New Delhi (ಜು.04) ಕಳೆದ ಕೆಲ ದಿನಗಳಿಂದ ಬಿಜೆಪಿ ರಾಜ್ಯಧ್ಯಕ್ಷರ (BJP state president Announcement) ಆಯ್ಕೆ ಕುರಿತು ಭಾರಿ ಕುತೂಹಲ ಮೂಡಿಸುತ್ತಿದೆ ಇದೀಗ ಬಿಜೆಪಿ ರಾಜ್ಯಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೀಗ
ಅಂತ್ಯಗೊಂಡಿದೆ. ನೂತನ ರಾಜ್ಯಾಧ್ಯಕ್ಷರನ್ನು ಕರ್ನಾಟಕ (Karnataka) ರಾಜ್ಯವೊಂದು ಬಿಟ್ಟು ತೆಲಂಗಾಣ (Telangana), ಪಂಜಾಬ್ (Punjab) ಸೇರಿದಂತೆ 5 ರಾಜ್ಯಗಳಿಗೆ ಘೋಷಣೆ ಮಾಡಲಾಗಿದೆ.
ಕರ್ನಾಟಕದಲ್ಲಿ ರಾಜ್ಯಧ್ಯಕ್ಷರ ಆಯ್ಕೆಯು ಪ್ರತಿಪಕ್ಷ ನಾಯಕನ ಆಯ್ಕೆ ಬಳಿಕ ನಡೆಯಲಿದೆ. ಬಿಜೆಪಿಯ ಜಿ ಕಿಶನ್ ರೆಡ್ಡಿ (G.Kishan Reddy) ತೆಲಂಗಾಣ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನು ಆಂಧ್ರ ಪ್ರದೇಶದ (Andhra Pradesh) ನೂತನ ರಾಜ್ಯಾಧ್ಯಕ್ಷರಾಗಿ ಪುರಂದೇಶ್ವರಿ ಆಯ್ಕೆಯಾಗಿದ್ದರೆ ಮತ್ತು ಬಿಜೆಪಿ ಸಾರಥ್ಯವು ಪಂಜಾಬ್ ನಲ್ಲಿ ಸುನಿಲ್ ಜಖಾರ್ (Sunil Jakhar) ಹೆಗಲೇರಿದೆ.
ಇನ್ನು ಬಬುಲಾ ಮರಂಡಿ ನೂತನ ಬಿಜೆಪಿ ರಾಜ್ಯಾಧ್ಕ್ಯಕ್ಷರಾಗಿ (BJP state president Announcement) ಜಾರ್ಖಂಡ್‌ನಲ್ಲಿ ಆಯ್ಕೆಯಾಗಿದ್ದಾರೆ.

ನಾಲ್ಕು ರಾಜ್ಯಗಳ ನೂತನ ಬಿಜೆಪಿ ರಾಜ್ಯಾಧ್ಯಕ್ಷರು:
ತೆಲಂಗಾಣ: ಕಿಶನ್ ರೆಡ್ಡಿ
ಪಂಜಾಬ್: ಸುನಿಲ್ ಜಖಾರ್
ಜಾರ್ಖಂಡ್: ಬಬುಲಾ ಮರಂಡಿ
ಆಂಧ್ರ ಪ್ರದೇಶ:ಪುರಂದೇಶ್ವರಿ
ಇನ್ನು ಬಿಜೆಪಿ ಪಕ್ಷವು ಮುಂಬರುವ ಚುನಾವಣೆ ದೃಷ್ಟಿಯಿಂದ ಕೇಂದ್ರ ಸಚಿವರಾಗಿದ್ದ ಜಿ ಕಿಶನ್ ರೆಡ್ಡಿಯನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ತೆಲಂಗಾಣ ಬಿಜೆಪಿ ಸಾರಥ್ಯವನ್ನು
ಜಿ ಕಿಶನ್ ರೆಡ್ಡಿಗೆ ನೀಡಲಾಗಿದೆ. ಇನ್ನು ನವಜೋತ್ ಸಿಂಗ್ ಸಿಧುಗಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುನಿಲ್ ಜಖಾರ್ ಪಟ್ಟ ತ್ಯಾಗ ಮಾಡಬೇಕಾಯಿತು. ಹೀಗಾಗಿ ಸುನಿಲ್ ಜಖಾರ್ ಸತತ ಅಪಮಾನಗಳಿಂದ
ಬೇಸತ್ತು ಬಿಜೆಪಿ ಸೇರಿಕೊಂಡಿದ್ದರು. ಇದೀಗ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನವನ್ನು ಸುನಿಲ್ ಜಖಾರ್‌ಗೆ ನೀಡಲಾಗಿದೆ. ಈ ಮೂಲಕ ಹೈಕಮಾಂಡ್ ಪಂಜಾಬ್‌ನಲ್ಲಿ ಪಕ್ಷವನ್ನು ಬಲಪಡಿಸಲು ನಿರ್ಧರಿಸಿದೆ.

ಆಂಧ್ರ ಪ್ರದೇಶದಲ್ಲಿ ರಾಜ್ಯಾಧ್ಯಕ್ಷ ಪಟ್ಟವು ಬಿಜೆಪಿ ನಾಯಕಿಯಾಗಿರುವ ಪುರಂದೇಶ್ವರಿಗೆ ಒಲಿದಿದೆ. ಆಂಧ್ರದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡಿರುವ ಮಾಜಿ ಕೇಂದ್ರ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.
ಮತ್ತು ಬಬುಲಾ ಮರಂಡಿಗೆ ಜಾರ್ಖಂಡ್ (Jarkhand) ರಾಜ್ಯಧ್ಯಕ್ಷ ಸ್ಥಾನ ನೀಡಲಾಗಿದೆ.ಇವರು ಜಾರ್ಖಂಡ್‌ನಲ್ಲಿ ವಿರೋಧ ಪಕ್ಷದ ನಾಯಕ ಆಗಿದ್ದರು. ವಿಪಕ್ಷ ನಾಯಕ ಜವಾಬ್ದಾರಿಯನ್ನು ಜಾರ್ಖಂಡ್‌ನಲ್ಲಿ
ಸಮರ್ಥವಾಗಿ ನಿಭಾಯಿಸಿರುವ ಬಬುಲಾ ಮರಂಡಿಗೆ ಇದೀಗ ಪಕ್ಷ ಬಲಪಡಿಸಲು ಮಹತ್ತರ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಕರ್ನಾಟಕದಲ್ಲಿ ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಅವರ ರಾಜ್ಯಾಧ್ಯಕ್ಷ ಅವಧಿ ಅಂತ್ಯಗೊಂಡಿದೆ. ನೂತನ ರಾಜ್ಯಧ್ಯಕ್ಷರ ಆಯ್ಕೆ ಕಸರತ್ತು ಇದೀಗ ನಡೆಯುತ್ತಿದೆ.
ಈ ನಡುವೆ ಕೆಲ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ರೇಸ್‌ನಲ್ಲಿ ಶೋಭ ಕರಂದ್ಲಾಜೆ (Shobha Karandlaje), ಅಶ್ವತ್ಥ್ ನಾರಾಯಣ್ (Ashwath Narayan), , ಅರಗ ಜ್ಞಾನೇಂದ್ರ
(Araga Jnanendra) ಸೇರಿದಂತೆ ಅನೇಕರ ಹೆಸರುಗಳು ಕೇಳಿಬರುತ್ತಿದೆ. ಇದರಲ್ಲಿ ನೂತನ ರಾಜ್ಯಧ್ಯಕ್ಷರಾಗಿ ಈಗಾಗಲೇ ಕೇಂದ್ರದ ರಾಜ್ಯ ಖಾತೆ ಸಚಿವರಾಗಿರುವ ಶೋಭಾ ಕರಂದ್ಲಾಜೆ
ಆಯ್ಕೆಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಈ ಕುರಿತು ಬಿಜೆಪಿ ನಾಯಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯರು ಯಾಕೆ ರಾಜ್ಯಾಧ್ಯಕ್ಷರಾಗಬಾರದು ಎಂದು ಪ್ರಶ್ನಿಸಿದ್ದಾರೆ.ಮಹಿಳೆಯರು ಎಲ್ಲಾ
ಕಡೆಯಲ್ಲೂ ಇರಬೇಕು. ಯಾರೇ ರಾಜ್ಯಧ್ಯಕ್ಷರಾದರೂ ಕೂಡ ನಾವು ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಜೊಲ್ಲೆ ಹೇಳಿದ್ದಾರೆ. ಹೈಕಮಾಂಡ್ ರಾಜ್ಯಧ್ಯಕ್ಷರ ಆಯ್ಕೆಯನ್ನು ಮಾಡಲಿದೆ.
ಆಯ್ಕೆ ಪ್ರಕ್ರಿಯೆಗಳು ನಡೆಯತ್ತಿದೆ ಎಂದು ಜೊಲ್ಲೆ ಹೇಳಿದ್ದಾರೆ.
ರಶ್ಮಿತಾ ಅನೀಶ್