• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

3 ಸೇನಾಪಡೆಗಳ ಮುಖ್ಯಸ್ಥರು ‘ಅಗ್ನಿಪಥ್’ ಯೋಜನೆ ಸ್ವಾಗತಿಸಿದ್ದಾರೆ, ನೀವೇಕೆ ವಿರೋಧಿಸುತ್ತಿದ್ದೀರಿ? : ಬಿಜೆಪಿ

Mohan Shetty by Mohan Shetty
in ರಾಜಕೀಯ
BJP
0
SHARES
0
VIEWS
Share on FacebookShare on Twitter

ಕಾಂಗ್ರೆಸ್ಸಿಗರೇ, 3 ಸೇನಾ ಪಡೆಗಳ ಮುಖ್ಯಸ್ಥರು ಅಗ್ನಿಪಥ್ ಯೋಜನೆ(Agnipath Yojana) ಸ್ವಾಗತಿಸಿದ್ದಾರೆ, ನೀವೇಕೆ ದೇಶದ ವಿರುದ್ಧ ಹೋಗುತ್ತಿದ್ದೀರಿ? ಅಗ್ನಿಪಥ್ ಯೋಜನೆಯ ಮೂಲಕ ಸೇವೆ ಸಲ್ಲಿಸಿ ಹೊರಬರುವ ಅಗ್ನಿವೀರರಿಗೆ(Agniveers) ದೇಶಕ್ಕೆ ದೇಶವೇ ಉದ್ಯೋಗಾವಕಾಶಗಳ ಭರವಸೆ ನೀಡುತ್ತಿದೆ. ಭಾರತದ ದೈತ್ಯ ಉದ್ಯಮ ಸಂಸ್ಥೆಗಳು, ಕಾರ್ಪೋರೇಟ್ ಕಂಪನಿಗಳು ಉದ್ಯೋಗದ ಭರವಸೆ ನೀಡಿವೆ. ಆದರೂ, ಕಾಂಗ್ರೆಸ್(Congress) ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿರತವಾಗಿದೆ ಎಂದು ಬಿಜೆಪಿ(BJP) ಹೇಳಿದೆ.

Narendra modi

ಈ ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ, ಸೇನೆಗೆ ಸೇರಲಿಚ್ಛಿಸುವವರು ಅಗ್ನಿಪಥ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿಲ್ಲ ಎಂದು ಪ್ರಮಾಣಪತ್ರ ನೀಡುವುದು ಕಡ್ಡಾಯ ಎಂದು ಸೇನಾ ವ್ಯವಹಾರಗಳ ಮುಖ್ಯಸ್ಥ ಅನಿಲ್ ಪುರಿ ಹೇಳಿದ್ದಾರೆ. ಯುವಜನತೆಯನ್ನು ಪ್ರತಿಭಟನೆ, ಗಲಭೆ, ದೊಂಬಿಯ ಹಾದಿ ಹಿಡಿಸಿದ ಕಾಂಗ್ರೆಸ್ ಇವರೆಲ್ಲರ ಅವಕಾಶ ಕಿತ್ತುಕೊಂಡಿದೆ. ಅಗ್ನಿವೀರರಿಂದ ಸೇನೆಯ ಸಾಮಥ್ರ್ಯ ಕುಂದುವುದಿಲ್ಲ. ಬದಲಾಗಿ ತಾರುಣ್ಯ ತುಂಬುತ್ತದೆ.

ಇದನ್ನೂ ಓದಿ : https://vijayatimes.com/maharashtra-political-collision/

ಅಗ್ನಿವೀರ್ ಎಂಬ ಪದನಾಮವೇ ಶೌರ್ಯ ಪ್ರಶಸ್ತಿಗೆ ಅರ್ಹತೆಯಾಗಬಲ್ಲದು. ಅಗ್ನಿಪಥ್ ಯೋಜನೆಯ ಮೂಲಕ ಸೇನಾಪಡೆಗೆ ಅತ್ಯುತ್ತಮ ಪ್ರತಿಭೆಗಳು ಸೇರಿಕೊಳ್ಳಲಿದ್ದಾರೆ. ಸೇನೆಯನ್ನು ದುರ್ಬಲವಾಗಿಡುವುದು ಕಾಂಗ್ರೆಸ್ ಆಶಯವೇ?
ಸೇನೆಯ ಆಗುಹೋಗು, ಅನಿವಾರ್ಯತೆಯ ಬಗ್ಗೆ ಮಾತನಾಡಬೇಕಿರುವುದು ಸೇನಾ ಮುಖ್ಯಸ್ಥರೇ ಹೊರತು ಕಾಂಗ್ರೆಸ್ ನಾಯಕರಲ್ಲ. ಅಗ್ನಿಪಥ್ ಯೋಜನೆಯಿಂದ ಸೇನೆಯ ರೆಜಿಮೆಂಟ್ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲವೆಂದು ಅನಿಲ್ ಪುರಿ ಸ್ಪಷ್ಟನೆ ನೀಡಿದ್ದಾರೆ.

bjp

ಕಾಂಗ್ರೆಸ್ಸಿಗರೇ, ಸೇನೆಯ ವಿಚಾರದಲ್ಲಿ ರಾಜಕೀಯವೇಕೆ? ಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ದೇಶದ ಯುವಶಕ್ತಿಗೆ ಪ್ರೇರಣೆ ನೀಡಬಲ್ಲ ಏಕೈಕ ಮಾರ್ಗವಿದು ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Tags: bjpCongressIndiapoliticalpolitics

Related News

ಪ್ರಮುಖ ಸುದ್ದಿ

200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ, ವಿದ್ಯುತ್ ದರ ಏರಿಕೆ ; ಇದರ ಹೊರೆ ಯಾರಿಗೆ..?!

June 3, 2023
ಪ್ರಮುಖ ಸುದ್ದಿ

ಕೇಂದ್ರದಿಂದ ಬರುವ ಅಕ್ಕಿಯನ್ನು ತಮ್ಮ ಹೆಸರಿನ ಚೀಲದಲ್ಲಿ ಹಾಕಿ ವಿತರಿಸುವುದರಲ್ಲಿ ಸಿದ್ದುಗೆ 5 ವರ್ಷಗಳ ಅನುಭವವಿದೆ – ಬಿಜೆಪಿ ವ್ಯಂಗ್ಯ

June 3, 2023
ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?
ಪ್ರಮುಖ ಸುದ್ದಿ

ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?

June 3, 2023
ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ; ಯಾರು ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..?
ಪ್ರಮುಖ ಸುದ್ದಿ

ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ; ಯಾರು ಅರ್ಜಿ ಸಲ್ಲಿಸಬೇಕು..? ಅರ್ಹತೆಗಳೇನು..?

June 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.