- ವಿಜಯಪುರ ಶಾಸಕ ಬಸನಗೌಡ ಪಾಟೀಲ್ (MLA Basanagowda Patil) ಯತ್ನಾಳ್ 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟನೆ
- ಈ ಮೂಲಕ ಪಕ್ಷದೊಳಗಿನ ಬಂಡಾಯವನ್ನು ಹತ್ತಿಕ್ಕಲು ಹೊರಟಿರುವ ಬಿಜೆಪಿ ಹೈಕಮಾಂಡ್ (BJP High Command)
- ಯತ್ನಾಳ್ ಉಚ್ಚಾಟನೆ (Yatnal’s expulsion) ಬೆನ್ನಲ್ಲೆ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ (BJP MLA Yatnal expels) ಸಾಮೂಹಿಕ ರಾಜೀನಾಮೆ
Vijaypura: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಾಗೂ ಮಾಜಿ ಸಿಎಂ ಯಡಿಯೂರಪ್ಪ (Former CM Yediyurappa) ವಿರುದ್ಧ ಪದೇ ಪದೇ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕುತ್ತಿದ್ದ ವಿಜಯಪುರ ನಗರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಕೇಂದ್ರ ಶಿಸ್ತು ಸಮಿತಿ ಕೊನೆಗೂ (Disciplinary Committee finally) ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.
ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿದೆ (Order issued) .ತಕ್ಷಣದಿಂದ ಜಾರಿಗೆ ಬರುವಂತೆ ಬಿಜೆಪಿ (BJP) ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ (6 years) ಅವಧಿಗೆ ಉಚ್ಚಾಟನೆ (Expelled) ಮಾಡಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್ ನೋಟಿಸ್ (Show cause notice) ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ (Anti-Party) ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ (Violation of party discipline) ಮಾಡುತ್ತಿದ್ದರು. ಕೊನೆಗೆ ಫೆಬ್ರವರಿ 10 ರಂದು ಶೋಕಾಸ್ ನೋಟಿಸ್ಗೆ ಯತ್ನಾಳ್ (Yathnal) ಉತ್ತರ ನೀಡಿದ್ದರು. ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ (Central Disciplinary Committee) ಈ ನಿರ್ಧಾರ ಕೈಗೊಂಡಿದೆ.

ಇನ್ನು ಉಚ್ಚಾಟನೆ ಕುರಿತು ಟ್ವೀಟ್ ಮೂಲಕ (tweet) ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಸತ್ಯವಂತರಿಗಿದು ಕಾಲವಲ್ಲ ಎಂಬ ಪುರಂದರ ದಾಸರ ಸಾಲುಗಳನ್ನು (The lines of Purandara Dasa) ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಲ್ಲದೆ, ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ, (Politics, corruption,) ಪಕ್ಷದೊಳಗಿನ ಸುಧಾರಣೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆಯನ್ನು (One-man tyranny) ತೆಗೆದುಹಾಕಿ ಮತ್ತು ಉತ್ತರ ಕರ್ನಾಟಕವನ್ನು (North Karnataka) ಅಭಿವೃದ್ಧಿಪಡಿಸಲು ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ. ತಪ್ಪನ್ನು ತಪ್ಪು ಎಂದು ತೋರಿಸಿದ್ದಕ್ಕೆನನಗೆ ಸಿಕ್ಕ ಪ್ರತಿಫಲವಿದು ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯ ಬೆನ್ನಲ್ಲೇ (expulsion) ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ (BJP) ಭಾರೀ ಹೊಡೆತ ಬಿದ್ದಿದೆ. ಯತ್ನಾಳ್ ಅವರ ಉಚ್ಚಾಟನೆಯನ್ನು ಖಂಡಿಸಿ ಪಕ್ಷದ ನಗರ ಮಂಡಲದ (City council) ಪ್ರಮುಖ ಮುಖಂಡರು ಸಾಲು ಸಾಲು ರಾಜೀನಾಮೆಗೆ (Resign) ಮುಂದಾಗಿದ್ದಾರೆ.
ಇದನ್ನೂ ಓದಿ: http://ವಾಹನ ಸವಾರರಿಗೆ ಶಾಕ್, ಏ. 1ರಿಂದ ಕರ್ನಾಟಕದ ಎಲ್ಲಾ ಟೋಲ್ಗಳ ಶುಲ್ಕ ಏರಿಕೆ
ಈ ಬೆಳವಣಿಗೆಯಿಂದ ವಿಜಯಪುರ ಜಿಲ್ಲಾ (Vijayapura District) ಬಿಜೆಪಿಯಲ್ಲಿ ತೀವ್ರ ಹಲ್ಚಲ್ ಶುರುವಾಗಿದ್ದು, ಪಕ್ಷದ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದೆ.ಈಗಾಗಲೇ ರಾಜೀನಾಮೆ ನೀಡಲು ಉದ್ದೇಶಿಸಿರುವ (BJP MLA Yatnal expels) ಮುಖಂಡರ ಪಟ್ಟಿ ಸಿದ್ಧವಾಗಿದ್ದು, ನಗರ ಕ್ಷೇತ್ರದಲ್ಲಿ ಸಾಮೂಹಿಕ ರಾಜೀನಾಮೆಗೆ (Mass resignation) ಭರದ ಸಿದ್ಧತೆ ನಡೆಯುತ್ತಿದೆ.