Koppala: ಬಿಜೆಪಿಯ (BJP) ಮಹತ್ವಾಕಾಂಕ್ಷೆಯ ಸ್ಥಳ ಎಂದೇ ಕರೆಸಿಕೊಂಡಿರುವ ರಾಮಮಂದಿರ (BJP lost Miserably – Anjanadri) ನಿರ್ಮಾಣ ಮಾಡಿದ ಅಯೋಧ್ಯೆ (Ayodhya)ಯಲ್ಲೇ
(ಫರಿದಾಬಾದ್) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿರುವುದು ಮಾತ್ರವಲ್ಲದೇ ಹನುಮನ ಜನ್ಮ ಸ್ಥಳವಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೂಡಾ ಸೋಲನ್ನು ಕಂಡಿದೆ.

ಹಿಂದುತ್ವ ಪ್ರಮುಖ ಧಾರ್ಮಿಕ ಕೇಂದ್ರ ಎಂದೇ ಕರೆಯಲ್ಪಡುವ ಅಂಜನಾದ್ರಿ ಕೊಪ್ಪಳ ಕ್ಷೇತ್ರದಲ್ಲಿದ್ದು, ಚುನಾವಣೆಯಲ್ಲಿ ಬಿಜೆಪಿ ಹನುಮ ಜನ್ಮ ಸ್ಥಳ (Hanuma Birth Place) ಅಭಿವೃದ್ದಿಯ ಅಜೆಂಡ
ಇಟ್ಟುಕೊಂಡಿತ್ತು. ಬಿಜೆಪಿ ಅಧಿಕಾರದಲ್ಲಿ ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಯಾಗದ ಹಿನ್ನೆಲೆ, ಬುದ್ಧಿವಂತ ಮತದಾರರು ಬಿಜೆಪಿ ಅಧಿಕಾರವನ್ನು ತಿರಸ್ಕಾರ ಮಾಡಿದ್ದಾರೆ. ಈ ಹಿಂದೆ ಅಂಜನಾದ್ರಿ ಕ್ಷೇತ್ರದ
ಅಭಿವೃದ್ದಿಗಾಗಿ ಯಡಿಯೂರಪ್ಪ (Yadiyurappa) 20 ಕೋಟಿ ರೂಪಾಯಿ, ಬೊಮ್ಮಾಯಿ (Bommai) ಸರ್ಕಾರ ಆಡಳಿತದಲ್ಲಿ ಇರುವ ಸಂದರ್ಭದಲ್ಲಿ 100 ಕೋಟಿ ರೂಪಾಯಿ ಘೋಷಣೆ ಮಾಡಿತ್ತು.
ಆದರೆ ರಾಜ್ಯ ಬಿಜೆಪಿ ಸರ್ಕಾರದಿಂದ ಒಂದು ರೂಪಾಯಿ (BJP lost Miserably – Anjanadri) ಹಣ ಕೂಡ ಬಿಡುಗಡೆಯಾಗಲಿಲ್ಲ.
ಮೋದಿ (Modi) ಆಡಳಿತದಲ್ಲಿ ಅಯೋಧ್ಯೆಯಿಂದ ಅಂಜನಾದ್ರಿಗೆ ರೈಲು, ಗಂಗಾವತಿಯಿಂದ ಅಂಜನಾದ್ರಿಗೆ ಕೇಬಲ್ ಕಾರ್ (Cable Car) ಮಾಡುವ ಯೋಜನೆ, ಹಿಟ್ನಾಳದಿಂದ ಮರಳಿವರೆಗೂ ಚತುಷ್ಪಥ
ರಸ್ತೆ ನಿರ್ಮಾಣಕ್ಕೆ ಘೋಷಣೆ ಸೇರಿದಂತೆ ಯಾವುದೇ ಯೋಜನೆಗಳು ಜಾರಿಯಾಗದ ಹಿನ್ನೆಲೆ ಮತದಾರರು ಕಾಂಗ್ರೆಸ್ (Congress) ಪರ ವಾಲಿದ್ದಾರೆ . ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿಯೇ ಕಾಂಗ್ರೆಸ್ಸಿಗೆ
16 ಸಾವಿರ ಮತಗಳ ಲೀಡ್ ಸಿಕ್ಕಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಪಡೆದುಕೊಂಡಿದ್ದಾರೆ. ಹಾಗಾಗಿ ಬರೋಬ್ಬರಿ 15 ವರ್ಷದ ನಂತರ ಲೋಕಸಭೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ಸತತ ಎರಡು ಬಾರಿ ಸೋಲು ಅನುಭವಿಸಿದ್ದ ಹಿಟ್ನಾಳ್ ಕುಟುಂಬ ಈ ಬಾರಿ ಗೆಲುವಿನ ಸಿಹಿ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಕಾರಣದಿಂದ ಹಾಗೂ
ಬಿಜೆಪಿ ಟಿಕೆಟ್ ಸಂಗಣ್ಣ ಅವರಿಗೆ ತಪ್ಪಿದ್ದೆ ಕಾಂಗ್ರೆಸ್ ಗೆಲುವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಉತ್ತರಾಖಂಡದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ್ದ ಕರ್ನಾಟಕದ 18 ಮಂದಿ ನಾಪತ್ತೆ!