New Delhi : ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣದಲ್ಲಿ ವಿಫಲವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (BJP Slams Aravind Kejrival) ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಬಿಜೆಪಿ ಸಂಸದ ಹಾಗೂ ದೆಹಲಿ ಘಟಕದ ಮಾಜಿ ಮುಖ್ಯಸ್ಥ ಮನೋಜ್ ತಿವಾರಿ ಮಾತನಾಡಿ,
“ದೀಪಾವಳಿಗೂ ಮುನ್ನ ದೆಹಲಿ ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಟ್ಟ ತೀವ್ರವಾಗಿ ಕೆಟ್ಟಿತ್ತು. ದೀಪಾವಳಿ ಹಬ್ಬದ ನಂತರ ವಾಯು ಗುಣಮಟ್ಟ ಸುಧಾರಿಸಿದೆ.
ದೆಹಲಿಯಲ್ಲಿನ ಮಾಲಿನ್ಯಕ್ಕೆ ದೀಪಾವಳಿಯನ್ನು ದೂಷಿಸಬಾರದು. ದೀಪಾವಳಿಗೂ ಮುನ್ನ AQI 330 ಇತ್ತು ಮತ್ತು ಅಕ್ಟೋಬರ್ 26ರಂದು ಬೆಳಗ್ಗೆ ದೀಪಾವಳಿಯ ನಂತರ 306 ಆಗಿದೆ.
ಇದು ಹಸಿರು ಪಟಾಕಿ ಸಿಡಿಸುವುದರಿಂದ ಆಗುವ ಪ್ರಯೋಜನವಾಗಿದೆ. ಹಾಗಾಗಿ ದೀಪಾವಳಿಯನ್ನು ದೂಷಿಸುತ್ತಿರುವವರು ಇನ್ನು ಮುಂದೆ ಮಾಲಿನ್ಯವು ಉಲ್ಬಣಗೊಳ್ಳಬಹುದೇ ಎಂದು ಚಿಂತಿಸಬೇಕು. ಇದನ್ನು ದೀಪಾವಳಿಯಂದು ದೂಷಿಸಬೇಡಿ” ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/bombay-highcourt-verdict/
ಮತ್ತೊಂದೆಡೆ ಪಶ್ಚಿಮ ದೆಹಲಿ ಬಿಜೆಪಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ “ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾದ ಕೇಜ್ರಿವಾಲ್ ರಾಜೀನಾಮೆ ನೀಡಬೇಕು. ಅರವಿಂದ್ ಜೀ, ಮಾಲಿನ್ಯದ ಬಗ್ಗೆ ನಿಮ್ಮ ಪೇಯ್ಡ್ ನ್ಯೂಸ್ ಮುಗಿದಿದ್ದರೆ, ಅದರ ಬಗ್ಗೆಯೂ ಏನಾದರೂ ಹೇಳಿ.
ನೀವು ಪ್ರತಿದಿನ ಇಷ್ಟೊಂದು ಸುಳ್ಳುಗಳನ್ನು ಏಕೆ ಹೇಳುತ್ತಿದ್ದೀರಿ? ಮಾಲಿನ್ಯಕ್ಕೆ ಪರಿಹಾರವಿಲ್ಲದಿದ್ದರೆ, ಸಿಎಂ ಸ್ಥಾನವನ್ನು ಬಿಟ್ಟುಬಿಡಿ. ದೆಹಲಿಯಲ್ಲಿ ಯಾರೂ ಪಟಾಕಿಗಳನ್ನು ಸುಡಲಿಲ್ಲ. ದೆಹಲಿಯಲ್ಲಿನ ಮಾಲಿನ್ಯಕ್ಕೆ ದೀಪಾವಳಿ ಕಾರಣವಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಕೇಜ್ರಿವಾಲ್ ದೆಹಲಿಯಲ್ಲಿ ಯಾವುದೇ ಪರಿಹಾರವನ್ನು ನೀಡಲು ವಿಫಲರಾಗಿದ್ದಾರೆ. ಅವರ ಇಮೇಜ್ ಉಳಿಸಲು ಅವರು ಹಿಂದೂಗಳು ಮತ್ತು ಪಟಾಕಿಗಳನ್ನು ದೂಷಿಸುತ್ತಿದ್ದಾರೆ.
ಕೇಜ್ರಿವಾಲ್ ಮಾದರಿ ಮೋಸ ಮತ್ತು ವಂಚನೆಯಾಗಿದೆ” ಎಂದು ಸಿಂಗ್ (BJP Slams Aravind Kejrival) ಟ್ವೀಟ್(Tweet) ಮಾಡಿದ್ದಾರೆ.
https://youtu.be/lLC_P0d_2kQ ಮಾರುಕಟ್ಟೆಗೆ ಕೃತಕ ಮಾಂಸ ! Watch out meat lovers!
ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ದ ಪ್ರಕಾರ, 0 ಮತ್ತು 50 ರ ನಡುವಿನ AQI ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತ್ಯಂತ ಕಳಪೆ’ ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
- ಮಹೇಶ್.ಪಿ.ಎಚ್