vijaya times advertisements
Visit Channel

Politics : ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ : ಬಿಜೆಪಿ

congress

Bengaluru : ಭ್ರಷ್ಟಾಚಾರಕ್ಕೆ(Corruption) ಕಾಂಗ್ರೆಸ್‌(Congress) ಎಷ್ಟು ಆದ್ಯತೆ ನೀಡಿತ್ತು ಎಂದರೆ ದೇಶದ ಪ್ರಥಮ ಪ್ರಧಾನಿ ಅಧಿಕಾರಕ್ಕೇರಿದ ವರ್ಷದ ಒಳಗಾಗಿ ಸ್ವತಂತ್ರ ಭಾರತದ ಮೊದಲ ಹಗರಣ ನಡೆಸಿದ್ದರು.

state bjp

ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ. ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು(Congress Leader) ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಟೀಕಿಸಿದೆ. ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಬಿಜೆಪಿ, ನೆಹರೂ ಆದಿಯಾಗಿ ಇಂದಿರಾ, ರಾಜೀವ್, ಸೋನಿಯಾ, ರಾಹುಲ್ ಗಾಂಧಿಯವರೆಗಿನ ನಕಲಿ ಗಾಂಧಿಗಳು ಭ್ರಷ್ಟಾತಿ ಭ್ರಷ್ಟರಾಗಿದ್ದಾರೆ.

ಇದನ್ನೂ ಓದಿ : https://vijayatimes.com/nia-raid-in-mysuru/

ಹೀಗಿರುವಾಗ ಅವರ ಹಿಂಬಾಲಕರು ತಿಹಾರ್ ಜೈಲಿಗೆ ಹೋಗಿ ಬರುವುದರಲ್ಲಿ ಅಚ್ಚರಿಯಿಲ್ಲ. ಕಾಂಗ್ರೆಸ್ ಈಗ ಬೇಲ್ ಪಾರ್ಟಿಯಾಗಿದೆ, ಜಾಮೀನು(Bail) ಕೈಯಲ್ಲಿ ಹಿಡಿದುಕೊಂಡೇ ಹೊರಗೆ ತಿರುಗಾಡುತ್ತಿದ್ದಾರೆ. ನಕಲಿ ಗಾಂಧಿ ಕುಟುಂಬದ ಇತಿಹಾಸ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರ ಇತಿಹಾಸ ಒಂದೇ ಆಗಿದೆ.

Allegation

ಅವರು ಭ್ರಷ್ಟಾಚಾರದ ಬೀಜ ಬಿತ್ತಿ ಫಲ ಉಂಡಿದ್ದಾರೆ, ಇವರು ಅದೇ ಭೂಮಿಯಲ್ಲಿ ಭ್ರಷ್ಟಾಚಾರದ ಮತ್ತೊಂದು ಬೆಳೆ ಬೆಳೆಯಲು ಪ್ರಯತ್ತಿಸುತ್ತಿದ್ದಾರೆ. ಕೆಲವರು ವೇಗವಾಗಿ ಭ್ರಷ್ಟ ಬೆಳೆ ಬೆಳೆದು ಇಡಿ ಮುಂದೆ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್‌ ಸರ್ಕಾರ “PayHighCommand” ಸರ್ಕಾರ ಎಂಬ ಖ್ಯಾತಿ ಪಡೆದಿತ್ತು.

ಇದನ್ನೂ ಓದಿ : https://vijayatimes.com/isi-agent-shot-dead/

ಗೋವಿಂದ ರಾಜು ಡೈರಿಯಲ್ಲಿ ನಕಲಿ ಗಾಂಧಿ ಪರಿವಾರಕ್ಕೆ ಸಲ್ಲಿಸಲಾದ ಕಪ್ಪಕಾಣಿಕೆಯ ವಿವರ ದಾಖಲಾಗಿತ್ತು. ಕಾಂಗ್ರೆಸ್ಸಿಗರೇ, ನೀವು ಯಾವ ಮಾದರಿಯಲ್ಲಿ ಕಪ್ಪಕಾಣಿಕೆ ‘ಪೇʼ ಮಾಡಿರುವುದು? ಕರ್ನಾಟಕದ ಜನ ವಿಚಾರವಂತರು. ಭ್ರಷ್ಟಾಚಾರವನ್ನೆ ಪರಮ ಗುರಿಯಾಗಿಸಿಕೊಂಡ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜನರು ಇನ್ನೂ ಮರೆತಿಲ್ಲ.

congress

ಈಗ ದಿನಕ್ಕೊಂದು ನಾಟಕಗಳ ಮೂಲಕ ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್ ಕಾಯಕಕ್ಕೆ ಕರ್ನಾಟಕದ ಜನತೆ ಸೊಪ್ಪು ಹಾಕುವುದಿಲ್ಲ ಎಂದಿದೆ.

  • ಮಹೇಶ್ ಪಿ.ಎಚ್

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.