Karnataka : ರಾಜ್ಯದ ಎಟಿಎಂ ಸರ್ಕಾರದಲ್ಲಿ ವರುಣಾದ ನಿರುದ್ಯೋಗಿ ಶ್ಯಾಡೋ ಸಿಎಂ ಯತೀಂದ್ರ ಸಿದ್ದರಾಮಯ್ಯರ ಹಸ್ತಕ್ಷೇಪ ಮಿತಿ ಮೀರಿದೆ (BJP slams Congress) ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ

ವಿರುದ್ದ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಒಂದೇ ಹುದ್ದೆಗೆ ಹಲವು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರ ನೀಡುವುದು, ಕಾರ್ಯವಾದ ಬಳಿಕ ವ್ಯವಹಾರ
ಕುದುರದಿದ್ದಲ್ಲಿ, ಆದೇಶವನ್ನು ಹಿಂಪಡೆಯುವುದು! ಹೀಗೆ ಹಲವಾರು ಅಕ್ರಮಗಳನ್ನು ಮುಖ್ಯಮಂತ್ರಿ ಕಚೇರಿ ಮೂಲಕ ರಾಜಾರೋಷವಾಗಿ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಇಷ್ಟು ಸಾಲದ್ದಕ್ಕೆ,
ತನಗೊಂದು ಸಾಂವಿಧಾನಿಕ ಹುದ್ದೆ ಕಬಳಿಸಿಕೊಂಡು, ತನ್ನ ಅಕ್ರಮ ದಂಧೆಗಳಿಗೆ ಸಕ್ರಮದ ಲೇಬಲ್ ಅಂಟಿಸುವ ಬಗ್ಗೆ ಗಾಢವಾಗಿ ಸ್ಕೆಚ್ ಹಾಕಿದ್ದಾರೆ. ನಾಮಕಾವಸ್ಥೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನ
ಇದನ್ನು ಓದಿ: ದುಡಿಯಲು ಸಮರ್ಥ ಇರುವ ಪತ್ನಿ ವಿಚ್ಚೇದಿತ ಪತಿಯಿಂದ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ; ಕರ್ನಾಟಕ ಹೈಕೋರ್ಟ್ ತೀರ್ಪು
ಶ್ಯಾಡೋ ಸಿಎಂ ಮಾಡಿ, ಅಧಿಕಾರವನ್ನು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರಿಗೆ ಕೊಟ್ಟಿದ್ದಾರೆ. ಪರಿಣಾಮ, ರಾಜ್ಯದಲ್ಲಿ ಸಚಿವರು, ಶಾಸಕರ ಸಂಬಂಧಿಕರ ದರ್ಬಾರ್ ಜೋರಾಗಿದೆ. ಮಂಡ್ಯ ಉಸ್ತುವಾರಿ ಸಚಿವ
ಚೆಲುವರಾಯಸ್ವಾಮಿ ವರ್ಗಾವಣೆ ದಂಧೆಯಲ್ಲಿ ಯಶಸ್ವಿಯಾಗಿ ಅಣ್ಣನ ಮಗನನ್ನ DHO ಆಗಿ ನೇಮಕ ಮಾಡಿದ್ದಾರೆ. ಇದರಲ್ಲಿ (BJP slams Congress) ಯತೀಂದ್ರರ
ಪಾಲೆಷ್ಟು, ಸುರ್ಜೆವಾಲಾರ ಪಾಲೆಷ್ಟು? ಎಂದು ಪ್ರಶ್ನಿಸಿದೆ.
ಇನ್ನೊಂದು ಟ್ವೀಟ್ನಲ್ಲಿ, ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ*:
ತರಕಾರಿ:
ಟೊಮೆಟೊ – ₹120-130
ಬೀನ್ಸ್ – ₹120
ಕ್ಯಾರೆಟ್ – ₹110
ಹಸಿಮೆಣಸಿನಕಾಯಿ – ₹170

ವರ್ಗಾವಣೆ ತರಹೇವಾರಿ:
ಮುಖ್ಯ ಎಂಜಿನಿಯರ್: ₹5 ಕೋಟಿ
ಜಿಲ್ಲಾ ಆರೋಗ್ಯಾಧಿಕಾರಿ: ₹2 ಕೋಟಿ
ಲೆಕ್ಕಾಧಿಕಾರಿ: ₹ 2.25 ಕೋಟಿ
ತಹಶೀಲ್ದಾರ್: ₹1.25 ಕೋಟಿ
ಪೊಲೀಸ್ ಸಬ್ ಇನ್ಸ್ಪೆಕ್ಟರ್:
ಬೆಂಗಳೂರು ನಗರ – ₹1.5 ಕೋಟಿ
ಜಿಲ್ಲಾ ಕೇಂದ್ರ – ₹80 ಲಕ್ಷ
ತಾಲ್ಲೂಕು ಕೇಂದ್ರ: ₹40 ಲಕ್ಷ ಇದೆಲ್ಲದರೊಂದಿಗೆ ಕೇಂದ್ರದ ಸುರ್ಜೇವಾಲಾ ಕಮಿಷನ್ ಪ್ರತ್ಯೇಕ ಎಂದು ಬಿಜೆಪಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.