ರಾಜ್ಯ(State) ಬಿಜೆಪಿಯಲ್ಲಿ(BJP) ಅಧ್ಯಕ್ಷಗದಿಗೇರಲು ಇದೀಗ ಪೈಪೋಟಿ ಶುರುವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ(BJP) ರಾಜ್ಯಾಧ್ಯಕ್ಷ(State President) ಹುದ್ದೆ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ಹೀಗಾಗಿ ಬಿಜೆಪಿಯ ಘಟಾನುಘಟಿ ನಾಯಕರು ಅಧ್ಯಕ್ಷರಾಗಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಆ ಇಬ್ಬರು ನಾಯಕರ ಮೇಲೆ ಹೆಚ್ಚಿನ ಒಲವು ತೋರಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಬಗ್ಗೆ ಕೇಂದ್ರ ನಾಯಕರು ಒಲವು ತೋರಿದ್ದಾರೆ. ಈ ಇಬ್ಬರಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ. ಆದರೆ ಇಬ್ಬರು ನಾಯಕರಲ್ಲಿ ಅನೇಕ ಸಮಾನ ಅಂಶಗಳಿದ್ದು, ಕೇಂದ್ರ ನಾಯಕರಿಗೆ ಯಾರನ್ನು ಆಯ್ಕೆ ಮಾಡಬೇಕೆಂದು ದೊಡ್ಡ ತಲೆನೋವಾಗಿದೆ.
ಇಬ್ಬರು ನಾಯಕರು ಆರ್‍ಎಸ್‍ಎಸ್ ಹಿನ್ನಲೆಯವರು, ಕಟ್ಟರ್ ಹಿಂದುತ್ವದ ಪ್ರತಿಪಾದಕರು, ಉತ್ತಮ ವಾಗ್ಮಿಗಳು, ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡಿದ ಅನುಭವವಿದೆ, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು, ಇಬ್ಬರು ಯುವ ನಾಯಕರು, ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದ ಅನುಭವ, ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಹೀಗೆ ಅನೇಕ ದೃಷ್ಟಿಕೋನಗಳಿಂದ ನೋಡಿದಾಗ ಈ ಇಬ್ಬರು ಸಮಾನರಾಗಿ ಕಾಣುತ್ತಾರೆ. ಆದರೆ ಮಹಿಳಾ ನಾಯಕಿ ಎಂಬುದು ಶೋಭಾ ಕರಂದ್ಲಾಜೆಗೆ ಪ್ಲಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಮಹಿಳಾ ಅಧ್ಯಕ್ಷೆಯನ್ನಾಗಿ ಯಾರನ್ನು ಆಯ್ಕೆ ಮಾಡಿಲ್ಲ. ಇದೀಗ ಅಂತಹ ಅವಕಾಶ ಬಿಜೆಪಿ ಮುಂದಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಮಹಿಳಾ ಮತದಾರರು ಬಿಜೆಪಿಯತ್ತ ಹೆಚ್ಚಿನ ಒಲವು ತೋರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮಹಿಳಾ ಅಧ್ಯಕ್ಷೆಯನ್ನು ನೇಮಿಸುವುದರಿಂದ ಮಹಿಳಾ ಮತದಾರರನ್ನು ಸೆಳೆಯಬಹುದು ಎಂಬುದು ಕೇಂದ್ರ ನಾಯಕರ ಲೆಕ್ಕಾಚಾರವಾಗಿದೆ. ಇನ್ನು ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ನಡೆದ ಉತ್ತರಪ್ರದೇಶ ಚುನಾವಣೆಯಲ್ಲಿ ಉತ್ತಮ ಸಂಘಟನಾ ಕಾರ್ಯನಿರ್ವಹಣೆ ಮಾಡಿ ಕೇಂದ್ರ ನಾಯಕರ ಮೆಚ್ಚುಗೆ ಗಳಿಸಿದ್ದಾರೆ.
ಅದೇ ರೀತಿ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲ ಕಾರಣದಿಂದ ರಾಜ್ಯ ಬಿಜೆಪಿಗೆ ಶೋಭಾ ಕರಂದ್ಲಾಜೆ ಅಧ್ಯಕ್ಷೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಆಗಸ್ಟ್ ವೇಳೆಗೆ ನಳಿನ್ ಕುಮಾರ್ ಕಟೀಲ್ ಅಧಿಕಾವಧಿ ಮುಕ್ತಾಯವಾಗಲಿದ್ದು, ಶೋಭಾ ಕರಂದ್ಲಾಜೆಗೆ ಸಾರಥ್ಯ ನೀಡುವುದು ಬಹುತೇಕ ಖಚಿತ ಎನ್ನುವ ಮಾತುಗಳು ರಾಜ್ಯ ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ.