ಪಂಚೆ ಬಿದ್ದ ನಂತರ ಮಾನ ಕಾಪಾಡಿದ್ದೇ ಚಡ್ಡಿ..! ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ! ತುಂಡುಬಟ್ಟೆ ಇದ್ದರೆ ಸಾಕು ಮಾನ ಮುಚ್ಚೋಕೆ!

ಅದನ್ನೇ ಸುಟ್ಟು ಏನು ಸಾಧಿಸಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ? ಎಂದು ರಾಜ್ಯ ಬಿಜೆಪಿ(State BJP) ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯನವರ(Siddaramaiah) ಚಡ್ಡಿ ಸುಡುವ ಹೇಳಿಕೆಗೆ ವ್ಯಂಗ್ಯವಾಡಿದೆ. ಸಿದ್ದರಾಮಯ್ಯನವರೇ, ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಕ್ಕೆ ಮುನ್ನ ನಿಮ್ಮ ಕಾರ್ಯಕರ್ತರಿಗೆ ಒಂದು ಎಚ್ಚರಿಕೆ ನೀಡಿ. ನಲಪಾಡ್(Nalpad) ಅವನಂಥಹ ಬೀದಿ ರೌಡಿಗಳು ಬೇರೆಯವರ ಚಡ್ಡಿ ಕದ್ದು ಸುಡುವ ಅಪಾಯವಿದೆ.
ಚಡ್ಡಿ ಸುಡುವುದು ಸಾಂಕೇತಿಕ ಪ್ರತಿಭಟನೆ ಎಂದು ವ್ಯಾಖ್ಯಾನಿಸುವ ಸಿದ್ದರಾಮಯ್ಯ ಅವರೇ, ಜವಾಹರ್ ಲಾಲ್ ನೆಹರೂ ಅವರೂ ಚಡ್ಡಿ ತೊಟ್ಟಿದ್ದು ಗೊತ್ತೇ? ಹಾಗಾದರೆ ನಿಮ್ಮ ಪ್ರತಿಭಟನೆಯ ವ್ಯಾಪ್ತಿಯಲ್ಲಿ ನೆಹರೂ ಅವರೂ ಇದ್ದಾರಾ? ಎಂದು ಪ್ರಶ್ನಿಸಿದೆ. ಸಿದ್ದರಾಮಯ್ಯನವರೇ, ಚಡ್ಡಿ ಮಾನದ ಸಂಕೇತ. ಶ್ರಮಿಕ ವರ್ಗದ ಸಂಕೇತ. ನೀವು ಚಡ್ಡಿ ಸುಡುವ ಅಭಿಯಾನ ನಡೆಸಿ ನಿಮ್ಮ ಮಾನವನ್ನು ನೀವೇ ಸುಟ್ಟುಕೊಳ್ಳಲು ಹೊರಟಿದ್ದೀರಿ. ದೇಶಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರಿಗೆ ಈಗ ಉದ್ಯೋಗವಿಲ್ಲ.

ಚಡ್ಡಿ ಸುಡುವ ಅಭಿಯಾನ ನಡೆಸಿ ಮತ್ತೆ ದೇಶದ ಜನರ ಮುಂದೆ ಬೆತ್ತಲಾಗಲು ಹೊರಟಿದ್ದಾರಷ್ಟೇ! ಎಂದು ಬಿಜೆಪಿ ಕಾಂಗ್ರೆಸ್ ಆರಂಭಿಸಿರುವ ಚಡ್ಡಿ ಸುಡುವ ಚಳುವಳಿಯನ್ನು ವಿರೋಧಿಸಿದೆ.