File a complaint against Muniratna three months ago: Why did the complainant withdraw from the case?
Bengaluru: ಮೊದಲು ಜಾತಿ ನಿಂದನೆ, ಬೆದರಿಕೆ ನಂತರದಲ್ಲಿ ಅತ್ಯಾಚಾರ (Rape Case) ಹೀಗೆ ಒಂದಲ್ಲ ಎರಡಲ್ಲ, ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಆರ್ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಈಗ ಎಸ್ಐಟಿ (SIT )ಕಸ್ಟಡಿಯಲ್ಲಿದ್ದಾರೆ. ಅತ್ಯಾಚಾರ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.

ಸಂತ್ರಸ್ತೆಯ ಆರೋಪಗಳೆಲ್ಲ ಸುಳ್ಳು ಎಂದು ಈಗಲೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಶಾಕಿಂಗ್ ನ್ಯೂಸ್ (Shocking News) ಏನೆಂದರೆ ಮುನಿರತ್ನ ವಿರುದ್ಧ ಮೂರು ತಿಂಗಳ ಹಿಂದೆಯೇ ಅತ್ಯಾಚಾರ ಆರೋಪದ ಬಗ್ಗೆ ದೂರು ನೀಡಲಾಗಿತ್ತು ಎಂಬ ವಿಚಾರ ಬಯಲಾಗಿದೆ.
ಶಾಸಕ ಮುನಿರತ್ನ (Munirathna) ವಿರುದ್ದ ಜೂನ್ನಲ್ಲೇ ದೂರು ದಾಖಲಾಗಿತ್ತು. ಜೂನ್ನಲ್ಲಿಯೇ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಅರ್ಜಿಯಾಗಿ ಪಡೆದುಕೊಂಡಿದ್ದ ಪೊಲೀಸರು ಅರ್ಜಿ ಸಂಬಂಧ ವಿಚಾರಣೆಗೆ ಸಾಕ್ಷಿ ನೀಡುವಂತೆ ದೂರುದಾರೆಗೆ ತಿಳಿಸಿದ್ದರು.

ಈ ಸಂಬಂಧ ದೂರುದಾರೆಗೆ ನೋಟಿಸ್ (Notice) ನೀಡಲಾಗಿತ್ತು. ಆದ್ರೆ ದೂರುದಾರೆ ಮತ್ತೆ ಪೊಲೀಸರ ಮುಂದೆಯೇ ಹಾಜಾರಾಗಿರಲಿಲ್ಲ. ಹೀಗಾಗಿ ಪೊಲೀಸರು ವಿಚಾರಣೆಯನ್ನು ಹಾಗೇಯೇ ಬಿಟ್ಟಿದ್ದರು. ಅಲ್ಲಿಗೆ ಅದು ಹಳ್ಳ ಹಿಡಿದಿತ್ತು.ಈಗ ಮತ್ತೆ ಅದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಕೇಸ್ ದಾಖಲು ಮಾಡಿ ಅರೆಸ್ಟ್ (Arrest) ಮಾಡಲಾಗಿತ್ತು. ಆದರೆ ಈ ವಿಚಾರವಾಗಿ ಕೆಲ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ.
ಅಷ್ಟಕ್ಕೂ ಸಂತ್ರಸ್ತೆ ಈ ಹಿಂದೆ ದೂರು ಕೊಟ್ಟಿದ್ದರೂ ಆಗ ಪೊಲೀಸರು ಎಫ್ಐಆರ್ (FIR) ದಾಖಲಿಸಿರಲಿಲ್ಲ. ಹೀಗಾಗಿ ದೂರು ಕೊಟ್ಟರೂ ಯಾಕೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂಬ ಪ್ರಶ್ನೆ ಮೂಡಿದೆ. ಅಷ್ಟಲ್ಲದೇ, ಮಹಿಳೆ ಮೂರು ತಿಂಗಳ ಹಿಂದೆ ದೂರು ನೀಡಿ ಹಿಂದೆ ಸರಿದಿದ್ದು ಯಾಕೆ ಇದರಲ್ಲಿ ಮುನಿರತ್ನ ಅವರ ಕೈವಾದವಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕುವ ತಂತ್ರಗಳು ನಡೆಯುತ್ತಿದೆ. ಹಾಗಾಗಿ ಎಸ್ಐಟಿ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.