ಕೃಷಿ ಕಾಯ್ದೆಗಳನ್ನು(Farm Laws) ರದ್ದುಗೊಳಿಸಬೇಕೆಂದು ದೇಶಾದ್ಯಂತ ಹೋರಾಟ ನಡೆಸಿದ್ದ ರಾಕೇಶ್ ಟಿಕಾಯತ್(Rakesh Tikait) ಮೇಲೆ ನಿನ್ನೆ ಬೆಂಗಳೂರಿನಲ್ಲಿ(Bengaluru) ಹಲ್ಲೆ ಮಾಡಲಾಗಿತ್ತು.

ವಿಪಕ್ಷ ಕಾಂಗ್ರೆಸ್(Opposition Congress) ಟಿಕಾಯತ್ ಮೇಲಿನ ಹಲ್ಲೆಯನ್ನು ಖಂಡಿಸಿ, ಈ ಹಲ್ಲೆಯ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿತ್ತು. ಇದೀಗ ಕಾಂಗ್ರೆಸ್‍ನ ಈ ಆರೋಪಕ್ಕೆ ರಾಜ್ಯ ಬಿಜೆಪಿ(State BJP) ಟ್ವೀಟ್‍ಗಳ ಮೂಲಕ ಉತ್ತರ ನೀಡಿದೆ. ಆ ಟ್ವೀಟ್‍ಗಳ ವಿವರ ಇಲ್ಲಿದೆ ನೋಡಿ. ಮೋದಿ ಸರ್ಕಾರ ಜಾರಿಗೊಳಿಸಿದ ರೈತರ ಪರವಾದ ಕಾಯ್ದೆಗಳನ್ನು ಕಾಂಗ್ರೆಸ್ ಟೂಲ್‍ಕಿಟ್ ಗ್ಯಾಂಗ್ ತಡೆಯಿತು. ರೈತ ಚಳುವಳಿಗಾಗಿ ಕಾಂಗ್ರೆಸ್ ಡೀಲ್ ನಡೆಸಿ ಟಿಕಾಯತ್ ಮೂಲಕ ಮೋದಿ ಸರ್ಕಾರದ ವಿರುದ್ಧ ಸಂಚು ರೂಪಿಸಿತು.
ಇತ್ತ ರಾಜ್ಯದಲ್ಲಿ ಡಿಕೆಶಿ ನಂಬಿಕಸ್ಥ ಕೋಡಿಹಳ್ಳಿ, ಚಳುವಳಿ ನಿಲ್ಲಿಸಲು ಕೋಟಿಗಟ್ಟಲೆ ಡೀಲ್ ಮಾಡಿಕೊಂಡ. ಡೀಲ್ ಹಣ ತಲುಪಿದ್ದೆಲ್ಲಿ?”
ರೈತ ಹೋರಾಟದ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಡೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಡೀಲ್ ರಾಜರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಅನುಕಂಪ ತೋರಿಸುತ್ತಾರೆ. ಡೀಲ್ ಮೂಲಕ ಸಂಗ್ರಹವಾದ ಅಕ್ರಮ ಹಣ ಎಲ್ಲಿ ತಲುಪುತ್ತಿದೆ, ಕೆಪಿಸಿಸಿ ಕಚೇರಿಯನ್ನೋ? ಅಥವಾ ಸದಾಶಿವ ನಗರದ ಬಂಗಲೆಯನ್ನೋ.? ಕೋಡಿಹಳ್ಳಿ ಎಂಬ ರೈತ ಮುಖಂಡ ರೈತ ಚಳುವಳಿ ನಿಲ್ಲಿಸಲು ರಾಕೇಶ್ ಟಿಕಾಯತ್ ಸೂಚನೆಯಂತೆ 35 ಕೋಟಿ ಮೊತ್ತದ ಡೀಲ್ ಮಾಡಿಕೊಂಡಿದ್ದು ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು.

ಟಿಕಾಯತ್ ಅಂತವರ ನಡೆಗಳನ್ನು ಡಿಕೆಶಿ ಸಮರ್ಥಿಸುತ್ತಾರೆ. ಡಿಕೆಶಿ ಅವರಿಗೆ ಅಕ್ರಮಿಗಳನ್ನು ಕಂಡರೆ ಅಷ್ಟೊಂದು ಅಕ್ಕರೆಯೇ? ಎಂದು ಬಿಜೆಪಿ ಸರಣಿ ಟ್ವೀಟ್‍ಗಳ ಮೂಲಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಲೆಳೆದಿದೆ.