Visit Channel

ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು `ಅಮೃತ ಮಹೋತ್ಸವʼದ ಜೊತೆ ಸಮೀಕರಿಸಲು ಸಾಧ್ಯವೇ ? : ಬಿಜೆಪಿ

BJP Politics

ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶದ ಹಬ್ಬ.

ಇಂಥಹ ಕಾರ್ಯಕ್ರಮದ ಜೊತೆಗೆ ಸಿದ್ದರಾಮೋತ್ಸವ ಮಾಡಿ ಎಂದು ಸಲಹೆ ನೀಡಿದ್ಯಾರು? ದೇಶ ಸ್ವಾತಂತ್ರ್ಯಗೊಂಡ ವರ್ಷದಲ್ಲಿ ಸಿದ್ದರಾಮಯ್ಯ( siddaramaiah) ಹುಟ್ಟಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮೋತ್ಸವವನ್ನು ಅಮೃತ ಮಹೋತ್ಸವವಾಗಿಸಲು ಸಾಧ್ಯವೇ? ಇದು ಕಾಗೆಯನ್ನು ರಾಜಹಂಸವಾಗಿಸುವ ಪ್ರಯತ್ನ. ಕಾಂಗ್ರೆಸ್(Congress) ನಾಯಕರ ಬೌದ್ಧಿಕ ದಾರಿದ್ರ್ಯಕ್ಕೆ ಶೇಮ್ ಶೇಮ್.

BJP Slams congress siddaramaiah

ದೇಶದ ಸ್ವಾತಂತ್ರ್ಯಕ್ಕಾಗಲಿ, ಯಾವುದೇ ಜನಪರ ಹೋರಾಟದಲ್ಲಾಗಲಿ ಭಾಗಿಯಾಗದ ಶುದ್ಧ ಅಧಿಕಾರದಾಹಿಯ ಜನ್ಮದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಜೊತೆಗೆ ಸಮೀಕರಿಸಲು ಹೊರಟವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ಬಿಜೆಪಿ, ಸಂಸದ ಡಿಕೆ ಸುರೇಶ್ ಅವರು, ಸಿದ್ದರಾಮೋತ್ಸವ ಯಾರಿಗೋ ನಾಯಕತ್ವ ನೀಡಿದಂತೆ ಬಿಂಬಿತವಾಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮೋತ್ಸವ ಕಾಂಗ್ರೆಸ್ ನಿರ್ನಾಮಕ್ಕೆ ಮುನ್ನುಡಿ ಬರೆಯಲಿದೆ.

ಈ ಹಿಂದೆ ಜೆಡಿಎಸ್(JDS) ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹೊರಟಿದ್ದರು. ಎಷ್ಟೇ ನಿರ್ಬಂಧ ವಿಧಿಸಿದ್ದರೂ ಲಕ್ಷ್ಮಣ ರೇಖೆ ದಾಟಿ ಹೊರ ಬಂದರು. ಈಗ ಕಾಂಗ್ರೆಸ್ ಲಕ್ಷ್ಮಣ ರೇಖೆ ದಾಟಲು ಸಿದ್ದರಾಮೋತ್ಸವ ಆಯೋಜಿಸುತ್ತಿದೆಯೇ? ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಸಿದ್ದರಾಮಯ್ಯ ಹೆಜ್ಜೆ ಇಟ್ಟಿದ್ದಾರೆಯೇ? ಎಂದು ಲೇವಡಿ ಮಾಡಿದೆ.

https://vijayatimes.com/psuedo-belief-in-snake-nature/

ಜನ್ಮ ದಿನಾಂಕವೇ ಗೊತ್ತಿಲ್ಲ ಎನ್ನುತ್ತಿರುವ ಸಿದ್ದರಾಮಯ್ಯ ಅವರು 75 ನೇ ಜನ್ಮದಿನೋತ್ಸವಕ್ಕೆ ಒಪ್ಪಿಗೆ ಸೂಚಿಸಿದ್ದೇ ಚೋದ್ಯ. ಅಂದಾಜಿಗೆ ಗುಂಡು ಹೊಡೆದು ಅಮೃತ ಮಹೋತ್ಸವ ಮಾಡಲು ಸಿದ್ದರಾಮಯ್ಯ ಭಜನಾ ಮಂಡಳಿ ಹೊರಟಿದೆ.
BJP Slams congress siddaramaiah

ಇದು ಕಾಂಗ್ರೆಸ್ ಹೈಕಮಾಂಡನ್ನು ಬೆದರಿಸುವ ತಂತ್ರವೇ? ಕಾಂಗ್ರೆಸ್ ಕಟ್ಟಾಳುವಾಗಿದ್ದರೂ 2 ವರ್ಷ ಪೂರೈಸಿದ್ದಕ್ಕಾಗಿ ವೈಯಕ್ತಿಕ ವಿಜ್ರಂಭಣೆಗೆ ಹೊರಟ ಮಾಜಿ ಸಿಎಂ ಬಂಗಾರಪ್ಪರನ್ನು ಮನೆಗೆ ಕಳುಹಿಸಲಾಗಿತ್ತು. ಅದೇ ಪಕ್ಷವಿಂದು ವ್ಯಕ್ತಿ ವಿಜ್ರಂಭಣೆಯ ಕಾರ್ಯಕ್ರಮವನ್ನು ಪಕ್ಷದ ವೇದಿಕೆಯಲ್ಲಿ ನಡೆಸಿ ಎನ್ನುತ್ತಿದೆ.

ಇದು ಬೌದ್ಧಿಕ ದಾರಿದ್ರ್ಯವೋ, ಅಧಃಪತನಗೊಂಡ ನಾಯಕತ್ವವೋ? ಎಂದು ವ್ಯಂಗ್ಯವಾಡಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.