ಬಿಡುಗಡೆಗೆ ಇನ್ನೂ ಮೂರು ತಿಂಗಳಿದ್ದರೂ ಕೂಡ ಆದಿಪುರುಷ(Adipurash) ಸಿನಿಮಾಗೆ(Cinema) ಈಗಲೇ ಭಾರಿ ಅಡಚಣೆ ಎದುರಾಗಿದೆ. ಆದಿಪುರುಷ ಚಿತ್ರ ಈಗಾಗಲೇ ವಿವಾದದಲ್ಲಿ ಮುಳುಗಿದ್ದು,
ನಟ ಡಾರ್ಲಿಂಗ್ ಪ್ರಭಾಸ್(Prabhas) ಕೂಡ ಅನೇಕ ಟ್ರೋಲ್(Troll) ಅಪಹಾಸ್ಯಕ್ಕೆ ತುತ್ತಾಗಿದ್ದಾರೆ.

ವಿರೋಧಿಗಳ ಪಟ್ಟಿಗೆ ಇತ್ತೀಚಿಗೆ ರಾಜಕಾರಣಿ ಕೂಡ ನೂತನವಾಗಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಶಾಸಕ(BJP MLA slams adipurush film) ರಾಮ್ ಕದಮ್ ಗುರುವಾರ ಆದಿಪುರುಷ ಸಿನಿಮಾ ಬಗ್ಗೆ ಮಾತನಾಡಿದ್ದು,
ಮಹಾರಾಷ್ಟ್ರದಲ್ಲಿ ಆದಿಪುರುಷ ಚಿತ್ರವನ್ನು ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ಆದಿಪುರುಷ ಚಿತ್ರದಲ್ಲಿ, ಚಿತ್ರ ನಿರ್ಮಾಪಕರು ಸಣ್ಣ ಪ್ರಚಾರಕ್ಕಾಗಿ ನಮ್ಮ ದೈವ ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುವ ಮೂಲಕ ಕೋಟ್ಯಂತರ ಹಿಂದೂ ಜನರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿ, ಕೇವಲ ಕ್ಷಮೆಯಾಚನೆ ಅಥವಾ ದೃಶ್ಯಗಳನ್ನು ಕತ್ತರಿಸುವ ಕೆಲಸಕ್ಕೆ ನಾವು ಸಾಥ್ ನೀಡುವುದಿಲ್ಲ.
ಇದನ್ನೂ ಓದಿ : https://vijayatimes.com/amit-shah-speech-video-goes-viral/
ಅಂತಹ ಚಿಂತನೆಗೆ ಪಾಠ ಕಲಿಸಬೇಕು, ಅಂತಹ ಯಾವುದೇ ಚಲನಚಿತ್ರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕದಮ್ ಹೇಳಿದ್ದಾರೆ. ಓಂ ರಾವುತ್ ನಿರ್ದೇಶಿಸಿದ,
ಆದಿಪುರುಷನ ಮೊದಲ ಟೀಸರ್‌ನಲ್ಲಿ ಪ್ರಭಾಸ್ ಭಗವಾನ್ ರಾಮನಾಗಿ, ಸೈಫ್ ಅಲಿ ಖಾನ್ ರಾವಣನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೀಸರ್ ಚಿತ್ರಪ್ರೇಮಿಗಳನ್ನು ಸೆಳೆಯಿತು ಮತ್ತು ವಿಭಿನ್ನ ಪ್ರತಿಕ್ರಿಯೆಗಳಿಗಾಗಿ ದೊಡ್ಡ ವೇದಿಕೆಯಾಯಿತು ಎಂದೇ ಹೇಳಬಹುದು. ಕೆಲವರು ಥೀಮ್ ಮತ್ತು ಚಿತ್ರೀಕರಣವನ್ನು ಮೆಚ್ಚಿದರೆ, ಇನ್ನು ಕೆಲವರು ವಿಶೇಷವಾಗಿ ರಾವಣನ ಪಾತ್ರಗಳ ಚಿತ್ರಣವನ್ನು ಟೀಕಿಸಿದರು.
ಚಿತ್ರದಲ್ಲಿ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೈಫ್ ಅಲಿ ಖಾನ್ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಟೀಕೆಗಳು ವ್ಯಾಪಕವಾಗಿ ವ್ಯಕ್ತವಾಗಿದ್ದು, ಈ ಸಂಗತಿಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಚಿತ್ರತಂಡ ಮೊಘಲ್ ಆಕ್ರಮಣಕಾರ ತೈಮೂರ್ ಅಲಿಯಾಸ್ ತೈಮೂರ್ ಅನ್ನು ಹೋಲುತ್ತಾರೆ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಸುಮಾರು 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಆದಿಪುರುಷ ಮಕರ ಸಂಕ್ರಾಂತಿಯ ಮೊದಲು ಜನವರಿ 12, 2023 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

ಸದ್ಯ ಬಿಡುಗಡೆಗೂ ಮುನ್ನವೇ ಆದಿಪುರುಷ ಚಿತ್ರ ನೆಗಟಿವ್ ಅಭಿಪ್ರಾಯಗಳ ಮೂಲಕ ಹೊರಹೊಮ್ಮಿದ್ದು, ನಟ ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ನೆಟ್ಟಿಗರ ತೀವ್ರ ಟೀಕೆಗೆ ಒಳಗಾಗಿದ್ದಾರೆ.