ಬಿಜೆಪಿ ಸರ್ಕಾರದ ಆದ್ಯತೆಯ ಬಗ್ಗೆ ಜನರು ಚಿಂತಿಸಬೇಕು” ಎಂದು ಟ್ವೀಟ್ ಮಾಡಿದೆ. ಇನ್ನೊಂದೆಡೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ವಿರುದ್ದವೂ ವಾಗ್ದಾಳಿ ನಡೆಸಿದ್ದು, ಬಿ.ಸಿ.ನಾಗೇಶ್(BC Nagesh) ಅವರೇ, ಶಿಕ್ಷಣ ಸಚಿವರಾಗಿ ಒಂದಾದರೂ ಘನಕಾರ್ಯ ಮಾಡಿದ್ದೀರಾ? ಮಾಡಿದ್ದಿದ್ದರೆ ತೋರಿಸಿಬಿಡಿ.
ಹಲವು ತಿಂಗಳಿಂದ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎನ್ನುತ್ತಲೇ ಬಂದಿರುವ ತಾವು ಆ ನಿಟ್ಟಿನಲ್ಲಿ ಯಾವ ಗಂಭೀರ ಕ್ರಮ ಕೈಗೊಂಡಿದ್ದೀರಿ? ವಿದ್ಯಾರ್ಥಿಗಳಿಗೆ ಶೂ, ಸಮವಸ್ತ್ರ, ಪುಸ್ತಕ ಕೊಡದಿರುವಂತೆ ಶಿಕ್ಷಣವನ್ನೂ ಕೊಡದೆ ವಂಚಿಸುವಿರಾ? ಇನ್ನು ‘ಸ್ಥಳೀಯ ಉದ್ಯಮಿಗಳ ಉತ್ತೇಜನಕ್ಕಾಗಿ 60 ಅತ್ಯಾಧುನಿಕ ಬಿಪಿಓಗಳನ್ನು ಸ್ಥಾಪಿಸುತ್ತೇವೆ’ ಇದು ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಭರವಸೆ.

ಈಗ ಉದ್ಯಮಗಳೂ ಇಲ್ಲ, ಉದ್ಯೋಗಗಳೂ ಇಲ್ಲ. ನಿರುದ್ಯೋಗದಿಂದ ಭವಿಷ್ಯದ ಬಗ್ಗೆ ಆತಂಕಗೊಂಡು ಯುವಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಕೊಟ್ಟ ಭರವಸೆ ಬಿಜೆಪಿಗೆ ನೆನಪಿಲ್ಲವೇ? ಎಂದು ಪ್ರಶ್ನಿಸಿದೆ.
- ಮಹೇಶ್ ಪಿ.ಎಚ್