ಶಕುನಿ, ಮೀರ್ ಸಾದಿಕ್‍ಗೆ ಸರಿಸಮನಾಗಿ ನಿಲ್ಲಬಲ್ಲ ವ್ಯಕ್ತಿ ಸಿದ್ದರಾಮಯ್ಯ : ಬಿಜೆಪಿ ಟೀಕೆ!

ರಾಜ್ಯ ಬಿಜೆಪಿ(State BJP) ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ವಿರುದ್ದ ಸರಣಿ ಟ್ವೀಟ್‍ಗಳ ಮೂಲಕ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಘಟನೆಗಳ ಆಧಾರದ ಮೇಲೆ ಟೀಕೆ ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರನ್ನು ‘ಮೀರ್‍ಸಾದಿಕ್’ ಎಂದು ವ್ಯಂಗ್ಯವಾಡಿದೆ. ಕಾಂಗ್ರೆಸ್‍ನ(Congress) ಹಿರಿಯ ನಾಯಕರಾದ ಜಿ. ಪರಮೇಶ್ವರ್(G Parmeshwar) ಮತ್ತು ಮಲ್ಲಿಕಾರ್ಜುನ್ ಖರ್ಗೆ(Mallikarjun Kharghe) ಅವರನ್ನು ಎಳೆತಂದು ಬಿಜೆಪಿ ಮಾಡಿರುವ ಟ್ವೀಟ್‍ಗಳ ವಿವರ ಇಲ್ಲಿದೆ ನೋಡಿ.

ತನ್ನ ರಾಜಕೀಯ ಉತ್ಕರ್ಷಕ್ಕೆ ಕಾರಣರಾದ ರಾಮಕೃಷ್ಣ ಹೆಗಡೆಯವರನ್ನು ವಂಚಿಸಿದ ಸಿದ್ದರಾಮಯ್ಯ ದೇವೇಗೌಡರ ಬಣ ಸೇರಿದರು. ಆ ಬಳಿಕ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದರು.
ಅಲ್ಲಿ ಮೋಸದ ಜಾಲಕ್ಕೆ ಮೊದಲು ಬಲಿಯಾದವರು ಮಲ್ಲಿಕಾರ್ಜುನ ಖರ್ಗೆ. ಉಂಡಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಎಂದರೆ ಅದು ಸಿದ್ದರಾಮಯ್ಯ. 2013 ರ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್‍ಗೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅಂದಿನ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಅವರು ಕುತಂತ್ರದಿಂದ ಸೋಲಿಸಿದರು.

2023ಕ್ಕೂ ನಿಮ್ಮದು ಇದೇ ತಂತ್ರವೇ ? ಇದು #ಮೀರ್‍ಸಾದಿಕ್ ತನವಲ್ಲದೆ ಮತ್ತೇನು. ರಾಜಕಾರಣದಲ್ಲಿ ನಂಬಿಕೆದ್ರೋಹಿಗಳು ಹಾಗೂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕೆಲವು ಸೃಷ್ಟಿಗಳಿವೆ.
ಮಹಾಭಾರತದ ಶಕುನಿ, ಬ್ರಿಟಿಷ್ ಕಾಲದ ಮೀರ್ ಸಾದಿಕ್, ಚನ್ನಮ್ಮನಿಗೆ ದ್ರೋಹ ಬಗೆದ ಮಲ್ಲಪ್ಪ ಇತ್ಯಾದಿ. ಇವರೆಲ್ಲರಿಗೂ ಸರಿಸಮನಾಗಿ ನಿಲ್ಲಬಲ್ಲ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ !

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.