Mumbai : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ(BJP Leaders Slams Rahul) ವೇಳೆ ರಾಷ್ಟ್ರಗೀತೆ ಹೆಸರಿನಲ್ಲಿ ತಪ್ಪು ಹಾಡಿನ ವಿಡಿಯೋ ವೈರಲ್(Viral) ಆಗುತ್ತಿದ್ದಂತೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಭಾರತ್ ಜೋಡೋ ಕಾರ್ಯಕ್ರಮದಲ್ಲಿ, ಕೆಲವು ನಿಮಿಷಗಳ ಕಾಲ ರಾಷ್ಟ್ರಗೀತೆಯ ಬದಲಿಗೆ ತಪ್ಪಾದ ಹಾಡಿನ ವೀಡಿಯೊವನ್ನು ಪ್ಲೇ ಮಾಡಲಾಗಿದ್ದು,
ಈ ತಪ್ಪಿಗೆ ಬಿಜೆಪಿ ನಾಯಕರು(BJP Leaders) ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್(Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೇಶ್ ರಾಣೆ ಅವರು ಘಟನೆಯ ವಿಡಿಯೋವನ್ನು ಹಂಚಿಕೊಂಡು “ಪಾಪು ಕಾ ಕಾಮಿಡಿ ಸರ್ಕಸ್” ಎಂದು ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಕೂಡ ಅದೇ ವೀಡಿಯೊವನ್ನು ಹಂಚಿಕೊಂಡು, “ರಾಹುಲ್ ಗಾಂಧಿ, ಇದು ಏನು?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : https://vijayatimes.com/15-year-old-dies/
ಇನ್ನು ಭಾರತ್ ಜೋಡೋ ಕಾರ್ಯಕ್ರಮದಲ್ಲಿ ನಿಜವಾಗಿಯೂ ತಪ್ಪಾದ ಗೀತೆಯನ್ನು ನುಡಿಸಲಾಗಿದೆಯೇ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳು ಮತ್ತು ಭಾರತ್ ಜೋಡೋ ಯಾತ್ರೆಯ ನೇರ ಪ್ರಸಾರವು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದನ್ನು ಖಚಿತಪಡಿಸುತ್ತದೆ.
ವಾಶಿಮ್ನಲ್ಲಿ ರಾಹುಲ್ ಗಾಂಧಿಯವರ ಭಾಷಣದ ಕೊನೆಯಲ್ಲಿ, ರಾಷ್ಟ್ರಗೀತೆಯ ಘೋಷಣೆ ಇತ್ತು, ಅದನ್ನು ರಾಹುಲ್ ಗಾಂಧಿ ಕೂಡ ಮೈಕ್ನಲ್ಲಿ ಪುನರಾವರ್ತಿಸಿದರು.
ವೇದಿಕೆಯಲ್ಲಿದ್ದ ಮುಖಂಡರು ಸ್ಥಾನ ಪಡೆಯುತ್ತಿದ್ದಂತೆ ಕೆಲ ಸೆಕೆಂಡುಗಳ ಕಾಲ ಸಂಗೀತ ಮೊಳಗಿತು. ಆಗ ರಾಹುಲ್ ಗಾಂಧಿ ನಾಯಕರಿಗೆ ಸನ್ನೆ ಮಾಡಿ ಸಂಗೀತವನ್ನು ನಿಲ್ಲಿಸಿದರು. ನಂತರ ಜನ ಗಣ ಮನ ನುಡಿಸಲು ಸೂಚನೆ ನೀಡಿದರು.

“ಇದು ರಾಷ್ಟ್ರಗೀತೆ ಅಲ್ಲ ಎಂದು ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಳ್ಳಲು ಬಹಳ ಸಮಯ ತೆಗೆದುಕೊಂಡಿದ್ದಾರೆ” ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪ್ರಸ್ತುತ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿದೆ.
https://youtu.be/wGmJe0Cl-KA ಅಕ್ರಮ ಸಕ್ರಮದಲ್ಲೇ ಅಕ್ರಮ!
ಬೆಲೆ ಏರಿಕೆ ವಿಚಾರವಾಗಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. “ರೈತರನ್ನು ನಾಶಮಾಡುವ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ” ಎಂದು ಟೀಕಿಸಿದ್ದರು.
- ಮಹೇಶ್.ಪಿ.ಎಚ್