- ಸಾಮಾಜಿಕ-ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆ ಕುರಿತು ಬಿಜೆಪಿ ಕಿಡಿ
- ಆತುರಾತುರವಾಗಿ ಸರ್ಕಾರ ಸಮೀಕ್ಷೆ ನಡೆಸುತ್ತದೆ
- ಸಾಮಾಜಿಕ ನ್ಯಾಯ ನೀಡುವ ಬದ್ಧತೆ ಕಾಂಗ್ರೆಸ್‌ನಿಗಿಂತ ಹೆಚ್ಚು ಬಿಜೆಪಿ ಪಕ್ಷಕ್ಕಿದೆ ಎಂದ ಬಿ.ವೈ. ವಿಜಯೇಂದ್ರ (BJP slams about caste survey)
Bengaluru: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆ(caste survey) ಕುರಿತು ರಾಜಕೀಯ ವಾತಾವರಣ ಮತ್ತೊಮ್ಮೆ ಕಾವೇರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B.Y. Vijayendra) ಅವರು ಸರಕಾರದ ವಿರುದ್ಧ ತೀವ್ರ ಟೀಕೆ ನಡೆಸಿದ್ದು, “ಸರ್ಕಾರ ಪೂರ್ವ ಸಿದ್ಧತೆಗಳಿಲ್ಲದೆ, ರಾಜಕೀಯ ಒತ್ತಡಕ್ಕೆ ಮಣಿದು ಸಮೀಕ್ಷೆ ನಡೆಸುತ್ತಿದೆ” ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, “ಈ ಸಮೀಕ್ಷೆ ಸಂಪೂರ್ಣ ಗೊಂದಲದಿಂದ ಕೂಡಿದೆ. ಆಯೋಗವು ಯಾವ ರೀತಿಯ ಪೂರ್ವತಯಾರಿ ಇಲ್ಲದೆ,
ಯಾರದೋ ಒತ್ತಡಕ್ಕೆ ಮಣಿದು ಕೆಲಸ ಕೈಗೆತ್ತಿಕೊಂಡಿದೆ. ಪ್ರಶ್ನಾವಳಿಯಲ್ಲಿ ಸೇರಿಸಿರುವ ಕೆಲವು ಪ್ರಶ್ನೆಗಳು ಅಸಂಬಂಧಿತ ಹಾಗೂ ಅವೈಜ್ಞಾನಿಕವಾಗಿವೆ,” ಎಂದು ಹೇಳಿದರು.
ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D.K. Shivakumar) ತಾವೇ ಪ್ರಶ್ನಾವಳಿಯ ಕೆಲ ಪ್ರಶ್ನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಕೂಡ ಅವರು ಇಲ್ಲಿ ಹೇಳಿದ್ದಾರೆ.

ಸರ್ಕಾರ ದಿನಕ್ಕೊಂದು ನಿಲುವು ಬದಲಾಯಿಸುತ್ತಿದೆ.
ಸ್ವತಃ ಡಿಸಿಎಂ ಅವರು 60 ಪ್ರಶ್ನೆಗಳಲ್ಲಿ ಹಲವರಿಗೆ ಉತ್ತರಿಸಲು ಕಷ್ಟವಾಗಿದೆ ಎಂದಿದ್ದಾರೆ. ಹೀಗಿರುವಾಗ ಸಾಮಾನ್ಯ ನಾಗರಿಕರು ಹೇಗೆ ಸಮರ್ಪಕವಾಗಿ ಉತ್ತರಿಸಬಲ್ಲರು ಎಂದು ಈ ಹಿಂದೆಯೇ ಹೇಳಿದ್ದಾರೆ.
ಅಲ್ಲಿಗೆ ಅವರಿಗೆ ಕಷ್ಟವೆನಿಸಿರುವ ಸಮೀಕ್ಷೆ ಸಾಮಾನ್ಯರ ಪಾಲಿಗೆ ನುಂಗಲಾರದ ತುತ್ತಾಗಿದೆ. ಈ ಸಮೀಕ್ಷೆಯಿಂದ ಶಿಕ್ಷಕರಿಗೂ ತೊಂದರೆ ಉಂಟಾಗಿದೆ.
ಶಿಕ್ಷಕರು ತಮ್ಮ ಸೇವಾ ಹೊಣೆಗಾರಿಕೆಯಿಂದ ಹೊರತಾಗಿ ಸಮೀಕ್ಷೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಮಯದ ಅಡಚಣೆ ಉಂಟಾಗಿದೆ. ಅವರಿಗೂ ಕುಟುಂಬವಿದೆ, ಹೊಣೆಗಾರಿಕೆಗಳಿವೆ.
ಇಂತಹ ರೀತಿಯಲ್ಲಿ ಅವರನ್ನು ಒತ್ತಡಕ್ಕೆ ಒಳಪಡಿಸುವುದು ಸರಿಯಲ್ಲ,ಎಂದು ಹೇಳಿದ್ದಾರೆ.
ಇನ್ನು ಕೆಲವೆಡೆ ವಿಕಲಚೇತನರನ್ನು ಸಹ ಸಮೀಕ್ಷೆ ಕಾರ್ಯದಲ್ಲಿ ಬಳಸಿಕೊಂಡಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. ಇದು ಮಾನವೀಯ ಮೌಲ್ಯಗಳಿಗೂ ವಿರುದ್ಧ.
ಹಾಸನದ ಬೇಲೂರಿನಲ್ಲಿ ಸಮೀಕ್ಷೆ ವೇಳೆ ನಾಯಿ ಕಚ್ಚಿದ ಘಟನೆ ನಡೆದಿದೆ. ಹಲವು ಸ್ಥಳಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಗಾಯಗಳಾಗಿವೆ. ಇಂತಹ ಘಟನೆಗಳು ಸಮೀಕ್ಷೆ ನಡೆಸುವ ರೀತಿಯ ಬಗ್ಗೆ ಪ್ರಶ್ನೆ ಎತ್ತುತ್ತವೆ,
ಎಂದು ಹೇಳಿದರು. ಕೆಲ ಬಿಜೆಪಿ ನಾಯಕರು ಸರ್ಕಾರದ ಉದ್ದೇಶದ ಮೇಲೆಯೂ ಶಂಕೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಇದು ವೈಜ್ಞಾನಿಕ ಸಮೀಕ್ಷೆ ಅಲ್ಲ, ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿರುವ ಕೆಲಸ.
ಸರ್ಕಾರ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದೆ, ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ(CM Siddaramaiah) ಯಾವಾಗಲೂ ಬಿಜೆಪಿಯನ್ನು ಹಿಂದುಳಿದ ವರ್ಗಗಳ ವಿರುದ್ಧದ ಪಕ್ಷವೆಂದು ಚಿತ್ರಿಸಲು
ಇದನ್ನು ಓದಿ : ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೀಡಿದ್ದ ಗಡುವು ವಿಸ್ತರಣೆ : ರಾಜ್ಯದಾದ್ಯಂತ ಶಾಲಾ ವೇಳಾಪಟ್ಟಿಯಲ್ಲೂ ಬದಲಾವಣೆ
ಪ್ರಯತ್ನಿಸುತ್ತಾರೆ. ಆದರೆ ನಿಜವಾಗಿ ಸಮಾಜದ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡುವ ಬದ್ಧತೆ ಕಾಂಗ್ರೆಸ್‌ನಿಗಿಂತ ಹೆಚ್ಚು ಬಿಜೆಪಿ ಪಕ್ಷಕ್ಕಿದೆ ಎಂದು ಅವರು ಹೇಳಿದ್ದಾರೆ. (BJP slams about caste survey)